ಕಕ್ಕೇರಾ: ನಿರುದ್ಯೋಗಿಗಳಿಗೆ ಹಾಗೂ ಸ್ವ-ಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೂರಕವಾದ ದಿನ್ ದಯಾಳ್ ಅಂತ್ಯೋದಯ ಜೀವನೋಪಾಯ ಅಭಿಯಾನ ಯೋಜನೆಗೆ ಎರಡು ವರ್ಷಗಳಿಂದಲೂ ಅನುದಾನಕ್ಕೆ ಬರ ಬಿದ್ದಿದೆ.
Advertisement
ಕಕ್ಕೇರಾ ಪುರಸಭೆ ಹಾಗೂ ಜಿಲ್ಲೆಯ ಪುರಸಭೆ, ನಗರಸಭೆಯಲ್ಲಿ ಅನುದಾನದ ಸಮಸ್ಯೆಯಾಗಿದೆ ಎನ್ನಲಾಗಿದೆ. ಕಕ್ಕೇರಾ ಪುರಸಭೆಗೆ 2019-20ನೇ ಸಾಲಿಗಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇನ್ನು ವಿಚಿತ್ರ ಎಂದರೆ ಕಳೆದ ವರ್ಷದ ಅನುದಾನವೇ ಬಂದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದವರಿಗೆ ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್‌ನಿಂದ ಸಾಲವೂ ಸಿಗುತ್ತಿಲ್ಲ. ಎರಡು ವರ್ಷ ಸಾಲಕ್ಕಾಗಿ ಕಾಯ್ದು ಬೇಸತ್ತಿದ್ದೇವೆ ಎಂದು ನಿರುದ್ಯೋಗಿಗಳು ನೋವು ತೋಡಿಕೊಂಡಿದ್ದಾರೆ.
ಪಿಯುಸಿ. ಐಟಿಐ ಹಾಗೂ ಪದವಿ ವ್ಯಾಸಂಗ) ಎಸ್‌ಎಸ್-ಎಸ್‌ಟಿ ಹಾಗೂ ಸಾಮಾನ್ಯ ಎಲ್ಲ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಮತ್ತು ವಿವಿಧ ತರಬೇತಿಗೆ ಪ್ರೋತ್ಸಾಹಿಸಬೇಕು. ಅಲ್ಲದೇ ಪ್ರಸಕ್ತ ಸಾಲಿಗೆ 19 ನೂತನ ಸ್ವ-ಸಹಾಯ ಸಂಘ ರಚಿಸುವ ಗುರಿ ಇದ್ದು. ಪ್ರತಿ ಮಹಿಳಾ ಸಂಘಕ್ಕೆ 10 ಸಾವಿರ ರೂ. ಆವರ್ತಕ ನಿಧಿ ವಿತರಿಸಲಾಗುತ್ತಿದೆ. 2019-20ನೇ ಸಾಲಿಗೆ ತರಬೇತಿ ಗುರಿ 107, ವೈಯಕ್ತಿಕ ಸಾಲ ಸೌಲಭ್ಯ 14, ಸ್ವ-ಸಹಾಯ ಸಂಘಗಳಿಗೆ ಸಾಲ-11 ಸೇರಿದಂತೆ ಒಟ್ಟು 132 ಗುರಿ ಇವೆ. ಅಲ್ಲದೇ ಕಳೆದ 2018-19ನೇ ಸಾಲಿನಲ್ಲಿ ತರಬೇತಿಗೆ-26, ವೈಯಕ್ತಿಕ ಸಾಲ-5, ಸ್ವ-ಸಹಾಯ ಸಂಘ-1 ಹೀಗೇ ಗುರಿ ನಿಗದಿಪಡಿಸಲಾಗಿದೆ. ಇದನ್ನು ಗಮನಿಸಿದರೆ ಪ್ರಸಕ್ತ ಸಾಲಿನಲ್ಲಿ ಗುರಿ ಹೆಚ್ಚಿಸಲಾಗಿದೆ. 2016ರಿಂದ ಈವರೆಗೂ 15 ಮಹಿಳಾ ಸ್ವ-ಸಹಾಯ ಸಂಘ ರಚನೆ ಮಾಡಲಾಗಿದೆ ಎಂದು ಸಮುದಾಯ ಸಂಘಟಕ ಶ್ಯಾಮಸುಂದರ ಪಾಣಿಬಾತೆ ತಿಳಿಸಿದ್ದಾರೆ.