Advertisement

ಬಿಲ್ವಿದ್ಯೆಯಲ್ಲಿ ಬಸಮ್ಮ ರಾಷ್ಟ್ರಮಟ್ಟಕ್ಕೆ ಆಯ್ಕೆ

05:10 PM Dec 02, 2019 | Naveen |

ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ:
ಬಿಲ್ವಿದ್ಯೆ ಕೇವಲ ಪುರುಷರಿಗೆ ಅಷ್ಟೇ ಸೀಮಿತವಲ್ಲ. ಮಹಿಳೆಯರು ಕೂಡ ಅದನ್ನು ಪರಿಪೂರ್ಣ ಕಲಿತು ಸಾಧನೆ ಮಾಡಬಹುದು ಎಂಬುದಕ್ಕೆ ವಿದ್ಯಾರ್ಥಿ ಬಸಮ್ಮ ಶಿಕಾರಿ ಸಾಕ್ಷಿ. ದೇವಾಪುರ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಬಸಮ್ಮ ಶಿಕಾರಿ ಬಾಲಕಿಯರ ಬಿಲ್ವಿದ್ಯೆ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

Advertisement

ಶಿರಸಿ ತಾಲೂಕು ದೇವನಹಳ್ಳಿಯಲ್ಲಿ ವನವಾಸಿ ಕಲ್ಯಾಣ ಕರ್ನಾಟಕ ವತಿಯಂದ ಇತ್ತೀಚೆಗೆ ನಡೆದ ಬಿಲ್ವಿದ್ಯೆ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. 9ನೇ ತರಗತಿ ಅಭ್ಯಸಿಸುತ್ತಿರುವ ಬಸಮ್ಮಗೆ ಬಿಲ್ವಿದ್ಯೆ ಕಲಿಯಬೇಕು ಎಂಬ ಆಸೆ ಇತ್ತು. ಹೀಗಾಗಿ ವನವಾಸಿ ಕಲ್ಯಾಣ ಸಂಸ್ಥೆಯಿಂದ ಮಹಾರಾಷ್ಟ್ರ, ಭೂಪಾಲದಲ್ಲಿ 15 ದಿನಗಳ ಕಾಲ ನಡೆದ ಬಿಲ್ವಿದ್ಯೆ ತರಬೇತಿಯಲ್ಲಿ ಪಾಲ್ಗೊಂಡಿದ್ದಳು. ಅಲ್ಲಿ ತರಬೇತಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲು ವನವಾಸಿ ಕಲ್ಯಾಣ ಸಂಸ್ಥೆಯೇ ಸ್ಫೂರ್ತಿ ಎನ್ನುತ್ತಾಳೆ ಬಸಮ್ಮ.

ಡಿ. 27ರಂದು ಉತ್ತರಪ್ರದೇಶದ ಕಾನ್ಪು ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಬಿಲ್ವಿದ್ಯೆಯಲ್ಲಿ ಭಾಗವಹಿಸಿ ಅಲ್ಲಿಯೂ ಉತ್ತಮ ಸಾಧನೆ ಮಾಡಬೇಕು ಎಂಬ ಛಲ ದೃಢ ಸಂಕಲ್ಪ ಹೊಂದಿದ್ದಾಳೆ. ದ್ರೋಣಾಚಾರ್ಯ, ಏಕಲವ್ಯ, ಅರ್ಜುನ ಬಿಲ್ವಿದ್ಯೆ ಪಾಂಡಿತ್ಯ ಆದರ್ಶವಾಗಿಸಿಕೊಂಡು ಆಗಾಧವಾದ ಸಾಧನೆ ಮಾಡಲು ಹೊರಟ್ಟಿದ್ದು, ಈಕೆಗೆ ತಂದೆ-ತಾಯಿ ಹಾಗೂ ಶಿಕ್ಷಕರ ಪ್ರೋತ್ಸಾಹವೂ ಇದೆ. ಬಸಮ್ಮ ಸಾಧನೆ ದೇವಾಪುರ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಅಲ್ಲದೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಗ್ರಾಮದ ಕೀರ್ತಿ ಹೆಚ್ಚಿಸಿದಂತಾಗಿದೆ.

ವನವಾಸಿ ಕಲ್ಯಾಣ ಸಂಸ್ಥೆ ರಾಜ್ಯದ ಹಲವಾರು ಕಡೆ ಬಿಲ್ವಿದ್ಯೆ ಕ್ರೀಡಾ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ತರಬೇತಿ ನೀಡಿ ಪ್ರೋತ್ಸಾಯಿಸುವ ಕಾರ್ಯ ಮಾಡಿಕೊಂಡು ಬರುತ್ತಿದೆ. ಹೀಗಾಗಿ ಈ ಸಂಸ್ಥೆಯಿಂದ ಬಸಮ್ಮ ಶಿಕಾರಿ ಈಗ ಬಿಲ್ವಿದ್ಯೆಯಲ್ಲಿ ಮಿಂಚಲು ಕಾರಣವಾಗಿದೆ. ಬಿಲ್ವಿದ್ಯೆ ಅಲ್ಲದೆ ಇನ್ನು ಅನೇಕ ಕ್ರೀಡೆಗಳಾದ ಖೋಖೊ, ಕಬ್ಬಡ್ಡಿ, ಓಟ ಹೀಗೆ ವಿವಿಧ ಕ್ರೀಡೆಯ ಆಸಕ್ತಿ ಅವಳಿಗಿದೆ. ಜತೆಗೆ ಬಿಲ್ವಿದ್ಯೆ ಕ್ರೀಡೆಯೇ ನೆಚ್ಚಿ ಹೀಗಾ ಸಾಧನೆ ದಾರಿ ಹಿಡಿದಿದ್ದಾಳೆ. ಹೀಗಾಗಿ ಬಿಲ್ವಿದ್ಯೆಯಲ್ಲಿ ತನ್ನ ಚಾಣಕ್ಯೆದೊಂದಿಗೆ ಸಾಧನೆ ಮಾಡಲು ಪ್ರಯತ್ನಿಸುತ್ತಿರುವುದಕ್ಕೆ ಶಾಲಾ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಲ್ವಿದ್ಯೆ ಒಂದೇ ಅಲ್ಲ. ಓಟ, ಕಬಡ್ಡಿ, ಖೋಖೊ ಕ್ರೀಡೆಯಲ್ಲಿಯೂ ಆಸಕ್ತಿ ಇದೆ. ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡಿದ್ದೇವೆ. ಅಲ್ಲದೆ ಸ್ವಯಂ ಪ್ರಯತ್ನದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದು ಸಂತಸ ತಂದಿದೆ. ಇನ್ನು ಸಾಧನೆ ಮಾಡಲಿ.
ಪ್ರಕಾಶ ಪಾಟೀಲ,
ದೈಹಿಕ ಶಿಕ್ಷಕರು ಪ್ರೌಢಶಾಲೆ ದೇವಾಪುರ

Advertisement

ನನಗೆ ಪಾಲಕರ ಸಹಕಾರ, ದೈಹಿಕ ಶಿಕ್ಷಕರ ಪ್ರೋತ್ಸಾಹದಿಂದ ಬಿಲ್ವಿದ್ಯೆ ಕ್ರೀಡಾ ತರಬೇತಿ ಪಡೆದುಕೊಂಡೆ. ವನವಾಸಿ ಕಲ್ಯಾಣ ಸಂಸ್ಥೆ ವಿವಿಧ ಕಡೆ ನಡೆಸಿದ ತರಬೇತಿಯಲ್ಲಿ ಭಾಗಿಯಾಗಿ ಪರಿಪೂರ್ಣ ಹೊಂದಿ ಈಗ ಆ ವಿದ್ಯೆಯಲ್ಲಿ ಸಾಧನೆ ಮಾಡಲು ಸರಳವಾಯಿತು. ಇನ್ನು ಸಾಧನೆ ಮಾಡಬೇಕು ಎಂಬ ಹಂಬಲ ಇದೆ.
ಬಸಮ್ಮ ಶಿಕಾರಿ,
9ನೇ ತರಗತಿ ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next