Advertisement

ಬೆಂಗಳೂರು ಉದ್ಯಮಿ ಜತೆ ನಟಿ ಕಾಜಲ್‌ ಅಗರ್ವಾಲ್‌ ನಿಶ್ಚಿತಾರ್ಥ?

09:58 AM Aug 20, 2020 | Nagendra Trasi |

ಹೈದರಾಬಾದ್‌: ಲಾಕ್‌ಡೌನ್‌ ಸಂದರ್ಭದಲ್ಲಿ ಸಿನಿ ತಾರೆಗಳು ಸರದಿ ಪ್ರಕಾರ ಮದುವೆ ಮೂಡ್‌ಗೆ ಜಾರುತ್ತಿದ್ದಾರೆ. ನಟ ರಾಣಾ ದಗ್ಗುಭಾಟಿ ವಿವಾಹದ ಬೆನ್ನಲ್ಲೇ ಬಹುಭಾಷಾ ನಟಿ ಕಾಜಲ್‌ ಅಗರ್ವಾಲ್‌ ನಿಶ್ಚಿತಾರ್ಥದ ಸುದ್ದಿ ಎಲ್ಲೆಡೆ ಹಬ್ಬಿದೆ. ಬೆಂಗಳೂರಿನ ಉದ್ಯಮಿ ಕೋಟ್ಯಾಧೀಶ ಗೌತಮ್‌ ಅವರೊಂದಿಗೆ ಕಾಜಲ್‌ ಅಗರ್ವಾಲ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಿದೆ.

Advertisement

ನಿಶ್ಚಿತಾರ್ಥಕ್ಕೆ ಕಾಜಲ್‌ರ ಆಪ್ತ  ಸ್ನೇಹಿತ, ನಟ ಬಲ್ಲಂಕೊಂಡ ಸಾಯಿ ಶ್ರೀನಿವಾಸ್‌ ಸಾಕ್ಷಿಯಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ನಿಶ್ಚಿತಾರ್ಥದ ಕುರಿತ ಯಾವುದೇ ಚಿತ್ರಗಳೂ ಬಹಿರಂಗವಾಗಿಲ್ಲ. ಲಾಕ್‌ ಡೌನ್‌ ತೆರವಿನ ನಂತರ ಮಗಧೀರ ಖ್ಯಾತಿಯ ನಟಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಕಾಜಲ್‌ ಕುಟುಂಬ ಮಾತ್ರ ನಿಶ್ಚಿತಾರ್ಥದ ಸುದ್ದಿಯನ್ನು ಅಲ್ಲಗಳೆದಿದೆ.

ಕಾಜಲ್ ಅಗರ್ವಾಲ್ ವಿವಾಹಕ್ಕೆ ಸಂಬಂಧಿಸಿದ ಸುದ್ದಿ ಇದೇ ಮೊದಲ ಬಾರಿ ಹರಿದಾಡಿಲ್ಲ. ನಟಿ ಸಾಮಾಜಿಕ ಜಾಲತಾಣ ದೀರ್ಘಕಾಲದವರೆಗೆ ಯಾವುದೇ ಪೋಸ್ಟ್ ಅಪ್ ಡೇಟ್ ಆಗದಿರುವುದನ್ನು ಗಮಿಸಿದ್ದ ಅಭಿಮಾನಿಗಳು  ಮದುವೆಯಾಗಿರುವ ಅನುಮಾನ ವ್ಯಕ್ತಪಡಿಸಿದ್ದರು.

ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದ ಕೊನೆಯ ಸಿನಿಮಾ ಜಯಂ ರವಿ ಜತೆ ನಟಿಸಿದ್ದ ಕೋಮಾಲಿ ತಮಿಳು ಸಿನಿಮಾದಲ್ಲಿ. ಇನ್ನು ಶಂಕರ್ ನಿರ್ದೇಶನದ, ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಇಂಡಿಯನ್ 2 ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಟಿಸಬೇಕಿದ್ದು, ಚಿತ್ರೀಕರಣ ಪುನರಾರಂಭವಾಗಲು ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಬೃಂದಾ ಗೋಪಾಲ್ ನಿರ್ದೇಶನದ “ಹೇ ಸಿನಾಮಿಕಾ” ಸಿನಿಮಾದಲ್ಲಿ ಅಗರ್ವಾಲ್ ಹೀರೋಯಿನ್ ಆಗಿದ್ದು ಚಿತ್ರೀಕರಣ ಆರಂಭಕ್ಕೆ ಸಿದ್ದತೆ ನಡೆಯತ್ತಿದೆ ಎಂದು ವರದಿ ತಿಳಿಸಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next