Advertisement

ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಾಜಲ್ ಅಗರ್ವಾಲ್!  ಮದುವೆಗೆ ಡೇಟ್ ಫಿಕ್ಸ್

03:55 PM Oct 06, 2020 | sudhir |

ಹೈದರಾಬಾದ್ : ಟಾಲಿವುಡ್ ಬೆಡಗಿ ಕಾಜಲ್ ಅಗರ್ವಾಲ್ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ಕೊಟ್ಟಿದ್ದಾರೆ ಅದೇನಪ್ಪಾ ಅಂತೀರಾ… ಬಹು ದಿನಗಳಿಂದ ಗುಸು ಗುಸು ಸುದ್ದಿಯಾಗುತಿದ್ದ ಮದುವೆ ವಿಚಾರ ಹೌದು.. ಕಾಜಲ್ ಅಗರ್ವಾಲ್ ಮದುವೆಯಾಗುತ್ತಿದ್ದಾರೆ ಈ ಕುರಿತು ಸ್ವತಃ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಅಭಿಮಾನಿಗಳಲ್ಲಿ ಇದ್ದ ಅನುಮಾನಕ್ಕೆ ತೆರೆ ಎಳೆದಿದ್ದಾರೆ.

Advertisement

ಬೆಂಗಳೂರು ಮೂಲದ ಉದ್ಯಮಿ, ಇಂಟಿರಿಯರ್​ ಡಿಸೈನರ್​, ಟೆಕ್​ ಮತ್ತು ವಿನ್ಯಾಸ ಉತ್ಸಾಹಿ ಗೌತಮ್​ ಕಿಚ್ಲು ಎಂಬುವವರನ್ನು ಕಾಜಲ್ ವರಿಸಲಿದ್ದಾರೆ. ಅಂದಹಾಗೆ ಅಕ್ಟೋಬರ್ ೩೦ರಂದು ಈ ಜೋಡಿ ಮುಂಬೈಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಹಸೆಮಣೆ ಏರಲಿದ್ದಾರೆ.

ಕಾಜಲ್ ತಮ್ಮ ಟ್ವಿಟರ್ ನಲ್ಲಿ ನೀವೆಲ್ಲರೂ ನಮ್ಮನ್ನು ಉತ್ಸಾಹದಿಂದ ಹುರಿದುಂಬಿಸುತ್ತೀರಿ ಎಂಬುದು ತಿಳಿದಿದೆ. ಇಷ್ಟು ವರ್ಷಗಳ ಕಾಲ ನನಗೆ ನೀವೆಲ್ಲ ತೋರಿದ ಪ್ರೀತಿಗೆ ಧನ್ಯವಾದಗಳು. ಈಗ ಹೊಸ ಪಯಣಕ್ಕೆ ನಾವು ನಿಮ್ಮ ಆಶೀರ್ವಾದ ಬಯಸುತ್ತಿದ್ದೇವೆ’ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಕೋವಿಡ್ ಕಾರಣದಿಂದಾಗಿ ಸರಳವಾಗಿ ಮದುವೆ ಮಾಡಿಕೊಳ್ಳುವ ವಿಚಾರವನ್ನು ಹೇಳಿಕೊಂಡಿದ್ದಾರೆ ಎರಡೂ ಕುಟುಂಬದ ಸದಸ್ಯರು ಸೇರಿಕೊಂಡು ಈ ಸಮಾರಂಭವನ್ನು ಸರಳವಾಗಿ ನಡೆಸುವುದಾಗಿ ಹೇಳಿದ್ದಾರೆ.

Advertisement

ಈಗಾಗಲೇ ಹಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಕಾಜಲ್ ಮದುವೆಯ ಬಳಿಕವೂ ಸಿನಿಮಾಗಳಲ್ಲಿ ನಟಿಸಲಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next