Advertisement
ಕೈವಾರದ ಶ್ರೀಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ನಡೆದ ಗುರುಪೂಜಾ ಸಮಾರಂಭದಲ್ಲಿ ಮಾತನಾಡಿ, ಕೈವಾರ ತಾತಯ್ಯನವರು ಪರತತ್ವ ಸಾಧನೆಯನ್ನು ಮಾಡಿರುವ ಸದ್ಗುರು. ಭಕ್ತಿ, ಕರ್ಮ, ಯೋಗವನ್ನು ಸೇರಿಸಿ ಕೈವಾರ ತಾತಯ್ಯನವರು ಬೋಧನೆ ಮಾಡಿದ್ದಾರೆ. ಬಾಹ್ಯ ಸಾಧನೆಗಳಿಗಿಂತಲೂ ಅಂತರಂಗದ ಸಾಧನೆ ಶ್ರೇಷ್ಠವಾದದ್ದು. ಮಾನವರಲ್ಲಿ ಭೇದವನ್ನು ಮಾಡದೆ, ಮುಕ್ತಿಯ ಪಥದೆಡೆಗೆ ಸಾಗುವ ಸಾಧನೆಯನ್ನು ತಾತಯ್ಯನವರು ಬೋಧಿಸಿದ್ದಾರೆ.
Related Articles
Advertisement
ಸಂಗೀತ ಸಮರ್ಪಣೆ: ಸಂಗೀತ ಕಛೇರಿಗಳಲ್ಲಿ ಆನೂರು ಅನಂತಕೃಷ್ಣಶರ್ಮ ನೇತೃತ್ವದಲ್ಲಿ ತಾಳವಾದ್ಯ ಕಛೇರಿ, ಮಂಜುಳ ಜಗದೀಶ್, ಇ.ರಾಮಕೃಷ್ಣಾಚಾರ್, ಕೆ.ಎಸ್.ನಾಗಭೂಷಣಯ್ಯ, ಪದ್ಮ ಚಿಂತಾಮಣಿ, ಚಿಂತಲಪಲ್ಲಿ ಕಿಶೋರ್ ಕುಮಾರ್ ಹಾಗೂ ಸೋಮಶೇಖರ್, ವಿಜಯವಾಡದ ಹರಿತಾ ಸಹೋದರಿಯರು, ಮಾಯಾಬಾಲಚಂದ್ರ, ಅಶ್ವಿನಿ ಮೋಹನ್, ಹೊಸೂರು ವೇಣು ತಂಡದವರು ಸಂಗೀತ ಸಮರ್ಪಣೆ ಮಾಡಿದರು.
ವಿಶೇಷ ಕಾರ್ಯಕ್ರಮವಾಗಿ ವಾಸವಿ ಸಹೋದರಿಯರು, ಮರಕತವಲ್ಲಿ, ಅಂಜಲಿ ಶ್ರೀರಾಮ್, ಚೈತನ್ಯ ಸಹೋದರರಿಂದ ಗಾಯನ, ದೀಲಿಪ್ ಮತ್ತು ಇಳಾ ಸಂಗೀತಾರವರಿಂದ ಪಿಟೀಲು ವಾದನ, ಚೇತನಾ ಸುಂದರೇಶ್ ಹಾಗೂ ಸಾಯಿತೇಜಸ್ವಿನಿ ತಂಡದವರಿಂದ ಭರತನಾಟ್ಯ, ತತ್ತನೂರು ಸಹೋದರರಿಂದ ನಾದಸ್ವರ ಕಾರ್ಯಕ್ರಮಗಳು ನಡೆಯಿತು.
ಹಿರಿಯ ಚಿಂತಕ, ಮಲ್ಲಾರ ಪತ್ರಿಕೆ ಸಂಪಾದಕ ಡಾ.ಬಾಬು ಕೃಷ್ಣಮೂರ್ತಿ, ಡಾ.ಜೋಸುಲ ಸದಾನಂದಶಾಸ್ತ್ರೀ, ಲೇಖಕಿ ಅಂಬಿಕಾ ಅನಂತ್ ಅವರನ್ನು ಸನ್ಮಾನಿಸಲಾಯಿತು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಕೈವಾರ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾ ಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಬಾಗೇಪಲ್ಲಿ ನರಸಿಂಹಪ್ಪ, ಬಿ.ಎಸ್. ಶ್ರೀನಿವಾಸ್, ಡಾ.ಎಂ.ವಿ.ಶ್ರೀನಿವಾಸ್, ಗಣೇಶ್ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್ ಉಪಸ್ಥಿತರಿದ್ದರು.