Advertisement

ಕೈವಾರ: ಅನ್ನದಾನ ಭವನ ಉದ್ಘಾಟನೆ

07:06 AM Jun 15, 2020 | Lakshmi GovindaRaj |

ಚಿಂತಾಮಣಿ: ಶ್ರೀ ಕ್ಷೇತ್ರ ಕೈವಾರದ ಯೋಗಿನಾರೇಯಣ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅನ್ನದಾನ ದಾಸೋಹ ಭವನದ ಉದ್ಘಾಟನೆಯನ್ನು ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಮ್‌ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಬರುವ ಭಕ್ತರಿಗೆ ದಾಸೋಹ ಭವನದ ಅಗತ್ಯತೆ ಇತ್ತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.

Advertisement

ತಾತಯ್ಯನವರ ಪ್ರೇರಣೆಯಂತೆ ಟ್ರಸ್ಟ್‌ ಸಮಿತಿಯು ನಿರ್ಣಯ ತೆಗೆದುಕೊಂಡು ಅನ್ನದಾನ ಭವನ  ವನ್ನು ಭಕ್ತರಿಗೆ ಸಮರ್ಪಣೆ ಮಾಡಲಾಗುತ್ತಿದೆ. ನೂತನ ತಂತ್ರಜ್ಞಾನವಾದ ಪ್ರಿಕ್ಯಾಸ್ಟ್‌ ವಿಧಾನದಲ್ಲಿ ಈ ಕಟ್ಟಡ ನಿರ್ಮಿಸಲಾಗಿ ದೆ. ಸುಮಾರು 2000 ಭಕ್ತರು ಒಟ್ಟಿಗೆ ಕುಳಿತು  ಪ್ರಸಾದ ಸ್ವೀಕರಿಸಬಹುದು. ಮುಂದಿನ ದಿನಗಳಲ್ಲಿ ಭಕ್ತರಿ ಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದರು.

ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಾತಃಕಾಲ ಘಂಟನಾದ, ಸುಪ್ರಭಾತ, ಗೋಪೂಜೆಯೊಂದಿಗೆ ಭವನದ ಉದ್ಘಾಟನಾ ಕಾರ್ಯಕ್ರಮವು ಆರಂಭವಾ ಯಿತು. ನಂತರ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಅನ್ನದಾನ ಭವನಕ್ಕೆ ಕರೆತರಲಾಯಿತು. ನಂತರ ಗಂಗಪೂಜೆ, ಗಣಪತಿ ಪೂಜೆ, ಕಲಶಾರಾಧನೆ,  ವಾಸ್ತುಹೋಮ, ಬಲಿಹರಣ, ಗಣಹೋಮ ಇನ್ನಿತರ ಪೂಜೆ ಸಮರ್ಪಿಸಲಾಯಿತು.

ತಾತಯ್ಯನವರ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ ಸಮರ್ಪಿಸಿ, ಷೋಡಶೋಪಚಾರ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಲಾಯಿತು.  ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್‌ ಅವರಿಂದ ಸಾಮೂಹಿಕ ನಾಮಸಂಕೀರ್ತನೆ ಹಮ್ಮಿಕೊಳ್ಳ ಲಾಗಿತ್ತು. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಎಂ. ಆರ್‌.ಜಯರಾಮ್‌  ದಂಪತಿ, ಟ್ರಸ್ಟ್‌ನ ಉಪಾಧ್ಯಕ್ಷ ಜೆ. ವಿಭಾಕರರೆಡ್ಡಿ, ಖಜಾಂಚಿ ಆರ್‌.ಪಿ.ಎಂ.ಸತ್ಯನಾರಾಯಣ್‌, ಸದಸ್ಯರಾದ ವೇಣುಗೋಪಾಲ್‌, ಕೆ.ನರಸಿಂಹಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next