Advertisement

“ಕಫ್ತಾನ್‌’ಕೂಲ್‌: ಫ್ಯಾಷನ್‌ ಲೋಕದ ಕಪ್ತಾನ!

06:00 AM Sep 05, 2018 | Team Udayavani |

ಕಫ್ತಾನ್‌ - ಇದು ಫ್ಯಾಷನ್‌ ಜಗತ್ತಿಗೆ ಹೊಸ ಪದವೇನಲ್ಲ. ಪರ್ಷಿಯನ್‌ ಮೂಲದ ಈ ಪದಕ್ಕೆ, ಉದ್ದನೆಯ ದೊಗಲೆ ಬಟ್ಟೆ ಎಂಬ ಅರ್ಥವಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ದಿರಿಸನ್ನು ಪುರುಷರು ಮತ್ತು ಮಹಿಳೆಯರಿಬ್ಬರೂ ಧರಿಸುತ್ತಾರೆ. ಆದರೆ, ಇತ್ತೀಚೆಗೆ ಹೆಂಗಳೆಯರ ಕಫ್ತಾನ್‌ ಬಟ್ಟೆಗಳು ಬಹಳಷ್ಟು ಟ್ರೆಂಡ್‌ ಸೃಷ್ಟಿಸಿವೆ. ಉದ್ದ ತೋಳಿನ, ಗಂಟಿನವರೆಗೆ ಅಥವಾ ಕಾಲಿನ ತುದಿಯವರೆಗೆ ಇರುವ ಡ್ರೆಸ್‌ ಅನ್ನು ಬೀಚ್‌ ಔಟ್‌ಫಿಟ್‌ ಆಗಿಯೂ, ಮದುವೆ ಮುಂತಾದ ಸಮಾರಂಭಗಳಲ್ಲಿಯೂ ಧರಿಸಲಾಗುತ್ತದೆ.

Advertisement

1.    ಶಾರ್ಟ್‌ ಕಫ್ತಾನ್‌
ಇದು ಕಡಿಮೆ ಎತ್ತರವಿರುವ ಹಾಗೂ ಸ್ವಲ್ಪ ದಪ್ಪಗಿರುವ ಹುಡುಗಿಯರಿಗಾಗಿ ಇರುವ ಡ್ರೆಸ್‌ ಎಂದರೆ ತಪ್ಪಲ್ಲ. ಪ್ಯಾಂಟ್‌ ಅಥವಾ ಜೀನ್ಸ್‌ ಜೊತೆಗೆ ಇದನ್ನು ಧರಿಸಬಹುದು. ಕ್ಯಾಶ್ಯುವಲ್‌ ವೇರ್‌ನ ಭಾಗವಾಗಿರುವ ಈ ದಿರಿಸು, ಇತರೆ ಶಾರ್ಟ್‌ ಟಾಪ್‌ಗ್ಳಷ್ಟೇ ಉದ್ದವಿರುತ್ತದೆ. ಪ್ಲಾಟ್‌ಫಾರ್ಮ್ ಹೀಲ್ಸ್‌, ಹೈ ಹೀಲ್ಸ್‌ ಜೊತೆಗೆ ಧರಿಸಿದರೆ ಉತ್ತಮ.

2.    ಮಿಡಿ ಕಫ್ತಾನ್‌
ಈ ಬಗೆಯ ಉಡುಪನ್ನು ಬೇಸಿಗೆಯಲ್ಲಿ ಪ್ರವಾಸ ಹೋಗುವಾಗ ಧರಿಸಿದರೆ ಚೆನ್ನ. ಸೆಖೆಯಿಂದ ಮುಕ್ತಿ ಪಡೆಯಲು ಈ ಬಟ್ಟೆ ಸೂಕ್ತ. ಮಿಡಿ ಕಫ್ತಾನ್‌ ಬಟ್ಟೆಗಳು ಮೊಣಕಾಲ ಗಂಟಿನವರೆಗೆ ಉದ್ದವಿರುತ್ತವೆ. 

3.    ಫ‌ುಲ್‌ ಲೆಂತ್‌ ಕಫ್ತಾನ್‌
ಈ ಬಗೆಯ ಉಡುಪನ್ನು ಮ್ಯಾಕ್ಸಿ ಕಫ್ತಾನ್‌ ಎಂದೂ ಕರೆಯುತ್ತಾರೆ. ಗೌನ್‌ನಂತೆ ಉದ್ದವಾಗಿರುವ ಇದು, ಇಡೀ ದೇಹವನ್ನು ಕವರ್‌ ಮಾಡುತ್ತದೆ. ಅಗಲವಾದ ತುಂಬು ತೋಳಿರುವ ಈ ದಿರಿಸನ್ನು ಸಂಜೆ ಪಾರ್ಟಿಗಳಲ್ಲಿ ಧರಿಸಬಹುದು. ವಿವಿಧ ವಿನ್ಯಾಸ, ಹಾಗೂ ಕಸೂತಿ ಚಿತ್ತಾರ (ಎಂಬ್ರಾಯxರಿ) ಗಳಲ್ಲಿ ಲಭ್ಯವಿದ್ದು, ಬೆಲ್ಟ್ ಇರುವ ಕಫ್ತಾನಗಳೂ ಇವೆ. ನೀಳಕಾಯದವರಿಗೆ ಈ ಉಡುಪು ಚೆನ್ನಾಗಿ ಹೊಂದುತ್ತದೆ. 

4.    ಒನ್‌ ಶೋಲ್ಡರ್‌ ಕಫ್ತಾನ್‌ ಡ್ರೆಸ್‌
ಸ್ಟೈಲಿಶ್‌ ಲುಕ್‌ನ ಈ ಕಫ್ತಾನ್‌ ಡ್ರೆಸ್‌ನಲ್ಲಿ ಒಂದು ಕಡೆ ತುಂಬು ಸ್ಲಿàವ್ಸ್‌ ಇದ್ದರೆ, ಇನ್ನೊಂದು ಕಡೆ ಸ್ಲಿàವ್‌ಲೆಸ್‌ ವಿನ್ಯಾಸವಿರುತ್ತದೆ. ಪಾರ್ಟಿಗಳಲ್ಲಿ ಇದನ್ನು ಧರಿಸಿದರೆ ಗ್ಲಾಮರಸ್‌ ಆಗಿ ಕಾಣಬಹುದು.

Advertisement

5.    ಡೀಪ್‌ ನೆಕ್‌ ಕಫ್ತಾನ್‌ ಡ್ರೆಸ್‌
ಡೀಪ್‌ ನೆಕ್‌ ಪ್ಯಾಟರ್ನ್ ಅನ್ನು ಇಷ್ಟಪಡುವವರಿಗಾಗಿ ತಯಾರಿಸಿದ ಈ ಉಡುಪಿನ ಮುಖ್ಯ ಆಕರ್ಷಣೆಯೇ ಕುತ್ತಿಗೆಯ ಡಿಸೈನ್‌. ಸ್ವಲ್ಪ ಆಳದ ಡಿಸೈನ್‌ ಇರುವುದರಿಂದ ಈ ಉಡುಪು ಬೋಲ್ಡ್‌ ಲುಕ್‌ ನೀಡುತ್ತದೆ. ಗಾಢ ಬಣ್ಣದ ಡೀಪ್‌ನೆಕ್‌ ಕಫ್ತಾನ್‌ ಬಟ್ಟೆಗಳು ನಿಮ್ಮನ್ನು ಮತ್ತಷ್ಟು ಸ್ಟೈಲಿಶ್‌ ಆಗಿ ಬಿಂಬಿಸುತ್ತವೆ. 

6.    ಓವರ್‌ಸೈಝ್ ಮ್ಯಾಕ್ಸಿ ಕಫ್ತಾನ್‌ 
ದೇಹದ ಅಳತೆಗಿಂತ ತುಸು ಲೂಸ್‌ ಆಗಿರುವ ಬಟ್ಟೆಗಳನ್ನು ಕೆಲವರು ಇಷ್ಟಪಡುತ್ತಾರೆ. ನೀವೂ ಅಂಥವರಾದ್ರೆ, ಓವರ್‌ಸೈಝ್x ಮ್ಯಾಕ್ಸಿ ಕಫ್ತಾನ್‌ ಡ್ರೆಸ್‌ಅನ್ನು ಧರಿಸಬಹುದು. ಫ್ಲೋರ್‌ ಲೆಂತ್‌ (ನೆಲ ಮುಟ್ಟುವವರೆಗಿನ) ಹಾಗೂ ಒನ್‌ ಶೋಲ್ಡರ್‌ ಪ್ಯಾಟರ್ನ್ನ ಮ್ಯಾಕ್ಸಿ ಬಟ್ಟೆ ಸದ್ಯದ ಫ್ಯಾಶನ್‌ ಟ್ರೆಂಡ್‌.

7.    ಕಲರ್‌ಫ‌ುಲ್‌ ಸಿಲ್ಕ್ ಕಫ್ತಾನ್‌ ಡ್ರೆಸ್‌
ಕಲರ್‌ಫ‌ುಲ್‌ ಆಗಿ ಮಿಂಚಬೇಕು ಎನ್ನುವವರು, ಶಾರ್ಟ್‌ ಡ್ರೆಸ್‌ ಅನ್ನು ಇಷ್ಟಪಡುವವರು ಈ ವಿನ್ಯಾಸದ ಕಫ್ತಾನ್‌ ಡ್ರೆಸ್‌ ಅನ್ನು ಧರಿಸಬಹುದು. ಬಣ್ಣಬಣ್ಣದ ವಿನ್ಯಾಸವಿರುವುದರಿಂದ ಟ್ರೆಂಡಿ ಹಾಗೂ ಸ್ಟೈಲಿಶ್‌ ಆಗಿ ಕಾಣಿಸುತ್ತೀರಿ. 

ಮೆಸಪೊಟಾಮಿಯಾದಲ್ಲಿತ್ತು…
ಈ ವಿನ್ಯಾಸದ ಉಡುಪುಗಳು ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾದಿಂದ ಬಂದವು. ಕಫ್ತಾನ್‌ ಎಂಬುದು ಪರ್ಶಿಯನ್‌ ಭಾಷೆಯ ಪದ. ಅದಕ್ಕೆ ದೊಗಲೆಯಾಗಿರುವ, ಉದ್ದನೆಯ ಬಟ್ಟೆ ಎಂಬ ಅರ್ಥವಿದೆ. ಮೆಸಪಟೊಮಿಯಾ ನಾಗರಿಕತೆಯ ಕಾಲದಲ್ಲಿಯೂ ಈ ಬಗೆಯ ಉಡುಪು ಪ್ರಚಲಿತದಲ್ಲಿತ್ತು ಎನ್ನಲಾಗಿದೆ. 14-16ನೇ ಶತಮಾನದವರೆಗೆ ಆಳಿದ ಒಟ್ಟೋಮನ್‌ ಸುಲ್ತಾನರು  ಕೂಡ ಉದ್ದನೆಯ, ಅದ್ದೂರಿ ಕಸೂತಿ ಚಿತ್ತಾರಗಳಿದ್ದ ಕಫ್ತಾನ್‌ ಉಡುಪು ಧರಿಸುತ್ತಿದ್ದುದ್ದಕ್ಕೆ ಪುರಾವೆಗಳಿವೆ. ರೇಷ್ಮೆ, ಉಣ್ಣೆ, ಹತ್ತಿಯಿಂದ ತಯಾರಿಸಲ್ಪಡುತ್ತಿದ್ದ ಕಫ್ತಾನ್‌ ಬಟ್ಟೆಯನ್ನು, ಇರಾನ್‌, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾದ ಪುರುಷ ಮತ್ತು ಮಹಿಳೆಯರು ಬೇಸಿಗೆಯಲ್ಲಿ ಧರಿಸುತ್ತಿದ್ದರಂತೆ. 

Advertisement

Udayavani is now on Telegram. Click here to join our channel and stay updated with the latest news.

Next