Advertisement

ಕಡೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ

11:56 AM Apr 13, 2019 | Team Udayavani |

ಕಡೂರು: ತಾಲೂಕಿನಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದ್ದು, ಸಮಸ್ಯೆ
ಹೋಗಲಾಡಿಸಲು ದಿನವೊಂದಕ್ಕೆ ಸುಮಾರು 113 ಟ್ಯಾಂಕರ್‌ ನೀರನ್ನು
ಪೂರೈಸಲಾಗುತ್ತಿದೆ.

Advertisement

ತಾಲೂಕಿನಾದ್ಯಂತ ಈ ಬಾರಿ 16 ಗ್ರಾಮ ಪಂಚಾಯತ್‌ ವ್ಯಾಪ್ತಿಯ
ಸುಮಾರು 39 ಹಳ್ಳಿಗಳಿಗೆ ಪ್ರತಿನಿತ್ಯ ಟ್ಯಾಂಕರ್‌ ಮೂಲಕ ನೀರನ್ನು
ಪೂರೈಸುತ್ತಿದ್ದು, ಪ್ರತಿ ದಿನ 113 ಟ್ಯಾಂಕರ್‌ ನೀರು ನೀಡಲಾಗುತ್ತದೆ.

ಮತಿಘಟ್ಟ, ಹುಲಿಕೆರೆ, ವಿ. ಯರದಕೆರೆ, ಚೀಲನಹಳ್ಳಿ, ಬಾಣೂರು, ನಾಗೇನಹಳ್ಳಿ, ದೇವನೂರು, ಚಿಕ್ಕದೇವನೂರು, ಸಿಂಗಟಗೆರೆ, ಆಣೇಗೆರೆ, ನಾಗರಾಳು, ಕುಂಕಾನಾಡು, ಎಸ್‌.ಬಿದರೆ, ನಿಡಘಟ್ಟ, ಜೋಡಿಹೋಚಿಹಳ್ಳಿ ಮತ್ತು ಅಣ್ಣಿಗೆರೆ ಗ್ರಾಮ ಪಂಚಾಯತ್‌ನ 39 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ
ಸಮಸ್ಯೆ ಎದುರಾಗಿದೆ. ತಾಲೂಕಿನ ಗಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ
ಹೆಚ್ಚಿದ್ದು, 5,695 ಕುಟುಂಬಗಳಿಗೆ ತೀವ್ರವಾದ ಸಮಸ್ಯೆಯಾಗಿದೆ.

ಟಾಸ್ಕ್ಪೋರ್ಸ್‌ ಸಮಿತಿ ಅನುಮೋದನೆ ಪಡೆದು ಟ್ಯಾಂಕರ್‌ ಮೂಲಕ ನೀರನ್ನು ನೀಡಲಾಗುತ್ತಿದ್ದು. ಒಂದು ಟ್ಯಾಂಕರ್‌ಗೆ (4,000 ಸಾವಿರ ಲೀಟರ್‌) 1000 ರೂ, (5000 ಸಾವಿರ ಲೀಟರ್‌ ಟ್ಯಾಂಕರ್‌) 1200 ರೂ. ನೀಡಲಾಗುತ್ತಿದೆ. ಪ್ರತಿದಿನ 113ಕ್ಕೂ ಹೆಚ್ಚಿನ ಟ್ಯಾಂಕರ್‌ ಮೂಲಕ ನೀರನ್ನು ಸುಮಾರು 1.35 ಲಕ್ಷ ರೂ. ವೆಚ್ಚದಲ್ಲಿ ನೀಡಲಾಗುತ್ತಿದೆ.

ಗರ್ಜೆ ಗ್ರಾಮ ಪಂಚಾಯತ್‌ನ ಜಿ. ಮಾದಾಪುರ, ಸಿಂಗಟಗೆರೆ ಗ್ರಾಪಂ
ಹನುಮಂತಪುರ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಯಿಂದ
ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಕೊಳವೆ ಬಾವಿ
ಮಾಲೀಕರಿಗೆ ತಿಂಗಳಿಗೆ 15 ಸಾವಿರ ಗೌರವ ಧನ ನೀಡಲಾಗುತ್ತಿದೆ. ಜಾನುವಾರು ತೊಟ್ಟಿಗಳಿಗೆ ನೀರನ್ನು ಟ್ಯಾಂಕರ್‌ ಮೂಲಕ ನೀಡಲಾಗುತ್ತಿದೆ.

Advertisement

ಪ್ರತಿದಿನ 10 ಟ್ಯಾಂಕರ್‌ ನೀರನ್ನು ಎಸ್‌. ಬಿದರೆ, ಗುಂಡುಸಾಗರ,
ಚಂದ್ರಶೇಖರಪುರ, ಹಳ್ಳದಹಳ್ಳಿ, ಶೆಣಬಿನಗೊಂದಿ, ಹ್ಯಾರಳಘಟ್ಟ
ಗ್ರಾಮಗಳಲ್ಲಿನ ಜಾನುವಾರು ತೊಟ್ಟಿಗಳನ್ನು ತುಂಬಿಸಲಾಗುತ್ತಿದೆ.

ಹುಲಿಕೆರೆ ಶುದ್ಧಗಂಗಾ ಘಟಕಗಳಲ್ಲಿ ಕೊಳವೆಬಾಯಿಯಿಂದ ನೀರು
ಬಾರದೆ ಇದ್ದು, ಟ್ಯಾಂಕರ್‌ ಮೂಲಕ 3 ಶುದ್ಧಗಂಗಾ ಘಟಕಗಳಿಗೆ ನೀರನ್ನು
ನೀಡಲಾಗುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ 20 ಗ್ರಾಮಗಳಿಗೆ ಟ್ಯಾಂಕರ್‌
ಮೂಲಕ ನೀರನ್ನು ನೀಡಲಾಗುತ್ತಿದ್ದು, ಇದೀಗ ಸಂಖ್ಯೆ ಏರುತ್ತಿದ್ದು 39
ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಬೇಸಿಗೆ ಮುಂದುವರಿದಿರುವುದರಿಂದ
ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ಕೂಡಲೆ
ಸಂಬಂಧಿ ಸಿದ ಪಿಡಿಒ ಮತ್ತು ಕಾರ್ಯದರ್ಶಿಗಳ ಗಮನಕ್ಕೆ ತರಬೇಕು.
.ಡಾ| ದೇವರಾಜ ನಾಯ್ಕ, ಇಒ

„ಎ.ಜೆ. ಪ್ರಕಾಶಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next