Advertisement

ಮಕ್ಕಳ ಚಟುವಟಿಕೆ ಬೆಂಬಲಿಸಿ

03:29 PM Aug 26, 2019 | Naveen |

ಕಡೂರು: ಮಕ್ಕಳ ರಚನಾತ್ಮಕ ಚಟುವಟಿಕೆ ಗಳನ್ನು ಶಿಕ್ಷಕರು ಮತ್ತು ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಿದರೆ ಕ್ರೀಯಾಶೀಲ ಮನಸ್ಸುಗಳು ಮೂಡಿಬರಲಿವೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಪ್ರಹ್ಲಾದ್‌ ಹೇಳಿದರು.

Advertisement

ಕಡೂರು ತಾಲೂಕು ಬ್ಯಾಗಡೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆದ ಹುಲ್ಲೇಹಳ್ಳಿ ಕ್ಲಸ್ಟರ್‌ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳಲ್ಲಿ ಸಂಸ್ಕಾರ ತುಂಬಿ ಎಲ್ಲರ ಪ್ರೀತಿ,ಗೌರವಾದರಗಳಿಗೆ ಪಾತ್ರರಾಗುವಂತೆ ಮಾಡ ಬೇಕು. ಮಕ್ಕಳಲ್ಲಿರುವ ನೈಜ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ತಾಪಂ ಸದಸ್ಯ ಬ್ಯಾಗಡೇಹಳ್ಳಿ ಬಸವರಾಜು, ವಿದ್ಯಾರ್ಥಿಗಳು ಪ್ರಯತ್ನ ಪೂರ್ವಕವಾಗಿ ಪ್ರತಿಭೆ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗುತ್ತಿದೆ. ಆದರೆ, ಈ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಬಳಸಿಕೊಂಡಲ್ಲಿ ಉನ್ನತ ಸಾಧನೆಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧರಾಜು ನಾಯ್ಕ, ಮಕ್ಕಳ ಜ್ಞಾನ ವಿಕಾಸಕ್ಕೆ ಬೇಕಾದ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಶಿಕ್ಷಣ ಇಲಾಖೆ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಕ್ಲಸ್ಟರ್‌ ಮಟ್ಟದಿಂದ ರಾಜ್ಯಮಟ್ಟದ ವರಗೆ ಮಕ್ಕಳು ವೇದಿಕೆಗಳ ಮೂಲಕ ಗುರುತಿಸಿಕೊಳ್ಳುವ ಕಾರ್ಯಕ್ಕೆ ಪೋಷಕರು ಸಹಕಾರ ನೀಡಬೇಕೆಂದು ತಿಳಿಸಿದರು.

Advertisement

ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ.ಜಗದೀಶ್‌ ಮಾತನಾಡಿ, ಶಿಕ್ಷಕರಿಗೆ ಮಕ್ಕಳೇ ಮಾಲೀಕರು. ಖಾಸಗಿ ಶಾಲೆಗಳ ಗದಾ ಪ್ರಹಾರಕ್ಕೆ ಸಿಲುಕಿ ಸರ್ಕಾರಿ ಶಾಲೆಗಳು ನಲುಗುತ್ತಿವೆ. ಆದ್ದರಿಂದ, ಸರ್ಕಾರಿ ಶಾಲೆಗಳು ಸಬಲೀಕರಣವಾಗಬೇಕು. ಕ್ರಿಯಾತ್ಮಕ ಶಕ್ತಿ ಸರ್ಕಾರಿ ಶಾಲೆ ಮಕ್ಕಗಳಿಗಿದೆ. ಗ್ರಾಮೀಣ ಮಕ್ಕಳಲ್ಲಿನ ಶಿಕ್ಷಣೇತರ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರಕಬೇಕು. ಈ ಹಿನ್ನೆಲೆಯಲ್ಲಿ ಸಣ್ಣ ಗ್ರಾಮ ಬ್ಯಾಗಡೇಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆ ಆತಿಥ್ಯ ವಹಿಸಿ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ. ಪ್ರತಿಭೆ ಅನಾವರಣಗೊಳ್ಳಲು ಇಂತಹ ಅವಕಾಶಗಳನ್ನು ಗ್ರಾಮೀಣ ಮಕ್ಕಳು ಉಪಯುಕ್ತಗೊಳಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ವಹಿಸಿದ್ದ ಹುಲ್ಲೇಹಳ್ಳಿ ಗ್ರಾಪಂ ಅಧ್ಯಕ್ಷೆ ಮಮತಾ ವಿಜಯಕುಮಾರ್‌, ಮಕ್ಕಳ ಮನೋವಿಕಾಸಕ್ಕೆ ನೆರವಾಗಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ಗ್ರಾಮೀಣ ಮಕ್ಕಳಿಗೆ ಉತ್ತಮ ಕಾರ್ಯಕ್ರಮ ರೂಪಿಸಿರುವ ಇಲಾಖೆ ಕಾರ್ಯ ಶ್ಲಾಘನೀಯ. ಇಲಾಖೆಯ ಎಲ್ಲಾ ಕಾರ್ಯಕ್ರಮ ಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮಿತ್ರಾ ಲೋಕೇಶ್‌, ಹುಲ್ಲೇಹಳ್ಳಿ ಪಿಡಿಒ ಮಂಜುನಾಥ್‌, ಶಿಕ್ಷಣ ಸಂಯೋಜನಾಧಿಕಾರಿ ಯೋಗಾನಂದ ಮೂರ್ತಿ, ಎಸ್‌.ಟಿ. ರಾಜಪ್ಪ ಮಾತನಾಡಿದರು.

ತಾ.ಪಂ. ಸದಸ್ಯ ಚಂದ್ರಪ್ಪ, ಶಿಕ್ಷಕರ ಸಂಘದ ಅಧ್ಯಕ್ಷೆ ಎನ್‌.ಡಿ. ಸೀತಾಲಕ್ಷಿ ್ಮೕ, ಬಸಪ್ಪ, ಮಲ್ಲಿಕಾರ್ಜುನ್‌, ಗ್ರಾ.ಪಂ. ಸದಸ್ಯ ಸೋಮಶೇಖರ್‌, ಚಂದ್ರಣ್ಣ, ಪಾಲಾ ನಾಯ್ಕ, ಉಪಾಧ್ಯಕ್ಷೆ ಸುಶೀಲಾಬಾಯಿ, ಸಿಆರ್‌ಪಿ ರಾಜಶೇಖರ್‌, ಮುಖ್ಯಶಿಕ್ಷಕ ಸಿ.ಟಿ. ರಾಜಶೇಖರಪ್ಪ, ವಸಂತ್‌ ಕುಮಾರ್‌, ಗೀತಾಬಾಯಿ, ಕೆ.ಬಿ.ರಾಜಶೇಖರ್‌ ಮತ್ತು ಶಿಕ್ಷಕರ ಸಂಘದ ಸದಸ್ಯರು, ಗ್ರಾಮಸ್ಥರು ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next