Advertisement

ಪಿಯು ಇಂಗ್ಲಿಷ್‌ ಪರೀಕ್ಷಾರ್ಥಿಗಳಿಗೆ ಮಾಸ್ಕ್ ವಿತರಣೆ

01:32 PM Jun 14, 2020 | Naveen |

ಕಡೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಜೂ. 18ರಂದು ನಡೆಯುವ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ಬರೆಯುವ 950 ಮಕ್ಕಳಿಗೆ ಪಟ್ಟಣದ ಶ್ರೀಕೃಷ್ಣ ಟೇಡ್ರರ್ ಮಾಲೀಕ ಕೆ.ಎಸ್‌.ಮಧು ಅವರು ಉಚಿತವಾಗಿ ವಿತರಿಸಲು ಮಾಸ್ಕ್ ಗಳನ್ನು ಪ್ರಾಚಾರ್ಯ ಜಯಪ್ಪ ಅವರಿಗೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಪ್ರಾಚಾರ್ಯ ಜಯಪ್ಪ, ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸ.ಪ.ಪೂ. ಕಾಲೇಜು ಕಡೂರು, ಬಿಜಿಎಸ್‌ ಕಾಲೇಜು ಕಡೂರು, ಕಾಮನಕೆರೆ ಮೊರಾರ್ಜಿ ಪಿಯು ವಸತಿ ಶಾಲೆಯ ಒಟ್ಟು 809 ಮಕ್ಕಳು ಹಾಗೂ ಪಿಯು ಮಂಡಳಿ ಆದೇಶದ ಮೇರೆಗೆ ರಾಜ್ಯದ ಇತರೆ ಜಿಲ್ಲೆಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಂತಹ 108 ವಿದ್ಯಾರ್ಥಿಗಳು ಇದೀಗ ಇಂಗ್ಲಿಷ್‌ ಪರೀಕ್ಷೆ ಬರೆಯಲು ನಮ್ಮ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಟ್ಟು 917 ಮಕ್ಕಳು ಜೂನ್‌ 18 ರ ಗುರುವಾರ ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪಕ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 19 ಕೊಠಡಿ, ನಮ್ಮ ಕಾಲೇಜಿನ 20 ಕೊಠಡಿಗಳನ್ನು ಪರೀಕ್ಷೆ ಬರೆಯಲು ಸಿದ್ಧಪಡಿಸಲಾಗಿದ್ದು, 50 ಹೆಚ್ಚಿನ ಸಿಬ್ಬಂದಿ ಸಿದ್ದವಾಗಿದ್ದಾರೆ. ಮಕ್ಕಳು 8.30ಕ್ಕೆ ಕಾಲೇಜು ಆವರಣಕ್ಕೆ ಬಂದು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಬೇಕು. ನಂತರ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌, ಮಾಸ್ಕ್ ನೀಡಲಾಗುವುದು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ.ಎಸ್‌.ಸತೀಶ್‌, ಉಮಾಶಂಕರ್‌, ಕೆ.ಎಸ್‌. ಮಧು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next