Advertisement

ಧಾರಾಕಾರ ಮಳೆಗೆ 19 ಮನೆ ನೆಲಸಮ: ಹಸು ಸಾವು

04:04 PM Aug 11, 2019 | Naveen |

ಕಡೂರು: ತಾಲೂಕಿನಾದ್ಯಂತ ಕಳೆದ ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ಬೀರೂರು, ಕಸಬಾ ಮತ್ತು ಯಗಟಿ ಹೋಬಳಿಗಳಲ್ಲಿ 19ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. ಆದರೆ, ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಹಶೀಲ್ದಾರ್‌ ಉಮೇಶ್‌ ತಿಳಿಸಿದರು.

Advertisement

ಶನಿವಾರ ತಾಲೂಕು ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಳೆಯಿಂದ ಕಡೂರು ಕಂದಾಯ ಇಲಾಖೆ ತಾಲೂಕಿ ನಾದ್ಯಂತ ಎಚ್ಚರಿಕೆ ವಹಿಸಿದೆ. ಮಳೆಯಿಂದಾಗಿ ಯಾವುದೇ ಸಾವು- ನೋವುಗಳು ನಡೆದಿಲ್ಲ. ಆದರೆ, 19ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ವಿದ್ಯುತ್‌ ಅವಘಡದಿಂದ ಒಂದು ಹಸು ಸಾವನ್ನಪ್ಪಿದೆ ಎಂದು ಹೇಳಿದರು.

ಬೀರೂರು ಹೋಬಳಿಯಲ್ಲಿ ಅತೀ ಹೆಚ್ಚು ಅಂದರೆ 14 ಮನೆಗಳು ನೆಲಸಮವಾಗಿದ್ದು, ಎಮ್ಮೆ ದೊಡ್ಡಿ, ಲಕ್ಕೇನಹಳ್ಳಿಯ ಬಾಲ ನಾಯ್ಕ, ನಿಂಗ ನಾಯ್ಕ, ಮೈಲಾರಿ ನಾಯ್ಕ, ದೇವಿ ಬಾಯಿ, ನೀಲಾ ನಾಯ್ಕ ಎಂಬುವರ ಹೆಂಚಿನ ಮನೆಗಳ ಗೋಡೆಗಳು ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಬಿದ್ದಿವೆ. ಹೊಗರೆಹಳ್ಳಿಯ ಮಹಲಿಂಗಪ್ಪ, ಸಿದ್ಧಪ್ಪ, ನಟರಾಜ್‌ ಮತ್ತು ಕೆ.ಟಿ.ಚಂದ್ರಶೇಖರಪ್ಪ ಅವರ ಮನೆಗಳು ಗಾಳಿ ಮತ್ತು ಮಳೆಯ ಹೊಡೆತಕ್ಕೆ ಬಿದ್ದಿರುವುದಾಗಿ ಮಾಹಿತಿ ನೀಡಿದ್ದಾರೆ. ದೊಡ್ಡಘಟ್ಟದ ಬಸಪ್ಪ ಮತ್ತು ದೊಡ್ಡಯ್ಯನವರ ಮನೆ ಕುಸಿದು ಬಿದ್ದವೆ. ಗಾಳಿಹಳ್ಳಿಯ ಹನುಮಂತಪ್ಪ ಮತ್ತು ಬಾಪಣ್ಣ ಅವರ ಮನೆ ಕುಸಿದಿದೆ. ದೋಗೀಹಳ್ಳಿಯ ಸಿದ್ಧಮ್ಮ ಅವರ ಮನೆ ಗೋಡೆ ಬಿದ್ದಿದೆ ಎಂದು ಮಾಹಿತಿ ನೀಡಿದರು.

ಯಗಟಿ ಹೋಬಳಿಯ ಸಣ್ಣೇನಹಳ್ಳಿಯ ರಂಗನಾಥ ಅವರ ವಾಸದ ಮನೆ, ಮರವಂಜಿಯ ತಮ್ಮಯ್ಯ ಅವರ ಮನೆ ಕೊತ್ತಿಗೆರೆ ಗ್ರಾಮದ ಸಿದ್ಧಪ್ಪ ಅವರ ಮನೆ, ಕುಪ್ಪಾಳು ಗ್ರಾಮದ ಮೂರ್ತಪ್ಪ ಅವರ ವಾಸದ ಮನೆ, ಬೀರನಹಳ್ಳಿ ಗ್ರಾಮದ ರಾಮ್ಲಾ ನಾಯ್ಕ ಅವರ ಮನೆಗಳು ನೆಲಕುರುಳಿವೆ. ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಸಮಸ್ಯೆಗಳಿದ್ದರೆ ಸಂಬಂಧಿಸಿದ ಇಲಾಖೆಗೆ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಮನವಿ ಮಾಡಿದರು.

Advertisement

ಬೀರೂರು ವಲಯ ಕಂದಾಯ ನಿರೀಕ್ಷಕ ಪ್ರಸನ್ನ, ಗ್ರಾಮ ಲೆಕ್ಕಿಗರಾದ ಚಂದ್ರಶೇಖರ್‌, ಸಿದ್ಧಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next