ಕಡೂರು: ವಿಘ್ನ ನಿವಾರಕ ಶ್ರೀ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಣಪತಿ ತಯಾರಕರು ತಮ್ಮ ಕೈಚಳಕದಿಂದ ತಯಾರಿಸಿದ ಆಕರ್ಷಕ ಗಣಪನ ಮೂರ್ತಿಗಳ ಮಾರಾಟಕ್ಕೆ ಸಿದ್ಧವಾಗಿದ್ದಾರೆ.
Advertisement
ಪ್ರತಿ ಬಾರಿ ಗಣೇಶೋತ್ಸವಕ್ಕೂ ಮೊದಲೇದೊಡ್ಡ ಪಟ್ಟಣಗೆರೆ ಕುಂಬಾರ ಹೊಳೆಯಪ್ಪ ಕುಟುಂಬಸ್ಥರು ಗಣೇಶ ಮೂರ್ತಿ ತಯಾರಿಸುವ ಕಾಯಕ ಆರಂಭಿಸುತ್ತಾರೆ. ವಿವಿಧ ಭಂಗಿಯ ಗಣಪತಿಗಳ ತಯಾರಿಕೆಯಲ್ಲಿ ಇಡೀ ಕುಟುಂಬ ಸದಸ್ಯರು ಭಾಗಿಯಾಗುತ್ತಾರೆ. ಸೋಮವಾರ ಗಣಪತಿ ಮೂರ್ತಿಗಳು ಭರದಿಂದ ಮಾರಾಟವಾಗಲಿವೆ.
Related Articles
Advertisement
ಕಳೆದ ನಾಲ್ಕು ದಶಕಗಳಿಂದ ಗಣೇಶನ ಮೂರ್ತಿ ಮಾಡಿಕೊಂಡು ಬರುತ್ತಿರುವ ನಮ್ಮ ಕುಟುಂಬ ಕುಂಬಾರಿಕೆ(ಕುಡುಕೆ-ಮಡಿಕೆ)ಗಳಿಂದಲೇ ಜೀವನ ನಡೆಸುತ್ತಿದೆ. ಇದೀಗ ಕುಡಿಕೆ- ಮಡಿಕೆಗಳಿಗೆ ಬೇಡಿಕೆ ಇಲ್ಲದ ಕಾರಣಕುಲಕಸುಬಿಗೆ ಹಿನ್ನೆಡೆಯಾಗಿದೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಗೌರಿ -ಗಣೇಶಹಬ್ಬದ ಮೂರು ತಿಂಗಳು ಗಣೇಶನ ಮೂರ್ತಿಮಾಡಿಕೊಂಡು ಜೀವನ ನಿರ್ವಹಣೆ ಮಾಡಬೇಕಾಗಿದೆ ಎನ್ನುತ್ತಾರೆ ಕಲಾವಿದರು.
ಕಡೂರು ಇತಿಹಾಸದಲ್ಲಿಯೇ ಸುಮಾರು 40 ವರ್ಷಗಳ ಕಾಲ ಗಣೇಶ ಮೂರ್ತಿ ನಿರ್ಮಿಸಿ ಸೇವೆ ನೀಡುತ್ತಿದ್ದು, ಪುರಸಭೆ ಆಡಳಿತ ನಮ್ಮನ್ನು ಪರಿಗಣಿಸಿ ಗಣೇಶನನ್ನು ನಿರ್ಮಿಸಲು ಒಂದು ಸ್ಥಳ ನೀಡಿದರೆ ಇದೇಕಾಯಕ ಮುನ್ನಡೆಸಲು ಅನುಕೂಲ ವಾಗುತ್ತದೆ ಎಂಬುದು ಹೊಳೆಯಪ್ಪನವರ ಕುಟುಂಬದ ಆಶಯವಾಗಿದೆ.
ಗಣಪತಿ ತಯಾರಿಕೆ ಕಾಯಕ ಖುಷಿ ಕೊಡುತ್ತೆ
ಮಣ್ಣಿನ ಗಣಪತಿಗಳು ಮಣ್ಣಿನವೇ ಹೊರೆತು ಪಿಒಪಿ ಬಳಸಿಲ್ಲ. ಬಣ್ಣವೂ ನೈಸರ್ಗಿಕ. ಆದ್ದರಿಂದ ಪರಿಸರ ಹಾನಿ ಇಲ್ಲ. ಅಲ್ಲದೇ, ಬಣ್ಣದ ಬಳಕೆಯೂ ಮಿತವಾಗಿರುತ್ತದೆ. ಹತ್ತಿಯನ್ನು ಅಳವಡಿಸಿರುವುದರಿಂದ ಬಣ್ಣ ಮತ್ತು ಸಮಯದ ಉಳಿತಾಯವಾಗಿದೆ. ಗಣಪತಿ ಬಯಸಿ ಬರುವವರ ಕಲ್ಪನೆಗಳನ್ನು ಮೂರ್ತಿ ರೂಪಕ್ಕಿಳಿಸುವ ಕಾಯಕ ಖುಷಿ ಕೊಡುತ್ತದೆ ಎನ್ನುತ್ತಾರೆ ಹೊಳೆಯಪ್ಪ ಮತ್ತು ಅವರ ಮಗ ದೀಪು.