Advertisement
ಭಾನುವಾರ ಕಡೂರು ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿಕರಿಗಾಗಿ ಪ್ರಗತಿ ಬಂಧು ಸ್ಥಾಪಿಸಲಾಗಿದ್ದು, 860 ಸಂಘಗಳು ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಹಿಳೆಯರ ಸ್ವಸಹಾಯ ಸಂಘಗಳು 2158 ಸಂಘಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.
Related Articles
Advertisement
ಸುರಕ್ಷಾ ಯೋಜನೆಯಲ್ಲಿ ಮರಣ ಸಾಂತ್ವನದ ಮೊತ್ತ 20.33 ಲಕ್ಷ ರೂ.ಗಳನ್ನು ವಿತರಿಸಲಾಗಿದೆ. ಆರೋಗ್ಯ ಸೌಲಭ್ಯದಲ್ಲಿ 220,82 ಲಕ್ಷ ರೂ.ಗಳನ್ನು ಸದಸ್ಯರಿಗೆ ನೀಡಲಾಗಿದೆ. ಜೀವ ಭದ್ರತೆ ವಿಮೆ ಮಾಡಿಸಿರುವ ಸದಸ್ಯರು 41,922 ಇದರಲ್ಲಿ ಸದಸ್ಯರಿಗೆ ವಿಮೆ ನೀಡಿರುವ ಮೊತ್ತ 109,26 ಲಕ್ಷ. ಇದರಲ್ಲಿ 202ಜನ ಸದಸ್ಯರು ಫಲಾನುಭವಿಗಳಾಗಿರುತ್ತಾರೆ ಎಂದರು.
ಕೃಷಿ ಕಾರ್ಯಕ್ರಮದ ಅನುಷ್ಟಾನದಲ್ಲಿ ರೈತ ಕ್ಷೇತ್ರ ಪಾಠ ಶಾಲೆ, ಕೃಷಿ ಪ್ರಾತ್ಯಕ್ಷಿಕೆ 49 ಕಡೆಗಳಲ್ಲಿ ನಡೆಸಲಾಗಿದ್ದು, ಇದರಲ್ಲಿ 9,133 ಜನ ಫಲಾನುಭವಿಗಳು ಭಾಗವಹಿಸಿದ್ದರು. 4,67 ಲಕ್ಷ ರೂ.ಗಳ ಸಸಿಗಳನ್ನು ವಿತರಿಸಲಾಗಿದೆ. ಕೃಷಿಗೆ ಪೂರಕವಾದ ಯಂತ್ರೋಪಕರಣಗಳನ್ನು 174 ಫಲಾನುಭವಿಗಳಿಗೆ 3,15 ಲಕ್ಷ ರೂ. ವೆಚ್ಚದಲ್ಲಿ ವಿತರಿಸಲಾಗಿದೆ. ಕೋಳಿ ಫಾರಂ, ಆಡು, ಹಂದಿ ಸಾಕಾಣಿಕೆ ಸೋಲಾರ್ ಅಳವಡಿಸಲು 136 ಫಲಾನುವಿಗಳಿಗೆ 2.59 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. 125 ಕೃಷಿ ಅಧ್ಯಯನ ಪ್ರವಾಸ ಕೈಗೊಂಡು ಇದರಲ್ಲಿ 4,303 ಜನ ಫಲಾನುಭವಿಗಳು ಅನುಭವ ಪಡೆದಿರುತ್ತಾರೆ ಎಂದು ತಿಳಿಸಿದರು.
ತಾಲೂಕಿನಲ್ಲಿ 2 ಕೃಷಿ ಉತ್ಸವಗಳನ್ನು ಮಾಡಲಾಗಿದ್ದು, ಕೃಷಿ ವಿಚಾರ ಸಂಕಿರಣ 65 ಕಡೆಗಳಲ್ಲಿ ಮಾಡಲಾಗಿದೆ. ಸ್ವಾಸ್ಥ ್ಯ ಸಂಕಲ್ಪ ಕಾರ್ಯಕ್ರಮ, ನವಜೀವನ ಸಮಿತಿ, ಜನಜಾಗೃತಿ ಸಮಾವೇಶ, ಬೀದಿ ನಾಟಕ, ಶತದಿನೋತ್ಸವ ಹಾಗೂ ಸತ್ಯನಾರಾಯಣ, ವರಮಹಾಲಕ್ಷಿ ್ಮೕ ಪೂಜಾ ಕಾರ್ಯಕ್ರಮಗಳನ್ನು 29 ಗ್ರಾಮಗಳಲ್ಲಿ ಈಗಾಗಲೇ ಮಾಡಲಾಗಿದೆ ಹಾಗೂ ಜ್ಞಾನ ವಿಕಾಸ, ಸ್ವಸಹಾಯ ಸಂಘಗಳ ಸಬಲೀಕರಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಸಮುದಾಯದ ಅಭಿವೃದ್ಧಿಗಾಗಿ ಸಮುದಾಯ ಭವನ, ಹಾಲು ಉತ್ಪಾದಕರ ಸಂಘ, ದೇವಾಲಯಗಳ ಅಭಿವೃದ್ಧಿಗೆ ಸುಜ್ಞಾನ ನಿಧಿ, ಶಿಷ್ಯ ವೇತನ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಪರಿಸರ ಕಾರ್ಯಕ್ರಮಗಳಾದ ಪರಿಸರ ಮಾಹಿತಿ, ನಾಗರಿಕರ ಪ್ರಜ್ಞೆ, ಮನೆ ರಿಪೇರಿ, ಶೌಚಾಲಯ ನಿರ್ಮಾಣ, ನಿರ್ಗತಿಕರ ಮಾಸಾಶನ, ಕೌಶಲ್ಯಾಭಿವೃದ್ಧಿ ತರಬೇತಿ, ಕೃಷಿಯೇತರ ಸ್ವದ್ಯೋಗ ಕಾರ್ಯಕ್ರಮಗಳಿಗೂ ಸಂಸ್ಥೆಯ ವತಿಯಿಂದ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ ಇದ್ದರು.