ಕಡೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಅಂಗನವಾಡಿ ಮತ್ತು ಸಂಬಂಧಪಟ್ಟ ಇಲಾಖೆ ಮುಚ್ಚುವ ಅಪಾಯವಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ರಾಧಾ ಸುಂದರೇಶ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾ ಯಕಿಯರ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಂಗನವಾಡಿಗಳನ್ನು ಉಳಿಸಬೇಕು ಮತ್ತು ಬಲಪಡಿಸಬೇಕು ಎಂಬ ಮೂಲ ಧ್ಯೇಯೋ ದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ವಿಭಿನ್ನ ಚಳವಳಿ ಇದಾಗಿದೆ ಎಂದು ಹೇಳಿದರು.
ಜನಸ್ನೇಹಿ ಅಂಗನವಾಡಿಗಳನ್ನು ರಚಿಸಿ ಆ ಮೂಲಕ ಎಲ್ಕೆಜಿ ಹಾಗೂ ಯುಕೆಜಿ ಸಮಾನಾಂತರ ಶಿಕ್ಷಣಕ್ಕೆ ಬೆಂಬಲಿಸುವ ಬದಲು ಅಂಗನವಾಡಿಗಳನ್ನೇ ಮುಚ್ಚಿ ಎಲ್ಕೆಜಿ ಶಿಕ್ಷಣಕ್ಕೆ ಒತ್ತು ನೀಡಲು ಹೊರಟಿರುವ ಸರ್ಕಾರದ ದ್ವಂದ್ವ ನೀತಿಯಿಂದ ಸಾವಿರಾರು ಕಾರ್ಯಕರ್ತೆಯರು ಬೀದಿಪಾಲಾಗುತ್ತಾರೆ. ಜತೆಗೆ ಸಂಬಂಧಪಟ್ಟ ಇಲಾಖೆಯೇ ಮುಚ್ಚುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಫೆಡರೇಷನ್ ಕಾರ್ಯದರ್ಶಿ ಬಿ.ಅಮ್ಜದ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ 44 ವರ್ಷಗಳ ನಿರಂತರ ಹೋರಾಟಕ್ಕೆ ಒಂದು ಇತಿಹಾಸವಿದೆ. ಇದು ವರೆಗೆ ಸವಲತ್ತು ಕೇಳುತ್ತಿದ್ದ ಕಾರ್ಯ ಕರ್ತೆಯರು ಇಂದು ಅಂಗನವಾಡಿಗಳನ್ನು ಉಳಿಸಿಕೊಡಿ ಎಂದು ಕೇಳಿಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಡಿ.ಮಂಜುಳಾ, ಕಾರ್ಯದರ್ಶಿ ಎಚ್.ಎಸ್. ಅನಸೂಯಾ, ಮತಿಘಟ್ಟ ಗಿರಿಜಾ, ದೇವಿಕಾ ಮುಂತಾದವರು ಉಪಸ್ಥಿತರಿದ್ದರು.