Advertisement

ನರೇಗಾ ಯೋಜನೆ ಸದ್ಭಳಕೆ ಅಗತ್ಯ

05:38 PM Mar 06, 2020 | Naveen |

ಕಡೂರು: ಗ್ರಾಮ ಸ್ವರಾಜ್ಯದ ಕನಸು ಕಂಡ ಗಾಂಧಿಧೀಜಿ ಕನಸು ನನಸಾಗುವಲ್ಲಿ ನರೇಗಾ ಯೋಜನೆಯ ಸದ್ಬಳಕೆ ಅಗತ್ಯ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌ ಶ್ಲಾಘಿಸಿದರು.

Advertisement

ತಾಲೂಕಿನ ಆಣೇಗೆರೆ ಗ್ರಾಮಪಂಚಾಯ್ತಿಯ ರಾಜೀವ್‌ ಗಾಂಧಿ ಸೇವಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ಸರ್ಕಾರದ ಕೆಲಸ ದೇವರ ಕೆಲಸ ಎಂಬುದು ಕೇವಲ ಬರವಣಿಗೆಗೆ ಸೀಮಿತವಾಗುತ್ತಿರುವುದು ವಿಪರ್ಯಾಸ. ಆದರೆ ಅದಕ್ಕೆ ಅಪವಾದವಾಗಿ ಹಲವು ಗ್ರಾಮ ಪಂಚಾಯ್ತಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ನರೇಗಾ ಅನುದಾನದ ಸಮರ್ಥ ಬಳಕೆಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿರುವುದು ಅಭಿನಂದನೀಯ. ಜಿಲ್ಲಾ ಪಂಚಾಯ್ತಿ ವತಿಯಿಂದ ಪಂಚಾಯ್ತಿ ಅಭಿವೃದ್ಧಿಗೆ ಬೇಕಾದ ಸಹಕಾರವನ್ನು ತಮ್ಮ ಇತಿಮಿತಿಯಲ್ಲಿ ನೀಡಲು ಸದಾ ಸಿದ್ಧಎಂದರು.

ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್‌ ಮಾತನಾಡಿ, ವಿಶೇಷವಾದ ಯಾವುದೇ ಅನುದಾನವಿಲ್ಲದ ಗ್ರಾಮ ಪಂಚಾಯ್ತಿಗಳಿಗೆ ನರೇಗಾ ಯೋಜನೆ ವರದಾನವೇ ಆಗಿದ್ದರೂ ಒಂದಿಷ್ಟು ನಿಯಮಗಳನ್ನು ಸಡಿಲಿಸಿದರೆ ಯಾವ ಅನುದಾನವೂ ಇಲ್ಲದೆ ನರೇಗಾ ಯೋಜನೆಯ ಮೂಲಕವೇ ಪಂಚಾಯ್ತಿಯನ್ನು ಅಭಿವೃದ್ಧಿ ಪಡಿಸಬಹುದು ಎಂದರು.

ತಾಲೂಕು ಪಂಚಾಯ್ತಿ ಅಧ್ಯಕ್ಷೆ ಭಾರತಿ ಪ್ರಲ್ಹಾದ್‌, ಸದಸ್ಯ ಪಂಚನಹಳ್ಳಿ ಪ್ರಸನ್ನ, ಕಾರ್ಯನಿರ್ವಹಣಾಧಿಕಾರಿ ಡಾ|
ದೇವರಾಜ ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಿ ಶ್ರೀನಿವಾಸ್‌, ಪಂಚನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಶಿವರಾಜ್‌, ಪಿಡಿಒ ರವಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next