Advertisement

Kadur; ಕುರಿ ಮಂದೆ ಮೇಲೆ ಚಿರತೆ ದಾಳಿ: 31 ಕುರಿಗಳು ಬಲಿ

10:03 PM Dec 15, 2023 | Team Udayavani |

ಚಿಕ್ಕಮಗಳೂರು: ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿ ಅಟ್ಟಹಾಸ ಮೆರೆದ ಪರಿಣಾಮ 31 ಕುರಿ ಮತ್ತು ಮೇಕೆಗಳು ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ.

Advertisement

ತೋಟದ ಮನೆಯ ಮೇಲೆ ಚಿರತೆ ದಾಳಿಗೆ 17 ಕುರಿ, 14 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ಚಂದ್ರು, ಬಸವರಾಜು, ಮಂಜು, ಲಕ್ಷ್ಮಣ್ ಎಂಬುವರಿಗೆ ಸೇರಿದ ಕುರಿ ಮತ್ತು ಮೇಕೆಗಳನ್ನು ಸುಶೀಲಮ್ಮ ಎಂಬುವರ ತೋಟದ ಮನೆಯಲ್ಲಿ ಕಟ್ಟಲಾಗಿತ್ತು. 4 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ.

ಪಶು ವೈದ್ಯ ಉಮೇಶ್ ಅವರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next