Advertisement

ಗ್ರಾಮೀಣ ಜನರಲ್ಲಿ ಡಿಜಿಟಲ್‌ ಅರಿವು ಮೂಡಿಸಿ

03:43 PM Jan 06, 2020 | Naveen |

ಕಡೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಾಯಧನ ಫಲಾನುಭವಿಗಳಿಗೆ ಹಾಗೂ ರೈತರಿಗೆ ನೇರವಾಗಿ ತಮ್ಮ ಖಾತೆಗಳಿಗೆ ಜಮಾ ಆಗುವುದರಿಂದ ಗ್ರಾಮೀಣ ಭಾಗದ ಜನತೆ ಹಾಗೂ ರೈತರು ಡಿಜಿಟಲ್‌ ಬಗ್ಗೆ ಜಾಗೃತಗೊಳ್ಳಬೇಕಿದೆ ಹಾಗೂ ಇದರ ಬಗ್ಗೆ ಅರಿವು ಮೂಡಬೇಕಿದೆ ಎಂದು ಶಾಸಕ ಬೆಳ್ಳಿಪ್ರಕಾಶ್‌ ತಿಳಿಸಿದರು.

Advertisement

ಅರಿವಿನ ಮನೆ ಡಿಜಿಟಲ್‌ ಪೇಮೆಂಟ್‌ ಪ್ರಮೋಷನ್‌ ಫೌಂಡೇಶನ್‌ ವತಿಯಿಂದ ಶನಿವಾರ
ತಾಲೂಕಿನ ಗರ್ಜೆ ಗ್ರಾಮದಲ್ಲಿ ಎಟಿಎಂ ಹಾಗೂ ಕ್ಯಾಶ್‌ ಡಿಪಾಜಿಟ್‌ ಕೇಂದ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಗ್ರಾಮೀಣ ಮಟ್ಟದಲ್ಲಿ ಎಟಿಎಂ ಸ್ಥಾಪನೆ ಮಾಡುವುದರ ಮೂಲಕ ಚಾಲನೆ ಮಾಡಲಾಗಿದ್ದು. ಗ್ರಾಮೀಣ ಭಾಗದ ಜನತೆ ಮತ್ತು ರೈತರು ಇದರ ಸದುಪಯೋಗವನ್ನು ಪಡೆಯಬೇಕಿದೆ. ಬ್ಯಾಂಕಿನ ವ್ಯವಸ್ಥೆಯನ್ನು ಸರಳವಾದ ವಿಧಾನಗಳು ನಿಮ್ಮ ಮನೆಯ ಬಾಗಿಲಿಗೆ ತರಲಾಗಿದ್ದು. ಇದರ ಬಗ್ಗೆ ತಾವುಗಳು ಅರಿವು ಮೂಡಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದರು.

ತಮ್ಮಲ್ಲಿರುವ ಹಣವನ್ನು ಮನೆಯಲ್ಲಿಯೇ ಇಟ್ಟುಕೊಳ್ಳದೇ ಬ್ಯಾಂಕಿನಲ್ಲಿ ವ್ಯವಹಾರ ವಹಿವಾಟು ನಡೆಸಿದಾಗ ಆರ್ಥಿಕ ವ್ಯವಸ್ಥೆಯ ಬಗ್ಗೆ ಜಾಗೃತಗೊಳ್ಳಲು ಸಹಕಾರಿಯಾಗಲಿದೆ. ಯಾವುದೇ ಸವಲತ್ತುಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಮನೆಯ ಬಾಗಿಲಿಗೆ ಬರುವಂತಾಗಿದ್ದು. ಇದರ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಲು ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದರ ಮೂಲಕ ಬ್ಯಾಂಕಿಕ್‌ ವ್ಯವಸ್ಥೆಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ ಎಂದರು.

ಅರಿವಿನ ಮನೆ ಫೌಂಡೇಶನ್‌ ಕಾರ್ಯದರ್ಶಿ ಡಾ.ಸಿ.ಜೆ. ಶಶಿಧರ್‌ ಮಾತನಾಡಿ, ಈ ಆರ್ಥಿಕ ವರ್ಷದಲ್ಲಿ ಫೌಂಡೇಶನ್‌ ವತಿಯಿಂದ ಜಿಲ್ಲಾದ್ಯಂತ ಸುಮಾರು 50 ಎಟಿಎಂಗಳ
ಘಟಕಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸುವ ಗುರಿ ಹೊಂದಲಾಗಿದೆ. ಪ್ರಥಮವಾಗಿ ಗರ್ಜೆ ಗ್ರಾಮದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ
ಕೇಂದ್ರಗಳಲ್ಲಿ ಘಟಕಗಳನ್ನು ತೆರೆಯಲಾಗುವುದು ಎಂದರು.

ಈ ಎಟಿಎಂ ಮೂಲಕ ಯಾವುದೇ ಬ್ಯಾಂಕಿಗೆ ಹಣ ಕಟ್ಟಬಹುದಾಗಿದೆ ಹಾಗೂ ಹಣ ತೆಗೆಯಬಹುದಾಗಿದೆ. ಇದಕ್ಕೆ ಆರ್‌ಬಿಐ ಮಾನ್ಯತೆ ಪಡೆದಿದೆ. ಎಜಿಎಸ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಕಾರ್ಯ ಮಾಡಲಾಗಿದೆ. ಜ.20ರಂದು ಸಿದ್ಧಗಂಗಾ ಶ್ರೀಗಳ ಮೊದಲನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಫೌಂಡೇಶನ್‌ ವತಿಯಿಂದ ನೆರವೇರಿಸಲಾಗುವುದು. ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿ.ಪಂ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌, ಅರಿವಿನ ಮನೆ ಸೌಹಾರ್ದ ಸಹಕಾರ ನಿಯಮಿತ ಅಧ್ಯಕ್ಷ ಸಿ.ಎಂ. ಮೋಹನ್‌ಕುಮಾರ್‌, ಅರಿವಿನ ಮನೆ ಡಿಜಿಟಲ್‌ ಪೇಮೇಂಟ್‌ ಪ್ರಮೋಷನ್‌ ಅಧ್ಯಕ್ಷ ಎಚ್‌.ಎಂ. ಕಾಶಿನಾಥ್‌, ಅರಿವಿನ ಮನೆ ನಿರ್ದೇಶಕರಾದ ಎಂ.ಎಚ್‌. ಪ್ರಕಾಶ್‌ ಮೂರ್ತಿ, ಜಿ.ಕೆ. ಮರುಳಪ್ಪ, ಈಶ್ವರಪ್ಪ, ಎಸ್‌ .ಬಿ. ಬಸವರಾಜ್‌, ಶಿವಕುಮಾರ್‌, ತಿಮ್ಮಪ್ಪ, ಮಹೇಶ್ವರಪ್ಪ, ಉಮಾರಾಣಿ, ರವಿಕುಮಾರ್‌, ರಕ್ಷಿತ್‌, ದಿಲೀಪ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next