Advertisement
ಅಕ್ಕಿಹಿಟ್ಟಿನ ಚಾಪೆ ಕಡುಬುಬೇಕಾಗುವ ಸಾಮಗ್ರಿ: ಕುಚ್ಚಿಗೆ ಅಕ್ಕಿ- 2 ಕಪ್, ತೆಂಗಿನಕಾಯಿ ತುರಿ- 2 ಕಪ್, ರುಚಿಗೆ ಉಪ್ಪು , ಬಾಳೆ ಎಲೆ 3.
ತಯಾರಿಸುವ ವಿಧಾನ: ಬಾಳೆ ಎಲೆಯನ್ನು ಬಾಡಿಸಿ ಇಡಿ. ಅಕ್ಕಿಯನ್ನು 5-6 ಗಂಟೆ ನೀರಲ್ಲಿ ನೆನೆಸಿಡಿ. ಅಕ್ಕಿ ತೊಳೆದು ಒಂದು ಕಪ್ ತೆಂಗಿನ ತುರಿ, ಉಪ್ಪು ಸೇರಿಸಿ ನಯವಾಗಿ ರುಬ್ಬಿಡಿ. ಬಾಡಿಸಿಟ್ಟ ಎಲೆಯ ಮೇಲೆ ರುಬ್ಬಿದ ಅಕ್ಕಿಹಿಟ್ಟು ಹರಡಿ ಸ್ವಲ್ಪ ತೆಂಗಿನ ತುರಿ ಹಾಕಿ ಚಾಪೆ ಮಡಚಿದಂತೆ ಸುರುಳಿ ಸುತ್ತಿಡಿ. ಹಬೆ ಪಾತ್ರೆಯಲ್ಲಿ ನೀರು ಕುದಿದ ನಂತರ ಮಡಚಿಟ್ಟ ಅಕ್ಕಿ ಹಿಟ್ಟಿನ ಚಾಪೆ ಇಟ್ಟು ಇಪ್ಪತ್ತು ನಿಮಿಷ ಬೇಯಿಸಿರಿ. ತಣಿದ ನಂತರ ಎಲೆಯಿಂದ ಬಿಡಿಸಿ ಎಣ್ಣೆ/ತುಪ್ಪ ಹಾಕಿ ಸವಿಯಬಹುದು.
ಬೇಕಾಗುವ ಸಾಮಗ್ರಿ: ಹುರುಳಿ ಕಾಳು- ಒಂದೂವರೆ ಕಪ್, ಅಕ್ಕಿತರಿ- 1/2 ಕಪ್, ಉದ್ದಿನಬೇಳೆ- 1 ಕಪ್, ರುಚಿಗೆ ಉಪ್ಪು , ಹಲಸಿನ ಎಲೆಯ ದೊನ್ನೆಗಳು.
ತಯಾರಿಸುವ ವಿಧಾನ: ಕೊಟ್ಟೆ ಮಾಡುವ ಹಿಂದಿನ ದಿನ ಉದ್ದಿನಬೇಳೆ, ಹುರುಳಿ ಕಾಳನ್ನು ಬೇರೆಯಾಗಿ ನೆನೆಸಿಡಿ. ರಾತ್ರಿ ಉದ್ದಿನ ಬೇಳೆ ರುಬ್ಬಿ ಪಾತ್ರೆಗೆ ಹಾಕಿಡಿ. ಮರುದಿನ ಹುರುಳಿಕಾಳು ತೊಳೆದು ನಯವಾಗಿ ರುಬ್ಬಿ ಉದ್ದಿನ ಹಿಟ್ಟಿಗೆ ಹಾಕಿ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಅಕ್ಕಿ ತರಿಯನ್ನು ಸೇರಿಸಿ ಮತ್ತೆ ಚೆನ್ನಾಗಿ ಬೆರೆಸಿ ಹಲಸಿನ ದೊನ್ನೆಯಲ್ಲಿ ಹಾಕಿ. ಹಬೆ ಪಾತ್ರೆಗೆ ಕುದಿ ಬಂದ ಕೂಡಲೆ ಹಲಸಿನ ದೊನ್ನೆ ಇಟ್ಟು 20 ನಿಮಿಷ ಬೇಯಿಸಿ ಮುಚ್ಚಳ ತೆಗೆಯಿರಿ.ತರಕಾರಿ ಸಾಂಬಾರ್ ಇಲ್ಲವೆ, ಕಾಯಿ ಚಟ್ನಿಯೊಂದಿಗೆ ಸವಿದರೆ ಬಲು ರುಚಿ. ಅರಸಿನ ಎಲೆಯಲ್ಲಿ ಕಡುಬು (ಸಿಹಿ ಕಡುಬು)
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 1 ಕಪ್, ತೆಂಗಿನಕಾಯಿ ತುರಿ- ಒಂದೂವರೆ ಕಪ್, ಬೆಲ್ಲ- 1 ಕಪ್, ಚಿಟಿಕೆ ಉಪ್ಪು , ಅರಸಿನ ಎಲೆಗಳು 8-10.
ತಯಾರಿಸುವ ವಿಧಾನ: ಅಕ್ಕಿಯನ್ನು 2 ಗಂಟೆ ನೆನೆಸಿಡಿ. ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ಲ ಹಾಕಿ ಪಾಕ ಮಾಡಿ ತೆಂಗಿನ ತುರಿ ಹಾಕಿ ಚೂರ್ಣ ಮಾಡಿಡಿ. ನೆನೆಸಿದ ಅಕ್ಕಿಗೆ ಸ್ವಲ್ಪ ಬೆಲ್ಲ, ಉಪ್ಪು, ತೆಂಗಿನತುರಿ 1/4 ಕಪ್ ಹಾಕಿ ನಯವಾಗಿ ರುಬ್ಬಿ. ಅರಸಿನ ಎಲೆ ತೊಳೆದು ಒರೆಸಿ ಅದರ ಮೇಲೆ ಅಕ್ಕಿ ಇಟ್ಟು ಹರಡಿ ಚೂರ್ಣ ಉದ್ದಕ್ಕೆ ಹರಡಿ. ಹಬೆ ಪಾತ್ರೆಯಲ್ಲಿ ನೀರು ಕುದಿದ ನಂತರ ಅರಸಿನ ಎಲೆ ಮಡಚಿ ಸುತ್ತಲೂ ಇಟ್ಟು ಮುಚ್ಚಳ ಮುಚ್ಚಿ 20 ನಿಮಿಷ ಬೇಯಿಸಿ. ತುಪ್ಪ ಹಾಕಿ ಸವಿದರೆ ಆರೋಗ್ಯಕ್ಕೆ ಉತ್ತಮ.
Related Articles
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 1 ಕಪ್, ತೊಗರಿಬೇಳೆ- 1/4 ಕಪ್, ತೆಂಗಿನತುರಿ- ಒಂದೂವರೆ ಕಪ್, ಒಣ ಮೆಣಸಿನಕಾಯಿ 8-10, ರುಚಿಗೆ ಉಪ್ಪು , ಇಂಗಿನ ನೀರು- 1 ಚಮಚ, ಕೊತ್ತಂಬರಿ- 1 ಚಮಚ, ಸ್ವಲ್ಪ ಬೆಲ್ಲ , ಹುಣಸೆಹಣ್ಣು, ಬಾಳೆಎಲೆ- 2.
ತಯಾರಿಸುವ ವಿಧಾನ: ಅಕ್ಕಿ, ತೊಗರಿಬೇಳೆ ಎರಡು ಗಂಟೆ ನೆನೆಸಿಡಿ. ತೊಳೆದು ತೆಂಗಿನ ತುರಿ, ಒಣ ಮೆಣಸಿನಕಾಯಿ, ಬೆಲ್ಲ, ಹುಣಸೆಹಣ್ಣು , ಕೊತ್ತಂಬರಿ ಹಾಕಿ ತರಿ ತರಿಯಾಗಿ ರುಬ್ಬಿ ಉಪ್ಪಿನ ಹುಡಿ, ಇಂಗಿನ ನೀರು ಹಾಕಿ ಬೆರೆಸಿರಿ. ಹಬೆ ಪಾತ್ರೆಯ ನೀರಿಗೆ ಕುದಿ ಬಂದ ಮೇಲೆ ಬಾಳೆಎಲೆ ಬಾಡಿಸಿಟ್ಟು ಅದರಲ್ಲಿ ಖಾರ ಕಡುಬಿನ ಹಿಟ್ಟು ಸುರಿದು 30 ನಿಮಿಷ ಬೇಯಿಸಿ ಮುಚ್ಚಳ ತೆಗೆದಿಡಿ. ಎಣ್ಣೆ ಹಾಕಿ ಬಿಸಿಬಿಸಿ ಸವಿಯಬಹುದು. ತಣ್ಣಗಾದರೂ ರುಚಿಯಾಗಿರುವುದು. ಊಟಕ್ಕೂ, ಕಾಫಿ ಜೊತೆಗೂ ಸವಿಯಬಹುದು.
Advertisement
-ಎಸ್. ಜಯಶ್ರೀ ಶೆಣೈ