Advertisement
ಸ್ಥಳೀಯ ನಿವಾಸಿ ಶಾಂತಿ ಅವರ ದೂರಿನಂತೆ ವೇಣೂರು ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಅಧಿನಿಯಮ 1884ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟಕದಲ್ಲಿರುವ ಪಟಾಕಿಗಳನ್ನು ನಿಷ್ಕ್ರಿಯಗೊಳಿಸಲು ನ್ಯಾಯಾಲಯದ ಅನುಮತಿ ಬೇಕಿದ್ದು, ಸದ್ಯ ಗೋದಾಮಿಗೆ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಸಶಸ್ತ್ರ ದಳದ ಒಂದು ತುಕಡಿಯ ಮೂಲಕ ರಕ್ಷಣೆ ಒದಗಿಸಲಾಗಿದೆ.
ಬಿಷಪ್ ಭೇಟಿ
ಸ್ಫೋಟ ನಡೆದ ಸ್ಥಳದಲ್ಲಿ ಸುತ್ತಮುತ್ತ ಮನೆ ಮಂದಿ ಆತಂಕ್ಕೆ ಒಳಗಾಗಿದ್ದರಿಂದ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಹಾಗೂ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಬೆಳ್ತಂಗಡಿ ಬಿಷಪ್ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಅವರು ಹಾನಿಗೊಳಗಾದ ಮನೆ ಮಂದಿಯಾದ ವೆಂಕಪ್ಪ ಮೂಲ್ಯ, ಲೈಸ್ಸಿ ಚೆರಾಡಿ, ಜೋಸೆಫ್ ಮ್ಯಾಥ್ಯೂ ಅವರನ್ನು ಸಂದರ್ಶಿಸಿ ಸಾಂತ್ವನ ಹೇಳಿದರು. ಅಧಿಕಾರಿಗಳು ಸೂಕ್ತ ತನಿಖೆ ಕೈಗೊಳ್ಳಬೇಕು, ಹಾನಿಗೊಳಗಾದವರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೆಕೇಂದು ಆಗ್ರಹಿಸಿದರು.
Related Articles
ಘಟನಾ ಸ್ಥಳದಿಂದ ಅನತಿ ದೂರದ ಮನೆಯ ಶೀಟ್ ಮಾಡು ಕುಸಿತಗೊಂಡು ಚಳಿಯಲ್ಲಿ ರಾತ್ರಿ ಕಳೆಯುತ್ತಿದ್ದ ವೃದ್ಧ ದಂಪತಿ ವೆಂಕಪ್ಪ ಮತ್ತು ಕಮಲಾ ಅವರನ್ನು ಭೇಟಿಯಾದ ಶಾಸಕ ಹರೀಶ್ ಪೂಂಜ ಸ್ಥಳೀಯ ಕಾರ್ಯಕರ್ತರ ಸಹಾಯದಿಂದ ಸೂಕ್ತ ಮೇಲ್ಛಾವಣಿ ದುರಸ್ಥಿಗೊಳಿಸಿ ವಾಸಕ್ಕೆ ಯೋಗ್ಯವಾಗಿಸಿದರು.
Advertisement
ಪಟಾಕಿ ಅಂಗಡಿಗಳಲ್ಲಿ ತಹಶೀಲ್ದಾರ್ ಪರಿಶೀಲನೆಸ್ಫೋಟದ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪಟಾಕಿ ಮಾರಾಟ ಮತ್ತು ಗೋದಾಮು ಮಳಿಗೆಗಳಿಗೆ ಜಿಲ್ಲಾಧಿಕಾರಿ ತಾತ್ಕಾಲಿಕ ಪರವಾನಿಗೆ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಹಾಗೂ ಅಗ್ನಿಶಾಮಕದಳದ ಪ್ರಾದೇಶಿಕ ಅಧಿಕಾರಿ ರಂಗನಾಥ್ ತಂಡ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋದಾಮಿಗೆ ಮಂಗಳವಾರ ದಾಳಿ ನಡೆಸಿ ನಡೆಸಿ ಪರಿಶೀಲಿಸಿದೆೆ. ತಾಲೂಕಿನ 9 ಕಡೆಗಳಲ್ಲಿರುವ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋದಾಮಿನಲ್ಲಿ ನೋಟಿಸ್ ಹಚ್ಚಿ ಬೀಗ ಹಾಕಲಾಗಿದೆ.