Advertisement
ಸ್ಕೇಟಿಂಗ್‌ನಂಥ ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕದ್ರಿ ಉದ್ಯಾನವನದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಈ ರೋಲರ್ ಸ್ಕೇಟಿಂಗ್ ರಿಂಕ್ ಅನ್ನು ನಿರ್ಮಿಸಲಾಗಿತ್ತು. ಆದರೆ ಒಂದು ವರ್ಷದಿಂದ ನಾನಾ ಕಾರಣಗಳಿಂದಾಗಿ ಬಳಕೆಯಾಗದೆ ಪಾಳುಬಿದ್ದಿತ್ತು. ಸದ್ಯದಲ್ಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಸಿಗಲಿದ್ದು, ಅಲ್ಲಿನ ಅವ್ಯವಸ್ಥೆ ಸರಿಪಡಿಸಿ ಆಸಕ್ತರ ಉಪಯೋಗಕ್ಕೆ ನೀಡುವಂತೆ ಸಾರ್ವಜನಿಕರು ಸಂಬಂಧ ಪಟ್ಟ ತೋಟಗಾರಿಕೆ ಇಲಾಖೆಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ.
Related Articles
ಕದ್ರಿ ಸ್ಕೇಟಿಂಗ್ ರಿಂಕ್ ಒಟ್ಟಾರೆ 4 ಎಕ್ರೆ ಪ್ರದೇಶದಲ್ಲಿದೆ. ಒಂದು ಎಕ್ರೆ ಪ್ರದೇಶ ಸ್ಕೇಟಿಂಗ್ ರಿಂಕ್ ಹೊಂದಿದೆ. ಒಂದೆಡೆ ಸ್ಕೇಟಿಂಗ್ ಅಭ್ಯಾಸಕ್ಕೆ ಕ್ರೀಡಾಂಗಣ ಬಳಕೆಯಾದರೆ, ಇದಕ್ಕೆ ಹೊಂದಿಕೊಂಡಂತೆ ಮುಖ್ಯದ್ವಾರದ ಬಳಿ ಇರುವ ಪ್ರದೇಶದಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡಲು ತೋಟಗಾರಿಕಾ ಇಲಾಖೆ ಚಿಂತನೆ ನಡೆಸುತ್ತಿದೆ.
Advertisement
ಹಿರಿಯರಿಗೆ ಸಹಿತ ಸಾರ್ವಜನಿಕರಿಗೆ ನಡೆದಾಡಲು ವಾಕಿಂಗ್ ಟ್ರಾಕ್ ಇರಲಿದ್ದು, ಪಾರ್ಕ್‌ನಲ್ಲಿ ಸುಂದರ ಹೂ-ಗಿಡಗಳು ಕೂಡ ಇರಲಿವೆ. ಪ್ರವಾಸಿಗರನ್ನು ಆಕರ್ಷಿಸಲೆಂದು ತೋಟಗಾರಿಕಾ ಇಲಾಖೆ ಈ ನೂತನ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಕದ್ರಿ ಪಾರ್ಕ್‌ನಲ್ಲಿ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಜಾಗವಿದ್ದು, ಅದೇ ರೀತಿಯ ಪ್ಲೇ ಗ್ರೌಂಡ್ ಕದ್ರಿ ಸ್ಕೇಟಿಂಗ್ ರಿಂಗ್ ಇರುವ ಪ್ರದೇಶದಲ್ಲಿಯೂ ನಿರ್ಮಾಣವಾಗಲಿದೆ.
ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಮಕ್ಕಳಿಗೆ ಆಟವಾಡಲು ಉಪಯೋಗ ವಾದಂತಾಗಿದೆ. ಈ ಎಲ್ಲ ಕಾಮಗಾರಿಗಳು ಮುಂದಿನ ವರ್ಷದಲ್ಲಿ ಪೂರ್ಣಗೊಳ್ಳಲಿವೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.
ಒಂದು ವರ್ಷದ ಟೆಂಡರ್ಹೈ ಫ್ಲೈಯರ್ ಸ್ಕೇಟಿಂಗ್ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಮೂರು ವರ್ಷಗಳ ಅವಧಿಗೆ ಸ್ಕೇಟಿಂಗ್ ರಿಂಕ್ ಟೆಂಡರ್ ನೀಡಬೇಕೆಂದು ತೋಟಗಾರಿಕಾ ಇಲಾಖೆಗೆ ನಾವು ಮನವಿ ಮಾಡಿದ್ದೆವು. ಆದರೆ, ಒಂದು ವರ್ಷಕ್ಕೆ ಟೆಂಡರ್ ನೀಡಲಾಗಿದೆ. ನಾವು ತಿಂಗಳಿಗೆ 9,500 ರೂ. ತೋಟಗಾರಿಕಾ ಇಲಾಖೆಗೆ
ನೀಡಬೇಕಿದೆ. ಅಲ್ಲದೆ, ಹೆಚ್ಚುವರಿಯಾಗಿ ಕ್ರೀಡಾಂಗಣದ ನಿರ್ವಹಣೆ ನಾವೇ ಮಾಡಬೇಕಿದೆ ಎನ್ನುತ್ತಾರೆ. ಟೆಂಡರ್ ಪ್ರಕ್ರಿಯೆ ಪೂರ್ಣ
ಕದ್ರಿ ಬಳಿ ಇರುವ ಸ್ಕೇಟಿಂಗ್ ಕ್ರೀಡಾಂಗಣವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಬೇಸಗೆ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಈ ಕ್ರೀಡಾಂಗಣ ಲಭ್ಯವಾಗಲಿದೆ. ಕ್ರೀಡಾಂಗಣದ ಒಂದಷ್ಟು ಭಾಗವು ಉದ್ಯಾನವನಕ್ಕೆ ಮೀಸಲಿಡಲಾಗಿದೆ.
- ಜಾನಕಿ, ತೋಟಗಾರಿಕಾ ಇಲಾಖೆ
ಹಿರಿಯ ಸಹಾಯಕಿ ಎಪ್ರಿಲ್‌ನಿಂದ ಲಭ್ಯ
ಕದ್ರಿ ಸ್ಕೇಟಿಂಗ್ ರಿಂಕ್ ವರ್ಷದಿಂದ ಪಾಳು ಬಿದ್ದಿತ್ತು. ಈಗ ಟೆಂಡರ್ ಕರೆದಿದ್ದು, ಎಪ್ರಿಲ್ ಮೊದಲ ವಾರದಿಂದ ಕ್ರೀಡಾಪಟುಗಳಿಗೆ ಲಭ್ಯವಾಗಲಿದೆ. ಮೊದಲ ಒಂದು ತಿಂಗಳ ಕಾಲ ಬೇಸಗೆ ಶಿಬಿರ ನಡೆಯಲಿದೆ.
– ಸಂತೋಷ್ ಶೆಟ್ಟಿ,
ಹೈ ಫ್ಲೈಯರ್ ಸ್ಕೇಟಿಂಗ್
ತರಬೇತಿ ಸಂಸ್ಥೆ ಕಾರ್ಯದರ್ಶಿ ನವೀನ್ ಭಟ್ ಇಳಂತಿಲ