Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದಿನದ ವರದಿ ನಿಯಂತ್ರಣಕ್ಕೆ ಬರುತ್ತಿದ್ದು, ಪ್ರವಾ ಸೋದ್ಯಮ ಕ್ಷೇತ್ರವೂ ಚೇತರಿಕೆ ಯತ್ತ ಸಾಗುತ್ತಿದೆ. ಅದ ರಂತೆ ಕದ್ರಿ ಪಾರ್ಕ್ ವೀಕ್ಷಣೆಗೆ ಬರುವವರ ಸಂಖ್ಯೆಯೂ ಏರತೊಡ ಗಿದೆ. ವೀಕೆಂಡ್ ಸಮಯದಲ್ಲಿ, ರಜಾ ದಿನಗಳಲ್ಲಂತೂ ಪುಟಾಣಿ ಮಕ್ಕಳು ಕಾಲ ಕಳೆಯಲು ಹೆತ್ತವರ ಜತೆ ಪಾರ್ಕ್‌ನಲ್ಲಿ ಬರು ತ್ತಿದ್ದಾರೆ. ಹೀಗಿದ್ದಾಗ ರೈಲಿನಲ್ಲಿ ಮಜಾ ಮಾಡೋಣ ಅಂದರೆ ಒಂದು ವರ್ಷದಿಂದ ರೈಲನ್ನು ಕೋಣೆ ಯೊಳಗೆ ಹಾಕಿ ಬೀಗ ಜಡಿಯಲಾಗಿದೆ.
Related Articles
Advertisement
1983 ರಿಂದ ರೈಲು ಓಡಾಟ :
ಕದ್ರಿಪಾರ್ಕ್‌ನಲ್ಲಿ 1983ರಿಂದ ತನ್ನ ಓಡಾಟ ಆರಂಭಿಸಿದ್ದ “ಬಾಲಮಂಗಳ ಎಕ್ಸ್‌ಪ್ರೆಸ್’ ಪುಟಾಣಿ ರೈಲು 2012ರ ವರೆಗೆ ನಿರಂತರವಾಗಿ ಮಕ್ಕಳ ಮನೋರಂಜನೆಯ ಭಾಗ ವಾಗಿತ್ತು. ಆದರೆ ಈ ರೈಲು ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಓಡಾಟ ನಡೆಸುತ್ತಿದ್ದದರಿಂದ ತೀರಾ ಹಳೆಯದಾಗಿತ್ತು. ಈ ಹಿನ್ನೆಲೆಯಲ್ಲಿ ಕದ್ರಿಪಾರ್ಕ್ ನಲ್ಲಿ ಹೊಸ ರೈಲು ತರುವ ಉದ್ದೇಶದಿಂದ 2013ರಲ್ಲಿ ಪುಟಾಣಿ ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಸುಮಾರು ಆರೇಳು ವರ್ಷಗಳ ಕಾಲ ಮಕ್ಕಳಿಗೆ ಕದ್ರಿಪಾರ್ಕ್‌ನಲ್ಲಿ ಪುಟಾಣಿ ರೈಲಿನ ಓಡಾಟ ಇಲ್ಲವಾಗಿತ್ತು. 2018ರಲ್ಲಿ ಮತ್ತೆ ರೈಲು ಸಂಚಾರ ಆರಂಭವಾಗಿತ್ತು. ಆಗ ಮಕ್ಕಳಲ್ಲಿ ರೈಲು ಓಡಾಟದ ಆಸೆಯನ್ನು ಚಿಗುರಿಸಿತ್ತಾದರೂ ಸಮರ್ಪಕವಾಗಿ ಓಡಾಟ ಮಾತ್ರ ಆರಂಭಿಸಿರಲಿಲ್ಲ.
ಸದ್ಯದಲ್ಲೇ ಆರಂಭ: ಕಳೆದ ಕೆಲವು ತಿಂಗಳುಗಳಿಂದ ಕದ್ರಿಯಲ್ಲಿನ ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲು ಸಂಚಾರ ನಿಲ್ಲಸಿಸಲಾಗಿದೆ. ಪುನರಾರಂಭಿಸುವ ಕುರಿತಂತೆ ಈಗಾಗಲೇ ಜಿಲ್ಲಾಡಳಿತದ ಜತೆ ಮಾತುಕತೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ರೈಲು ಸಂಚಾರ ಆರಂಭಿಸುತ್ತೇವೆ.– ಪಾಪ ಬೋವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ