ಕಾರವಾರ :ಕದ್ರಾ ಅಣೆಕಟ್ಟು ನಿಂದ ನೀರು ಹೊರಕ್ಕೆ. ವರ್ಷದಲ್ಲಿ ಎರಡು ಸಲ ಭರ್ತಿಯಾದ ಕದ್ರಾ ಅಣೆಕಟ್ಟಿ ನಿಂದ 5 ಕ್ರಸ್ಟ್ ಗೇಟ್ ತೆಗೆದು ನೀರು ಹೊರಬಿಡಲಾಯಿತು.
38೦೦೦ ಕ್ಯೂಸೆಕ್ಸ್ ನೀರು ಜಲಾಶಯ ಕ್ಕೆ ಹರಿದು ಬರುತ್ತಿದೆ. ಕಾಳಿ ನದಿ ದಂಡೆಯ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
ಮೊದಲ ಸಲ : ಇದೇ ವರ್ಷ ಜುಲೈ 11 ಅಣೆಕಟ್ಟು ತುಂಬಿದ ಕಾರಣ ಕ್ರಸ್ಟ್ ಗೇಟ್ ನಿಂದ ನೀರು ಬಿಡಲಾಗಿತ್ತು.
ಎರಡನೇ ಸಲ : ಇಂದು ಅ. 4 ರವಿವಾರ ಸಂಜೆ 4.3೦ ರಿಂದ ಅಣೆಕಟ್ಟಿನಿಂದ ನೀರು ಬಿಡಲಾಗಿದೆ. ಕದ್ರಾ 3 ಘಟಕಗಳಿಂದ ಸತತ ವಿದ್ಯುತ್ ಉತ್ಪಾದನೆ ನಡೆದಿದೆ. 15೦ ಮೆಗಾವ್ಯಾಟ್ 24 ತಾಸು ನಿರಂತರವಾಗಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಕದ್ರಾ ಜಲಾಶಯದಿಂದ ಐದು ಗೇಟ್ ತೆರೆಯಲಾಗಿದೆ. 10.5 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಒಳಹರಿವು ಹೆಚ್ಚಿರುವುದರಿಂದ ನಾಳೆ ಬೆಳಗಿನವರೆಗೂ ಬಿಡಲಾಗುವುದು ಎಂದು ಜಲಾಶಯ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್ ತಿಳಿಸಿದ್ದಾರೆ.