Advertisement
ಈ ಪ್ರದೇಶದಲ್ಲಿದ್ದ ತಡೆಗೋಡೆ ಹಲವು ವರ್ಷಗಳ ಹಿಂದೆಯೇ ಸಮುದ್ರ ಪಾಲಾಗಿದೆ. ಅದೇ ರೀತಿ ಮೂಸೋಡಿಯಲ್ಲಿ ಕಡಲ್ಕೊರೆತದಿಂದ ಇಸ್ಮಾಯಿಲ್ ಅವರ ಸ್ಥಳದಲ್ಲಿದ್ದ ಗಾಳಿ ಮರಗಳು ಸಮುದ್ರ ಪಾಲಾಗಿವೆ. ಕಿಳಿರಿಯ ಮಸೀದಿ ಮತ್ತು 8 ಮನೆಗಳು ಅಪಾಯದಂಚಿನಲ್ಲಿವೆ. ಮೊಹಮ್ಮದ್, ನಫೀಸ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಾಸರಗೋಡಿನ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮರವನ್ನು ಕಡಿದು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಸುಗಮಗೊಂಡಿತು. ಜೂ. 8ರಿಂದ ಮಳೆ ಆರಂಭಗೊಂಡ ಬಳಿಕ ಜಿಲ್ಲೆಯ 4.7 ಹೆಕ್ಟೇರ್ ಜಾಗದಲ್ಲಿ ಕೃಷಿ ಹಾನಿ ಸಂಭವಿಸಿದೆ. 10 ಮನೆಗಳು ಭಾಗಶಃ ಹಾನಿಗೊಂಡಿವೆ.