Advertisement

ಗಂಧದ ಮರ ಕದಿಯುತ್ತಿದ್ದ ತಮಿಳುನಾಡು ಗ್ಯಾಂಗ್‌ ಸೆರೆ

11:54 AM Mar 07, 2017 | |

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಶ್ರೀಗಂಧ ಮರ ಕಳವು ಮಾಡಿದ್ದ ತಮಿಳುನಾಡು ಮೂಲದ ಏಳು ಮಂದಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಸೇಲಂ ಜಿಲ್ಲೆಯ ಚಂದ್ರನ್‌(34), ಸತ್ಯರಾಜ್‌(28), ಅಣ್ಣಮಲೈ(23), ಸುಬ್ರಮಣಿ(30), ಎ.ಮಹೇಂದ್ರನ್‌(34), ಹರ್ಷದ್‌ ಬಾಷಾ(24) ಹಾಗೂ ಷಣ್ಮುಗ(37) ಬಂಧಿತರು.

Advertisement

ಪ್ರಮುಖ ಆರೋಪಿಗಳಾದ ಬಾಗಲೂರಿನ ಮುಜಾಯಿದ್‌ವುಲ್ಲಾ ಹಾಗೂ ಇಮಾದ್‌ವುಲ್ಲಾ ಸಹೋದರರು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 110 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಚಂದ್ರಗುಪ್ತ ತಿಳಿಸಿದರು.

ತಲೆಮರೆಸಿಕೊಂಡಿರುವ ಆರೋಪಿಗಳಾದ ಮುಜಾಯಿದ್‌ವುಲ್ಲಾ ಮತ್ತು ಇಮಾªದ್‌ವುಲ್ಲಾ ನಗರದ ವಿವಿಧೆಡೆ ಸುತ್ತಾಡಿ ಶ್ರೀಗಂಧ ಮರ ಇರುವ ಸ್ಥಳವನ್ನು ಪತ್ತೆ ಹಚ್ಚುತ್ತಿದ್ದರು. ಬಳಿಕ ತಮಿಳುನಾಡಿನಿಂದ ಕೆಲವರನ್ನು ಕರೆಸಿಕೊಂಡು ಮರವನ್ನು ಕತ್ತರಿಸಿಕೊಂಡು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಧಿಗುತ್ತಿತ್ತು ಎಂದು ಅವರು ಮಾಹಿತಿ ನೀಡಿದರು.

ಆರೋಪಿಗಳ ಬಂಧನದಿಂದ 8 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ. ಜ. 21 ರಂದು ರಾತ್ರಿ 3 ಗಂಟೆ ಸುಮಾರಿಗೆ ಭಾರತೀಯ ವಿಜ್ಞಾನ ಸಂಸ್ಥೆಗೆ ನುಗ್ಗಿದ್ದ ಆರೋಪಿಗಳು ಭದ್ರತಾ ಸಿಬ್ಬಂದಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಕೈ-ಕಾಲು ಕಟ್ಟಿಹಾಕಿ ಶ್ರೀಗಂಧದ ಮರ ಕಳವು ಮಾಡಿಕೊಂಡು ಪರಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next