Advertisement

ಬ್ರಹ್ಮಕಲಶದಿಂದ ಭಕ್ತರ ಮನಸ್ಸು ಸ್ವಚ್ಛ: ಪಲಿಮಾರು ಶ್ರೀ

01:53 AM Jun 09, 2022 | Team Udayavani |

ಉಡುಪಿ: ನ್ಯಾಯಾಲಯ, ದೇವಾಲಯ, ಕರುಣಾಲಯಗಳಾದ ಆಲಯಗಳು ಪ್ರತೀ ಊರಲ್ಲಿದ್ದರೆ ಸಮಾಜದಲ್ಲಿರುವ ಮಹಿಷಾಸುರರು, ಚಂಡಮುಂಡರು, ರಕ್ತಬೀಜಾಸುರರ ನಿವಾರಣೆಯೊಂದಿಗೆ ದೇಶದ ಸುಭದ್ರತೆ, ರಕ್ಷಣೆ ಸಾಧ್ಯ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.

Advertisement

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯನ್ನು ಶ್ರೀಪಾದರು ಉದ್ಘಾ ಟಿಸಿ ಆಶೀರ್ವಚನ ನೀಡಿದರು.

ಶ್ರೀಕೃಷ್ಣಮಠಕ್ಕೂ, ಕಡಿಯಾಳಿಗೂ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದ ಅವರು, ತಾಯಿಗೆ ಬ್ರಹ್ಮಕಲಶ ವಾದರೂ ಅದು ಭಕ್ತರ ಮನದ ಕೊಳೆ, ರಾಗ ದ್ವೇಷ ಕಳೆದುಕೊಂಡು ಸ್ವಚ್ಛವಾದಂತಾಗಿದೆ ಎಂದರು.

ಒಡಿಯೂರು ಮಠದ ಶ್ರೀಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ತಿರುಗು ಮುಚ್ಚಿಗೆಯಲ್ಲಿ ನಾವೆಲ್ಲ ಕ್ರಿಯಾಶೀಲರಾಗಬೇಕೆನ್ನುವ ಸಂದೇಶವಿದೆ. ಅಮ್ಮ ಪದದಲ್ಲಿ ಅಕಾರ, ಉಕಾರ, ಮಕಾರದ ಓಂಕಾರವಿದೆ. ಹಿಂದೂ ಸಮಾಜದ ಮೇಲಿನ ಸವಾರಿ ವಿರುದ್ಧ ಎಚ್ಚರ ಉತ್ತಮ ಲಕ್ಷಣ. ಸಂಸ್ಕಾರ, ಸಂಘಟನೆ, ಸಹಕಾರ, ಸಮೃದ್ಧಿಯೊಂದಿಗೆ ಒಡಿಯೂರಿನ ಸಂಘಟನೆ ಉಡುಪಿಗೂ ವಿಸ್ತರಣೆ ಯಾಗಿದೆ. ರಾಮನೆಂದರೆ ಧರ್ಮ, ಹನುಮನೆಂದರೆ ಸಂಸ್ಕಾರ. ಎರಡರ ಸಮನ್ವಯದಿಂದ ದೇಶ ಸುಭಿಕ್ಷೆ ಸಾಧ್ಯ ಎಂದು ಹೇಳಿದರು.

ಶಾಸಕ ಕೆ. ರಘುಪತಿ ಭಟ್‌ ಪ್ರಸ್ತಾವನೆ ಗೈದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ| ಜಿ.ಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್‌ ಕಾರ್ಯಕಾರಿಣಿ ಸದಸ್ಯ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಧಾರ್ಮಿಕ ಉಪನ್ಯಾಸ ನೀಡಿದರು.

Advertisement

ವಿ.ಕೆ. ಡೆವಲಪರ್ನ ಕರುಣಾಕರ ಶೆಟ್ಟಿ, ಅದಿತಿ ಬಿಲ್ಡರ್ನ ರಂಜನ್‌ ಕೆ., ನಗರಸಭಾ ಸದಸ್ಯರಾದ ಸವಿತಾ ಹರೀಶ್‌, ಅರುಣಾ ಎಸ್‌.ಪೂಜಾರಿ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕಟ್ಟೆ ರವಿರಾಜ್‌ ವಿ.ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ವ್ಯವಸ್ಥಾಪನ ಸಮಿತಿ ಸದಸ್ಯ ಕೆ. ಮಂಜುನಾಥ ಹೆಬ್ಟಾರ್‌, ದೇಗುಲದ ಕಾರ್ಯನಿರ್ವಹಣಾಧಿಕಾರಿ ಗಣೇಶ್‌ ರಾವ್‌ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಸದಸ್ಯ ಮಂಜುನಾಥ ಹೆಬ್ಟಾರ್‌ ಸ್ವಾಗತಿಸಿ, ವಿದ್ಯಾ ಶ್ಯಾಮಸುಂದರ್‌ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next