Advertisement

ದೇವಸ್ಥಾನಗಳಿಂದ ಸಂಸ್ಕೃತಿ ಉಳಿಸುವ ಕೆಲಸ: ಪೇಜಾವರ ಶ್ರೀ

12:54 AM Jun 04, 2022 | Team Udayavani |

ಉಡುಪಿ: ಸಂಸ್ಕೃತಿಯ ಪುನರುತ್ಥಾನವಾದಾಗ ಮಂದಿರಗಳು ಉಳಿಯಲಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.

Advertisement

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇಗುಲದ ಧರ್ಮ ವೇದಿಕೆಯಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆ ಯಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.

ಅನೇಕ ಸಮಸ್ಯೆಗಳು ನಿವಾರಣೆ ಗೊಂಡು ತಾಯಿಯ ಪ್ರೇರಣೆ, ಅನುಗ್ರಹದಿಂದ ಮಂದಿರ ನಿರ್ಮಾಣ ವಾಗಿದೆ. ತಾಯ ಮಡಿಲಿನಲ್ಲಿ ಎಲ್ಲರೂ ಒಂದಾಗಿ ಸಮಾಜದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸಂಸ್ಕೃತಿ ಯನ್ನು ಬೆಳೆಸಿ, ಮಕ್ಕಳಿಗೆ ಹಸ್ತಾಂತರಿ ಸುವ ಕೆಲಸ ಆಗಬೇಕು ಎಂದರು.

ಸಂಸ್ಕೃತಿ, ಸಂಸ್ಕಾರ ಹಸ್ತಾಂತರ: ವಿಶ್ವೇಶ್ವರ ಹೆಗಡೆ ಕಾಗೇರಿ
ಇತಿಹಾಸ ಮರು ಸೃಷ್ಟಿಸುವಂತೆ ದೇಗುಲ ನಿರ್ಮಾಣ ನಡೆದಿದೆ. ಸರಕಾರದ ಅನುದಾನ ಪಡೆಯದೆ ದೇಗುಲದ ನಿರ್ಮಾಣ ಮಾಡಿರು ವುದು ವಿಶೇಷ. ಸಮಾನ ಮನಸ್ಕರು ಸಮಾಜದಲ್ಲಿ ಒಗ್ಗೂಡಿ ಕೆಲಸ ಮಾಡಿದಾಗ ಯಾವುದೇ ಒಳ್ಳೆಯ ಕಾರ್ಯ ನಡೆಸಲು ಸಾಧ್ಯ. ಹಿಂದೂ ಧರ್ಮದ ವಾರಸುದಾರರಾದ ನಾವು ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿಯನ್ನು ಹಸ್ತಾಂತರಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಜೀರ್ಣೋದ್ಧಾರ ಸಮಿತಿ ಗೌರವಾ ಧ್ಯಕ್ಷ, ಶಾಸಕ ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಸೋಂದಾ ಭಾಸ್ಕರ್‌ ಭಟ್‌ ಧಾರ್ಮಿಕ ಉಪನ್ಯಾಸ ನೀಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್‌ ಎಸ್‌. ಕಲ್ಮಾಡಿ, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌ ಸಾಲ್ಯಾನ್‌, ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಕೆ. ಉದಯ ಕುಮಾರ್‌ ಶೆಟ್ಟಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ಬಾಲಕೃಷ್ಣ ಶೆಟ್ಟಿ, ನಗರಸಭೆ ವಿಪಕ್ಷ ನಾಯಕ ರಮೇಶ್‌ ಕಾಂಚನ್‌, ನಗರಸಭಾ ಸದಸ್ಯರಾದ ಗಿರೀಶ್‌ ಎಂ. ಅಂಚನ್‌, ಗೀತಾ ಡಿ. ಶೇಟ್‌, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕಟ್ಟೆ ರವಿರಾಜ್‌ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯ ನಾಗರಾಜ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

ಸರ್ವಮಂಗಳ ಟ್ರಸ್ಟ್‌ನ ಮುರುಳಿ ಕೃಷ್ಣ ಉಪಾಧ್ಯ ಅವರನ್ನು ಸಮ್ಮಾನಿಸ ಲಾಯಿತು. ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ರಾಘವೇಂದ್ರ ಕಿಣಿ ಸ್ವಾಗತಿಸಿ, ಜತೆಕಾರ್ಯದರ್ಶಿ ಸತೀಶ್‌ ಕುಲಾಲ್‌ ವಂದಿಸಿದರು. ಶಿಕ್ಷಕಿ ಅಕ್ಷತಾ ಸನಿಲ್‌, ರಾಜಶೇಖರ ಶ್ಯಾಮರಾವ್‌ ನಿರ್ವಹಿಸಿದರು.

ಕಾತ್ಯಾಯಿನಿ ಕಲ್ಯಾಣ ಮಂಟಪ ಹಸ್ತಾಂತರ
ಕಾತ್ಯಾಯಿನಿ ಕಲ್ಯಾಣ ಮಂಟಪ ಮತ್ತು ದೇಗುಲದ ನಡುವೆ ಇದ್ದ ವಿವಾದವು ಶಾಸಕ ರಘುಪತಿ ಭಟ್‌ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಬಗೆಹರಿದಿದ್ದು, ಕಡಿಯಾಳಿ ಕಾತ್ಯಾಯಿನಿ ಮಂಟಪ ಸರ್ವಮಂಗಳ ಟ್ರಸ್ಟ್‌ನ ಮುರುಳಿಕೃಷ್ಣ ಉಪಾಧ್ಯ ಅವರು ಶ್ರೀ ವಿಶ್ವಪ್ರಸನ್ನತೀರ್ಥರು ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಯ ಸಮ್ಮುಖದಲ್ಲಿ ಡಾ| ರವಿರಾಜ ಆಚಾರ್ಯ ಅವರಿಗೆ ಕಾತ್ಯಾಯಿನಿ ಕಲ್ಯಾಣ ಮಂಟಪದ ಬೀಗದ ಕೀಲಿಕೈಯನ್ನು ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next