Advertisement
ಕ್ರಿ.ಶ. 7- 8ನೇ ಶತಮಾನದಿಂದಲೂ ಭಕ್ತರನ್ನು ರಕ್ಷಿಸುತ್ತಿರುವ ಶಿವಳ್ಳಿಯ ಪ್ರಾಚೀನ ದೇಗುಲ ಇದಾಗಿದೆ. ಇಲ್ಲಿನ ವಿಗ್ರಹವು ಕ್ರಿ.ಶ. 600-700ರ ಶಿಲ್ಪಶೈಲಿಯನ್ನು ಹೊಂದಿದೆ. ಅನಂತೇಶ್ವರ ದೇಗುಲದ ಸುತ್ತಮುತ್ತ ಸ್ಥಾಪಿಸಿದ 4 ದುರ್ಗಾಲಯಗಳಲ್ಲಿ ಕಡಿಯಾಳಿಯೂ ಒಂದು.
ಶ್ರೀ ಕೃಷ್ಣಮಠಕ್ಕೂ ಕಡಿಯಾಳಿ ದೇಗು ಲಕ್ಕೂ ಸಂಬಂಧವಿದೆ. ಅಷ್ಟಮಠಗಳ ಪೀಠಾಧಿಪತಿಗಳು ಶ್ರೀಕೃಷ್ಣನ ಪೂಜೆಗೆ ತೊಡಗುವ ಮುನ್ನ ಇಲ್ಲಿನದೇವಿಯ ಆಶೀರ್ವಾದ ಪಡೆಯುತ್ತಾರೆ. ಪರ್ಯಾಯ ಅವಧಿಯಲ್ಲಿ ಪ್ರತೀ ಶುಕ್ರವಾರ ದೇಗುಲದಲ್ಲಿ ನೆರವೇರುವ ವಿಪ್ರ ಸುವಾಸಿನಿ ಆರಾಧನೆಗೆ ಮಠದಿಂದ ಪೂಜಾ ಸಾಮಗ್ರಿಗಳನ್ನು ಕಳುಹಿಸುವ ಪರಿಪಾಠವಿದೆ. ಸಮಿತಿ ರಚನೆ
ಸುತ್ತುಪೌಳಿ, ಪ್ರಾಂಗಣದ ಕಾಮಗಾರಿ ಪ್ರಾರಂಭವಾಗದೆ ಭಕ್ತರಿಗೆ ತೊಂದರೆಯಾಗುತ್ತಿದ್ದ ನೆಲೆಯಲ್ಲಿ ದೇಗುಲದ ನೂತನ ವ್ಯವಸ್ಥಾಪನ ಸಮಿತಿ ಕೋರಿಕೆಯಂತೆ ಗ್ರಾಮಸ್ಥರ ಸಭೆ ನಡೆಸಿ ಗೌರವಾಧ್ಯಕ್ಷರಾಗಿ ಶಾಸಕರಘುಪತಿ ಭಟ್, ಅಧ್ಯಕ್ಷರಾಗಿ ಶ್ರೀನಾಗೇಶ್ ಹೆಗ್ಡೆ, ಪ್ರ. ಕಾರ್ಯದರ್ಶಿಯಾಗಿ ಕೆ. ರಾಘವೇಂದ್ರಕಿಣಿ, 17 ಮಂದಿ ಸದಸ್ಯರಿರುವ ಜೀರ್ಣೋದ್ಧಾರ ಸಮಿತಿ ರಚಿಸ ಲಾಯಿತು.
Related Articles
ದೇಗುಲದ ಸುತ್ತುಪೌಳಿ ಕೆಂಪುಕಲ್ಲಿನ ಕಲಾಕೃತಿ ಹೊಂದಿದ್ದು, ಮಧ್ಯದಲ್ಲಿ ಶಿಲೆಯ ಭಿತ್ತಿಸ್ತಂಭ, ಶಿಲಾಮಯ ಪಂಜರ ಒಳಗೊಂಡಿರುವುದು 3 ಜಿಲ್ಲೆಗಳಲ್ಲಿ ಪ್ರಥಮ. ಅಗ್ರಸಭೆಯು ತ್ರಿದಳ ಛಾವಣಿ ಹೊಂದಿದೆ. ಆಕರ್ಷಕ ವ್ಯಾಳಕಂಬ, ಸಿಂಹಕಾಂತ ಜಗುಲಿಯ ಕಂಬಗಳು, ಅಗ್ರಸಭೆಯ ಒಳಬದಿಯಲ್ಲಿ ನಕ್ಷತ್ರಾಕಾರದ ಕಂಬಗಳು, ಮುಖಯಾಮವು ದ್ವಿತಳ ಆಗಿರುತ್ತದೆ. ಶಿಲೆಯ ಕೆಲಸವು ಎಲ್ಲೂರು ವಿಷ್ಣುಮೂರ್ತಿ ಭಟ್, ಜೀರ್ಣೋದ್ಧಾರ ಕಾರ್ಯವು ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯಭಟ್ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಮರದ ಕೆತ್ತನೆ ಕೆಲಸವನ್ನು ದೊಡ್ಡಣಗುಡ್ಡೆ ಸುದರ್ಶನ ಆಚಾರ್ಯ ನಿರ್ವಹಿಸುತ್ತಿದ್ದಾರೆ.
Advertisement
ಸಮರ್ಥರ ನೇತೃತ್ವದೇಗುಲದ ಪವಿತ್ರಪಾಣಿಯಾಗಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯ ಸೇವೆ ಸಲ್ಲಿಸುತ್ತಿದ್ದಾರೆ. 1997ರಲ್ಲಿ ಅನಂತರಾಮ ಉಪಾಧ್ಯರ ಮಾರ್ಗದರ್ಶನದಲ್ಲಿ ಗರ್ಭಗುಡಿ ಕಾಮಗಾರಿಯನ್ನು ಹೊರ ಭಾಗದಿಂದಲೇ ಕಲಾತ್ಮಕವಾಗಿ ಜೀರ್ಣೋದ್ಧಾರ ಮಾಡಲಾಗಿದೆ. ಆಗ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿದ್ದ ಕೆ.ಕೆ. ಪೈಯವರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದರು. ಅಂದು ಗೃಹ ಸಚಿವರಾಗಿದ್ದ ಡಾ| ವಿ.ಎಸ್. ಆಚಾರ್ಯರು ಜೀರ್ಣೋದ್ಧಾರಕ್ಕೆ ಮಾರ್ಗದರ್ಶನವಿತ್ತಿದ್ದರೆ, ಈಗ ಅವರ ಪುತ್ರ ಡಾ| ರವಿರಾಜ್ ವಿ. ಆಚಾರ್ಯರ ನೇತೃತ್ವದಲ್ಲಿ ವ್ಯವಸ್ಥಾಪನ ಮಂಡಳಿ ಕಾರ್ಯಾಚರಿಸುತ್ತಿದೆ. ಸಮಗ್ರ ಜೀರ್ಣೋದ್ಧಾರದೇಗುಲದ ಒಳಾಂಗಣ ನೆಲಹಾಸು, ಗ್ರಾನೈಟ್, ಹೊರಾಂಗಣ ಕಾಂಕ್ರಿಟೀಕರಣಗೊಳಿಸಲು ನಿರ್ಣಯಿಸಲಾಗಿದೆ. ಯಾಗಶಾಲೆ, ವ್ಯಾಘ್ರಚಾಮುಂಡಿ-ಪರಿವಾರ ದೈವಗಳಗುಡಿ, ಧ್ವಜಸ್ತಂಭ, ಮಹಾಬಲಿಪೀಠವನ್ನು ನೂತನವಾಗಿ ನಿರ್ಮಿಸುವ ಯೋಜನೆಯಿದೆ. ಅಗ್ರಸಭೆಯ ಛಾವಣಿಗೆ ತಾಮ್ರ ಹೊದಿಸಲು ನಿರ್ಧರಿಸಿದ್ದು, ಭಕ್ತರ ಸಹಕಾರ ದೊರೆತರೆ ಹೆಂಚು ಛಾವಣಿಯ ಬದಲು ಸುತ್ತುಪೌಳಿಯ ಛಾವಣಿಗೂ ತಾಮ್ರ ಹೊದಿಸುವ ಗುರಿಯಿದೆ. ಮಾದರಿ ಕರಸೇವೆ
ದೇಗುಲದ ಒಳಾಂಗಣ, ಸುತ್ತುಪೌಳಿ, ಹೊರಾಂಗಣ ಕಾಮಗಾರಿ ಸುಮಾರು 7 ಕೋ.ರೂ. ವೆಚ್ಚದಲ್ಲಿ ಶಿಲಾಮಯಗೊಳ್ಳಲಿದೆ. ಗ್ರಾಮಸ್ಥರು ಕರಸೇವೆಯಿಂದ ದೇಗುಲದ ಸಂಪೂರ್ಣ ಅಡಿಪಾಯ ಕಾಮಗಾರಿಯನ್ನು ನೆರವೇರಿಸಿದ್ದಾರೆ.