Advertisement

ಕಡೇಮನುಗನಹಳ್ಳಿ ವಿಶೇಷ ದಾಖಲಾತಿ ಆಂದೋಲನ

02:14 PM Jun 01, 2018 | |

ಹುಣಸೂರು: ತಾಲೂಕಿನ ಕಡೇಮನುಗನಹಳ್ಳಿ ಗ್ರಾಪಂ ಬಿ.ಆರ್‌.ಕಾವಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ದಾಖಲಾತಿ ಆಂದೋಲನದ ಶಾಲೆ ಕಡೆ ನನ್ನ ನಡೆ ಎಂಬ ಜಾಗೃತಿ ಜಾಥಾ ಮೂಲಕ ಗ್ರಾಮಸ್ಥರ ಗಮನ ಸೆಳೆದರು.

Advertisement

ಜಾಥಕ್ಕೆ ಚಾಲನೆ ನೀಡಿದ ಶಾಲೆಯ ಮುಖ್ಯ ಶಿಕ್ಷಕ ಆರ್‌.ಪ್ರವೀಣ್‌ಕುಮಾರ್‌ ಮಾತನಾಡಿ, ರಾಜ್ಯ ಸರಕಾರ ರಾಜ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ವಿಶೇಷ  ದಾಖಲಾತಿ ಆಂದೋಲನದ “ಶಾಲೆ ಕಡೆ ನನ್ನ ನಡೆ’ ಕಾರ್ಯಕ್ರಮದಡಿ ಜಾಗೃತಿ ಮೂಡಿಸಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಮನವೊಲಿಸಿ ಮತ್ತೇ ಶಾಲೆಗೆ ಸೇರಿಸಿ ಶಿಕ್ಷಣ ನೀಡುವ ವಿಶೇಷ ಜನಾಂದೋಲನ ಕಾರ್ಯಕ್ರಮವಾಗಿದೆ. ಇದಕ್ಕೆ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಶಿಕ್ಷಕ ವೆಂಕಟೇಶ್‌ ಮಾತನಾಡಿ, ಸರ್ಕಾರ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡಬೇಕೆಂದು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ವಾರದ ಆರು ದಿನಗಳಲ್ಲಿ ಹಾಲು ನೀಡುವಿಕೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ವಿದ್ಯಾರ್ಥಿ ವೇತನ, ಅಲ್ಲದೆ ನಿತ್ಯ ಹಾಜರಾತಿ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯ ಹಾಗೂ ಸವಲತ್ತುಗಳನ್ನು ಎಲ್ಲಾ ಮಕ್ಕಳು ಪಡೆದುಕೊಂಡು ಉತ್ತಮ  ವಿದ್ಯಾವಂತರಾಗಿ ದೇಶದ ಸತøಜೆಗಳಾಗಬೇಕಾಗಿ ತಿಳಿಸಿದರು. 

ಪ್ರೌಢಶಾಲೆಯಲ್ಲಿ ಸಿಹಿ ಊಟ ಆರಂಭ: ನೇರಳಕುಪ್ಪೆ ಸರಕಾರಿ ಪ್ರೌಢಶಾಲೆಯ ಪ್ರಾರಂಬೋತ್ಸವದ ಅಂಗವಾಗಿ 8ನೇ ತರಗತಿ ವಿದ್ಯಾರ್ಥಿಗಳ ನೋಂದಣಿ ನಡೆಯಿತು. ನಂತರ ಶಾಲಾಭಿವೃದ್ಧಿ ಸಮಿತಿ ಆದ್ಯಕ್ಷ ಕೆ.ಎಸ್‌.ಆನಂದ್‌ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಗಳನ್ನು ವಿತರಿಸಿದರು. ಮಕ್ಕಳಿಗೆ ಸಿಹಿ ಊಟ ಬಡಿಸಲಾಯಿತು. ಮುಖ್ಯ ಶಿಕ್ಷಕ ಕುಮಾರಸ್ವಾಮಿ ಹಾಗೂ ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next