Advertisement

ಹೆಬ್ಟಾವಿಗೆ “ತುತ್ತಾದ’ಕಡವೆ ಮರಿ

04:46 PM Oct 05, 2018 | |

ಚಿಕ್ಕಮಗಳೂರು: ಹೆಬ್ಟಾವೊಂದು ಕಡವೆ ಮರಿಯೊಂದನ್ನು ನುಂಗಿದ ಘಟನೆ ಸಮೀಪದ ಭಕ್ತರಹಳ್ಳಿಯಲ್ಲಿ ಗುರುವಾರ ನಡೆದಿದೆ. ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ಕಡವೆ ಭಕ್ತರಹಳ್ಳಿಯ ಹೊಲಕ್ಕೆ ಬಂದಿದೆ. ಆಹಾರ ಅರಸುತ್ತ ಬಂದ ಹೆಬ್ಟಾವು ಕಡವೆ ಮರಿಯನ್ನು ಒಮ್ಮೆಗೆ ಸುತ್ತಿಕೊಂಡು ನುಂಗಲು ಆರಂಭಿಸಿದೆ. ಇದನ್ನು ನೋಡಿದ ಕೆಲವರು ಕಡವೆ ಮರಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಹೆಬ್ಟಾವಿನ ಬಿಗಿ ಹಿಡಿತಕ್ಕೆ ಸಿಲುಕಿ ಕಡವೆ ಮರಿ ಉಸಿರುಕಟ್ಟಿ ಪ್ರಾಣ ಕಳೆದುಕೊಂಡಿದೆ.

Advertisement

ಹೆಬ್ಟಾವಿನಿಂದ ಕಡವೆಯನ್ನು ರಕ್ಷಿಸಲು ಪ್ರಯತ್ನಿಸಿದಾಗ ಕಡವೆಗೂ ಸ್ವಲ್ಪ ಸಣ್ಣ ಪುಟ್ಟ ಗಾಯಗಳಾಗಿದೆ. ಇತ್ತ ಕಡವೆಯನ್ನು ನುಂಗಿ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಹೆಬ್ಟಾವು ಬಳಲಿಕೆಯಿಂದ ಹಾಗೆ ಮಲಗಿದೆ.

ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ವಲಯಾರಣ್ಯಾಕಾರಿ ಎಸ್‌.ಎಲ್‌. ಶಿಲ್ಪಾ ಹಾಗೂ ಸಹಾಯಕ ವಲಯಾರಣ್ಯಾಧಿಕಾರಿ ವೆಂಕಟೇಶ್‌ ಅವರಿಗೆ ಕರೆ ಮಾಡಿ ಸುದ್ದಿ ತಿಳಿಸಿದರು. ಇಲಾಖೆಯ ಪಶುವೈದ್ಯ ಡಾ| ನಾಗೇಶ್‌ ಹಾಗೂ ಸ್ನೇಕ್‌ ನರೇಶ್‌ ಸಹ ಸ್ಥಳಕ್ಕೆ ಧಾವಿಸಿ ಹೆಬ್ಟಾವಿಗೆ ಪ್ರಥಮ ಚಿಕಿತ್ಸೆ ನೀಡಿ ಹಾಸನದ ಪಶುವೈದ್ಯಕೀಯ ಕಾಲೇಜಿನ ಸಂಶೋಧನಾ ಕೇಂದ್ರಕ್ಕೆ ಕೊಂಡೊಯ್ದರು. ಪ್ರಥಮ ಚಿಕಿತ್ಸೆ ನೀಡಿದ ನಂತರ ಅದನ್ನು ಕಾಡಿಗೆ ಬಿಡಲಾಗುವುದೆಂದು ಅರಣ್ಯ ಇಲಾಖೆ ತಿಳಿಸಿ¨

Advertisement

Udayavani is now on Telegram. Click here to join our channel and stay updated with the latest news.

Next