Advertisement

ಶಿರಸಿ: ಫೆ.25,26 ಕ್ಕೆ ಕದಂಬೋತ್ಸವ; ಹೆಬ್ಬಾರ್

02:57 PM Jan 31, 2023 | Team Udayavani |

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ರಾಜ್ಯ ಸರಕಾರದ ಕದಂಬೋತ್ಸವವನ್ನು ಫೆಬ್ರವರಿ 25,26 ರಂದು ನಡೆಸಲು ಯೋಜಿಸಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಕೂಡಾ ಉದ್ಘಾಟನೆಗೆ ಆಗಮಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.

Advertisement

ಶಿರಸಿ ಬಿಸಲಕೊಪ್ಪದ ಕುಪ್ಪಳ್ಳಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಕೋವಿಡ್ ಕಾರಣದಿಂದ ಮೂರು ವರ್ಷದಿಂದ ಕದಂಬೋತ್ಸವ ಆಗಿಲ್ಲ. ಪ್ರತಿಷ್ಠಿತ ಪಂಪ ಪ್ರಶಸ್ತಿ ಕೂಡ ಮೂರು ವರ್ಷಗಳ ಕಾಲದ್ದು ಪ್ರದಾನ ಆಗಬೇಕಿದೆ. ಈ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರರಿಗೂ ತಿಳಿಸಿದ್ದೇನೆ. ಸಂಭ್ರಮದ ಉತ್ಸವ ನಡೆಸಲು ಯೋಜಿಸಲಾಗುತ್ತಿದೆ ಎಂದರು.

ಅದೇ ದಿನ ಬನವಾಸಿ ಮಧುಕೇಶ್ವರ ದೇವರಿಗೆ ನಿರ್ಮಾಣ ಮಾಡಲಾಗುವ ನೂತನ ರಥದ ಸಮರ್ಪಣೆ ಕೂಡ ನಡೆಯಲಿದೆ ಎಂದೂ ತಿಳಿಸಿದರು.

ದೊಡ್ಡ ಮರಕ್ಕೇ ಕಲ್ಲು ಹೊಡ್ಯೋರು ಜಾಸ್ತಿ; ಹೆಬ್ಬಾರ್

ಶಿರಸಿ: ದೊಡ್ಡ ಮರಕ್ಕೇ ಕಲ್ಲು ಹೊಡ್ಯೋರು ಜಾಸ್ತಿ. ಒಂದಲ್ಲ ಒಂದು ಕಡೆ ತಾಗಬಹುದು ಎಂಬುದು ಅವರ ಲೆಕ್ಕಾಚಾರ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾರ್ಮಿಕವಾಗಿ ನುಡಿದರು.

Advertisement

ಅವರು ಸೋಮವಾರ ಬಿಸಲಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ಕು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ನನ್ನ ಬದುಕಿನಲ್ಲಿ ನನ್ನ ಶತ್ರುವಿದ್ದರೂ ಅವರ ಬಗ್ಗೆ ಹಗುರವಾಗಿ ಮಾತನಾಡುವದಿಲ್ಲ. ಕಾಂಗ್ರೆಸ್ಸಿಗರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next