ಬೆಂಗಳೂರು: ನೆಲ, ಜಲ, ಹಸಿರು, ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ಧ್ಯೇಯ ಹೊಂದಿರುವ ಕಾಡುಮಲ್ಲೇಶ್ವರ ಗೆಳೆಯರ ಬಳಗ(ರಿ)ಆಯೋಜಿಸಿರುವ ನಾಲ್ಕು ದಿನಗಳ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಶುಕ್ರವಾರ ಆರಂಭಗೊಂಡಿದೆ. ನವೆಂಬರ್ 23, 24, 25 ಮತ್ತು 26ರವರೆಗೆ ಪರಿಷೆ ನಡೆಯಲಿದೆ.
ಬೆಳಗ್ಗೆ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜೆಯೊಂದಿಗೆ ಪರಿಷೆ ಆರಂಭಗೊಂಡಿದೆ. 11.30ಕ್ಕೆ ಮಲ್ಲೇಶ್ವರ ಚಿತ್ರ ಪರಿಷೆ ನಡೆಯಿತು. ಸಂಜೆ 7ಗಂಟೆಗೆ ನಮಾಮಿ ಮಲ್ಲೇಶ್ವರ ಶಿವ ದೀಪೋತ್ಸವ ನಡೆಯಲಿದೆ ಎಂದು ಕಾಡು ಮಲ್ಲೇಶ್ವರ ಗೆಳೆಯರ ಬಳಗ ತಿಳಿಸಿದೆ.
24ರಂದು ಬೆಳಗ್ಗೆ ಹಸಿರು ಚೈತನ್ಯ ಪುನಶ್ಚೇತನೋತ್ಸವ, ಸಂಜೆ 6ಗಂಟೆಗೆ 113ನೇ ಹುಣ್ಣಿಮೆ ಹಾಡಲ್ಲಿ ಮತ್ತೆ ಡಾ.ರಾಜ್ ಮಧುರ ನೆನಪಿನಗಾನ ಸೃಷ್ಟಿ ನಿರಂತರ ತಂಡದಿಂದ ಗಾಯನ. 25ರಂದು 11ಗಂಟೆಗೆ ನಾಟ್ಯ ವಿಶಾರದಾ ಸಂಗಮ, ಸಂಜೆ 5.30ಕ್ಕೆ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಜನಪದ ಝಲಕ್.
26ರಂದು ಸಂಜೆ 4ಗಂಟೆಗೆ ಕಾಡುಮಲ್ಲೇಶ್ವರ ಸ್ವಾಮಿಗೆ ಕಡಲೆಕಾಯಿ ಅಭಿಷೇಕ, ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಹುಣ್ಣಿಮೆ ಹಾಡು ಗಾನಪರ್ವ ಖ್ಯಾತ ಗಾಯಕಿ ಎಂಡಿ ಪಲ್ಲವಿ ಮತ್ತು ತಂಡದವರಿಂದ ಸುಗಮ ಸಂಗೀತ.
ವಿಡಿಯೋ: ಫಕ್ರುದ್ದೀನ್