Advertisement
ಶ್ರೀ ಆಂಜನೇಯ ಸ್ವಾಮಿಗೆ ಕಡಲೆಕಾಯಿ, ಅರಿಶಿನ ಕುಂಕುಮ ಅಲಂಕಾರ ಮಾಡಲಾಯಿತು. ಸಹಸ್ರ ನಾಮ ಅರ್ಚನೆ ನಡೆಯಿತು. ಶ್ರೀಗಬೀರಲಿಂಗೇಶ್ವರ ಸ್ವಾಮಿ, ಭಕ್ತ ಕನಕದಾಸ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಾರ್ತಿಕ ಮಾಸ ದೀಪ ದರ್ಶನವನ್ನು ನಡೆಸಿದರು. ಕಳೆದ 2 ವರ್ಷದಿಂದ ಕೊರೊನಾದಿಂದ ಸರಳವಾಗಿ ದೇಗುಲದಲ್ಲೇ ಕಡಲೆಕಾಯಿ ಪರಿಷೆ ಮಾಡಲಾಗಿತ್ತು. ಹಲವು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಕೊರೊನಾ ಇಳಿಮುಖ ವಾಗಿರುವುದರಿಂದ ವಿಜೃಂಭಣೆಯಿಂದ ಕಡಲೆಕಾಯಿ ಪರಿಷೆ ಮಾಡಲಾಗಿತ್ತು.
Related Articles
Advertisement
ಪೂಜಾ ಕಾರ್ಯಕ್ರಮದಲ್ಲಿ ಜೈ ಮಾರುತಿ ಭಕ್ತ ಮಂಡಳಿ ಗೌರವಾಧ್ಯಕ್ಷ ಕೆ.ಮೋಟಪ್ಪ, ಅಧ್ಯಕ್ಷ ಶಿವನಾಪುರದ ಎಸ್.ಸಿ.ರಮೇಶ್, ಉಪಾಧ್ಯಕ್ಷ ಬಿ.ಕೆ. ಶಿವಪ್ಪ, ಎಸ್.ಆರ್. ಮುನಿರಾಜು, ಕಾರ್ಯಾಧ್ಯಕ್ಷ ಸತ್ಯನಾರಾಯಣಚಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಎನ್.ಶಶಿಧರ್ ಹಾಗೂ ಭಕ್ತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.
ನಗರ ಹಾಗೂ ಸುತ್ತಮುತ್ತಲಿನ ಜನರು ಹೆಚ್ಚು ಬರುವುದರಿಂದ ವ್ಯಾಪಾರ ಚೆನ್ನಾಗಿದೆ. ಆಂಜನೇಯ ಸ್ವಾಮಿ ಭಕ್ತ ಮಂಡಳಿ ಅವರು ಜಾಗ ಅಭಿವೃದ್ಧಿಪಡಿಸಿ, ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಡಲೆಕಾಯಿ ಹೆಚ್ಚು ಬೆಲೆಯಾದರೂ ಗ್ರಾಹಕರು ಖರೀದಿಸುತ್ತಾರೆ. ಕೆ.ಜಿಗೆ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. – ಗೋಪಾಲ್, ವ್ಯಾಪಾರಿ ದೇವಾಲಯ ಸಮಿತಿ
ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಇಲ್ಲಿ ಕಡಲೆಕಾಯಿ ಸವಿಯಲು ಜನರು ಬರುತ್ತಾರೆ. ಆಂಜನೇಯ ಸ್ವಾಮಿ, ಗವಿ ವೀರಭದ್ರಸ್ವಾಮಿ, ಭೀರಲಿಂಗೇಶ್ವರ ಸ್ವಾಮಿ, ಗಣಪತಿ ಸೇರಿದಂತೆ ವಿವಿಧ ದೇಗುಲಗಳಿವೆ. ಈ ಗುಟ್ಟವು ಪ್ರಾಕೃತಿಕವಾಗಿಯೂ ಗಮನ ಸೆಳೆಯುತ್ತಿದೆ. ಪ್ರಶಾಂತ ವಾತಾವರಣ ಹೊಂದಿದೆ. – ಅನುರಾಧ, ಭಕ್ತೆ
ಹಿರಿಯರು ಕಡಲೆಕಾಯಿ ಪರಿಷೆ ಪ್ರಾರಂಭಿಸಿದ್ದರು. ಹಿರಿಯರ ಮಾರ್ಗದರ್ಶನದಂತೆ ಕಡಲೆಕಾಯಿ ಪರಿಷೆ ಮುಂದುವರಿಸಿಕೊಂಡು ಹೋಗಿದ್ದೇವೆ. ಪ್ರತಿ ವರ್ಷವೂ ಸಾವಿರಾರು ಜನರು ಆಂಜನೇಯ ಸ್ವಾಮಿ ದೇವಾಲಯಕ್ಕೆ ಬಂದು ಸ್ವಾಮಿ ದರ್ಶನ ಮಾಡುತ್ತಿದ್ದಾರೆ. – ಶಿವನಪುರ ಎಸ್.ಸಿ.ರಮೇಶ್, ಅಧ್ಯಕ್ಷ, ಜೈ ಮಾರುತಿ ಭಕ್ತ ಮಂಡಳಿ ಸೇವಾ ಸಮಿತಿ