ಬನಹಟ್ಟಿ: ಇಂದಿನ ಆಧುನಿಕ ದಿನಗಳಲ್ಲಿ ಓದುಗನೇ ನಿಜವಾದ ನಾಯಕ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ಗ್ರಂಥಾಲಯಗಳನ್ನು ಬಳಕೆ ಮಾಡಿಕೊಂಡು ಉತ್ತಮ ಜ್ಞಾನ ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ರೀಡ್ ಬುಕ್ ಫೌಂಡೇಶನ್ ಅಧ್ಯಕ್ಷ ಡಾ| ಎಸ್.ಎಲ್. ಕಾಡದೇವರಮಠ ತಿಳಿಸಿದರು.
ಶನಿವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ನಡೆದ ಕಾಲೇಜು ಗ್ರಂಥಾಲಯದಲ್ಲಿ ಬಳಕೆದಾರರ ಸಂಬಂಧ ನಿರ್ವಹಣೆ ಕುರಿತು ಹಮ್ಮಿಕೊಂಡ ರಾಷ್ಟ್ರಮಟ್ಟದ ಒಂದು ದಿನದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ನನ್ನ ಏಳ್ಗೆಯ ಶಿಲ್ಪ ನಾನೇ ಎಂಬ ಯೋಜನೆ ಅಡಿಯಲ್ಲಿ 8ನೇ ವರ್ಗದಿಂದ ಪದವಿಮಟ್ಟದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಹದಿನೈದು ಸಾವಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಲಬುರಗಿ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ಸುರೇಶ ಜಂಗೆ ಪ್ರಧಾನ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಬೆಳಗಾವಿಯ ಡಾ| ವಿನಾಯಕ ಬಂಕಾಪುರ, ಧಾರವಾಡದ ಡಾ| ರಮೇಶ ನಾಯಕ, ಸೊಲ್ಲಾಪುರದ ಡಾ.ವಿಜಯಕುಮಾರ ಮೂಲಿಮನಿ, ಹುಬ್ಬಳ್ಳಿಯ ಪ್ರೊ| ಬಿ.ಎಸ್.ಮಾಳವಾಡ ಮಾತನಾಡಿದರು. ಜನತಾ ಶಿಕ್ಷಣ ಸಂಘದ ಅಧ್ಯಕ್ಷ ಸುಭಾಸಚಂದ್ರ ಭದ್ರನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಬಸವರಾಜ ಜಾಡಗೌಡ, ಉಪಾಧ್ಯಕ್ಷ ಶ್ರೀಶೈಲ ಭದ್ರನವರ, ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಣಕಾರ, ಎಂ.ಎಸ್.ಮುನ್ನೊಳ್ಳಿ ಇದ್ದರು.
ಸುರೇಖಾ ಜಾಧವ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಸ್ವಾಗತಿಸಿದರು. ಗ್ರಂಥಪಾಲಕ ಪ್ರೊ|ವೈ.ಬಿ.ಕೊರಡೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ| ರಶ್ಮಿ ಕೊಕಟನೂರ ನಿರೂಪಿಸಿದರು. ಡಾ| ಮಂಜುನಾಥ ಬೆನ್ನೂರ ವಂದಿಸಿದರು. ಜನತಾ ಸಂಘದ ಆಡಳಿತ ಮಂಡಳಿಯ ಸದಸ್ಯರು, ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ವಿಶ್ವ ವಿದ್ಯಾಲಯಗಳ ಮತ್ತು ಕಾಲೇಜುಗಳ ಗ್ರಂಥಪಾಲಕರು ಇದ್ದರು.