ಕಡಬ: ರಾಜ್ಯ ಬಜೆಟ್‌ನಲ್ಲಿ ಕಡಬ ತಾಲೂಕು ಅನುಷ್ಠಾನಗೊಳಿಸುವ ಸಲುವಾಗಿ ಅನುದಾನ ಒದಗಿಸಿರುವುದನ್ನು ಸ್ವಾಗತಿಸಿ ಬುಧವಾರ ಕಡಬದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಆ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಅವರು ಮಾತನಾಡಿ, ಕಡಬ ಭಾಗದ ಜನರ 5 ದಶಕಗಳ ಬೇಡಿಕೆಯನ್ನು ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈಡೇರಿಸಿದ್ದಾರೆ. ಕಡಬ ತಾಲೂಕು ಕೇಂದ್ರವಾಗಬೇಕೆಂಬ ಜನರ ಹೋರಾಟಕ್ಕೆ ಜಯ ದೊರೆತಿದೆ ಎಂದರು. ಶೀಘ್ರದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಕಡಬದಲ್ಲಿ ದೊಡ್ಡಮಟ್ಟದಲ್ಲಿ ಸಂಭ್ರಮಾಚರಣೆ ನಡೆಸಲಾಗುವುದು ಎಂದು ಅವರು ಪ್ರಕಟಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಕರ್ಮಾಯಿ ಅವರು ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿ ಕಡಬಕ್ಕೆ ವಿಶೇಷ ತಹಶೀಲ್ದಾರ್ ನೇಮಕ ಮಾಡುವ ಮೂಲಕ ಜನರ ಆಶಯಗಳಿಗೆ ಕಾಂಗ್ರೆಸ್ ಸ್ಪಂದಿಸಿತ್ತು. ಇದೀಗ ಪೂರ್ಣಪ್ರಮಾಣದ ತಾಲೂಕಾಗಿ ಕಡಬವನ್ನು ಘೋಷಿಸಿರುವುದು ಕಾಂಗ್ರೆಸ್‌ನ ಜನಪರ ನಿಲುವಿಗೆ ಉದಾಹರಣೆಯಾಗಿದೆ ಎಂದರು.
ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ. ಫಿಲಿಪ್ ಅವರು ಮಾತನಾಡಿ, ತಾಲೂಕು ಹೋರಾಟ ಸಮಿತಿಯ 50 ವರ್ಷಗಳ ಹೋರಾಟಕ್ಕೆ ಜಯ ದೊರೆತಿದೆ ಎಂದರು. ಕೆಪಿಸಿಸಿ ಸದಸ್ಯ ಡಾ|ರಘು ಬಿ., ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ, ತಾ.ಪಂ. ಸದಸ್ಯರಾದ ಕೆ.ಟಿ. ವಲ್ಸಮ್ಮ, ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡೇನಿಸ್ ಫೆರ್ನಾಂಡಿಸ್, ಉಪಾಧ್ಯಕ್ಷ ಎಸ್.ಅಬ್ದುಲ್‌ಖಾದರ್, ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಸೈಮನ್ ಸಿ.ಜೆ., ಕೆ.ಎಂ.ಹನೀಫ್, ಅಶ್ರಫ್ ಶೇಡಿಗುಂಡಿ, ಶರೀಫ್ ಎ.ಎಸ್., ಶಾಲಿನಿ ಸತೀಶ್ ನಾೖಕ್ ಮೇಲಿನಮನೆ, ಕಾಂಗ್ರೆಸ್ ಮುಖಂಡರಾದ ರೋಯಿ ಅಬ್ರಹಾಂ, ಮನಮೋಹನ ಗೋಳಾÂಡಿ, ಸುಲೈಮಾನ್ ಮರ್ದಾಳ, ಅನ್ನಡ್ಕ ಪುತ್ತುಮೋನು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್‌ಮೀರಾ ಸಾಹೇಬ್, ಕಡಬ ಕ್ರಿಶ್ಚಿಯನ್ ಅಸೋಸಿಯೇಶನ್‌ನ ಅಧ್ಯಕ್ಷ ಶ್ಯಾಮ್ ತೋಮಸ್, ಸತೀಶ್ ನಾೖಕ್ ಮೇಲಿನಮನೆ, ಎಂಪಿ.ಯೂಸುಫ್, ಧರಣೇಂದ್ರ ಜೈನ್ ಮುಂತಾದವರು ಹರ್ಷಾಚರಣೆಯಲ್ಲಿ ಭಾಗವಹಿಸಿದರು.