Advertisement
ರಾಜ್ಯದಲ್ಲಿ ರಚನೆಯಾಗಿರುವ 50 ಹೊಸ ತಾಲೂಕುಗಳಲ್ಲಿ ಪ್ರತ್ಯೇಕ ತಾಲೂಕು ಪಂಚಾಯತ್ ವ್ಯವಸ್ಥೆಗಾಗಿ ಪ್ರತೀ ತಾಲೂಕಿಗೆ 14 ಹುದ್ದೆಗಳಂತೆ 700 ಹುದ್ದೆಗಳನ್ನು ಸೃಷ್ಟಿಯಾಗಲಿದ್ದು, ಈ ಕುರಿತು ಜೂ. 12ರಂದು ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
Related Articles
ಹೊಸ ತಾಲೂಕು ಪಂಚಾಯತ್ ಕಚೇರಿ ತೆರೆಯಲು ಲಭ್ಯವಿರುವ ಕಟ್ಟಡ, ಕಾದಿರಿಸಲಾಗಿರುವ ಜಮೀನು ಇತ್ಯಾದಿ ಮಾಹಿತಿಗಳನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದ್ದು, ಹೊಸ ವ್ಯವಸ್ಥೆಗೆ ಕ್ಷೇತ್ರಗಳನ್ನು ವಿಂಗಡಿಸುವ ಸಲುವಾಗಿ ಸರಕಾರವು ಅಗತ್ಯ ಕ್ರಮ ಕೈಗೊಳ್ಳಲಿದೆ.
– ಜಾನ್‌ಪ್ರಕಾಶ್ ರೋಡ್ರಿಗಸ್, ಕಡಬ ತಹಶೀಲ್ದಾರ್
Advertisement
ಕಡಬ ತಾ.ಪಂ.ಗೆ ಸೇರ್ಪಡೆಯಾಗಲಿರುವ ಕ್ಷೇತ್ರಗಳುಪುತ್ತೂರು ತಾಲೂಕಿನ ಕಡಬ (ಕಡಬ, ಕೋಡಿಂಬಾಳ), ಕುಟ್ರಾಪ್ಪಾಡಿ (ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರಾಪ್ಪಾಡಿ), ಐತ್ತೂರು (ಐತ್ತೂರು, ಕೊಣಾಜೆ, ಬಂಟ್ರ, 102 ನೆಕ್ಕಿಲಾಡಿ), ಬಿಳಿನೆಲೆ (ಬಿಳಿನೆಲೆ, ಶಿರಾಡಿ, ಶಿರಿಬಾಗಿಲು, ಕೊಂಬಾರು), ಗೋಳಿತೊಟ್ಟು (ಗೋಳಿತೊಟ್ಟು, ಆಲಂತಾಯ, ಹಳೆನೇರೆಂಕಿ), ಚಾರ್ವಾಕ (ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಕಾಯಿಮಣ, ಕುದ್ಮಾರು), ಸವಣೂರು (ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಬೆಳಂದೂರು), ನೆಲ್ಯಾಡಿ (ನೆಲ್ಯಾಡಿ, ಕೊಣಾಲು), ಕೌಕ್ರಾಡಿ (ಕೌಕ್ರಾಡಿ, ಇಚ್ಲಂಪಾಡಿ, ಬಲ್ಯ), ಆಲಂಕಾರು (ಆಲಂಕಾರು, ಪೆರಾಬೆ, ಕುಂತೂರು), ರಾಮಕುಂಜ (ರಾಮಕುಂಜ, ಕೊೖಲ), ಸುಳ್ಯ ತಾಲೂಕಿನ ಸುಬ್ರಹ್ಮಣ್ಯ (ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಲ್ಪ, ಕೇನ್ಯ) ಹಾಗೂ ಎಣ್ಮೂರು (ಎಣ್ಮೂರು, ಎಡಮಂಗಲ) ಕ್ಷೇತ್ರಗಳು ನೂತನ ಕಡಬ ತಾ.ಪಂ.ನ ವ್ಯಾಪ್ತಿಗೆ ಬರಲಿವೆ. ನಾಗರಾಜ್ ಎನ್.ಕೆ.