Advertisement

ಕಡಬ ಸಭೆ: ವಿವಿಧ ಅಹವಾಲುಗಳ ದರ್ಶನ

03:45 AM Jul 06, 2017 | Team Udayavani |

ಕಡಬ:  ಕಂದಾಯ ಇಲಾಖೆಯ ನೇತೃತ್ವದಲ್ಲಿ ಕಡಬ ಹೋಬಳಿ ಮಟ್ಟದ ಜನಸಂಪರ್ಕ ಸಭೆಯು ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರೋಡ್ರಿಗಸ್‌ ಅವರ ಉಪಸ್ಥಿತಿಯಲ್ಲಿ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಅವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್‌ ಭವನದಲ್ಲಿ  ಜರಗಿತು.

Advertisement

ವಿದ್ಯುತ್‌ ಸಮಸ್ಯೆವಿಪರೀತ
ಪಟ್ಟಣದಲ್ಲಿ  ನಿರಂತರ ವಿದ್ಯುತ್‌ ವ್ಯತ್ಯ ಯ ಉಂಟಾಗುತ್ತಿರುವ ಬಗ್ಗೆ ಆಕ್ರೋಶ   ವ್ಯಕ್ತವಾಯಿತು. ಕಡಬ ಮೆಸ್ಕಾಂ ಜೆಇ ನಾಗರಾಜ್‌ ಅವರು, ಸಬ್‌ಸ್ಟೇಶನ್‌ನಲ್ಲಿನ ಸಮಸ್ಯೆಯಿಂದಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.  ಮರಗಳ ಕೊಂಬೆ ವಿದ್ಯುತ್‌ ಲೈನ್‌ಗೆ ತಾಗುವುದರಿಂದಲೂ ಸಮಸ್ಯೆಯಾಗುತ್ತಿದೆ. ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಮುಂ ದಾಗಬೇಕೆಂದರು. ಇದಕ್ಕೆ ಪಿ.ಪಿ. ವರ್ಗೀಸ್‌ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
 
ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹ
ಕೇರಳ ಮೂಲದ ನಾಯರ್‌  ಸಮು ದಾಯ ಅನೇಕ ವರ್ಷಗಳ ಹಿಂದೆ ರಾಜ್ಯದಲ್ಲಿ ನೆಲೆಸಿ ಇಲ್ಲಿನವರೇ ಆಗಿದ್ದಾರೆ. ಒಂದು ಲಕ್ಷಕ್ಕಿಂತಲೂ ಹೆಚ್ಚು  ಮಂದಿ ಇರುವ ನಾಯರ್‌ ಸಮುದಾಯಕ್ಕೆ ಇಲ್ಲಿ ಜಾತಿ ಪ್ರಮಾಣಪತ್ರ ಲಭಿಸುತ್ತಿಲ್ಲ. ಅದರಿಂದಾಗಿ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕೆಲಸ ಗಳಿಗೆ ತೊಂದರೆಯಾಗುತ್ತಿದೆ. ಶ್ರೀಲಂಕಾ ಮೂಲದ ತಮಿಳು ನಿರಾಶ್ರಿತರಿಗೆ ಜಾತಿ ಪ್ರಮಾಣಪತ್ರ ನೀಡಿದ ರೀತಿಯಲ್ಲೇ ನಾಯರ್‌ ಸಮುದಾಯಕ್ಕೂ ನೀಡಬೇಕು ಎಂದು ವಿನೇಶ್‌ ನೆಟ್ಟಣ ಆಗ್ರಹಿಸಿದರು. ಕೆರೆ ಅತಿಕ್ರಮಣ  ತೆರವಿಗೆ ಆಗ್ರಹ ಪಟ್ಟಣದಲ್ಲಿ  ಅನೇಕ ಕೆರೆಗಳು ಒತ್ತುವರಿ ಆಗಿದೆ.

ಈಗಾಗಲೇ ಸರಕಾರವು ಕೆರೆ ಗಳ ಅಭಿವೃದ್ಧಿಗೆ 312 ಕೋಟಿ ರೂ. ಮಂಜೂರು ಮಾಡಿದೆ. ಆದರೆ ಇಲ್ಲಿಯ ಯಾವುದೇ ಕೆರೆಗಳಿಗೆ ಅನುದಾನ ಬಂದಿಲ್ಲ. ಕೆರೆಗಳ ಅಳತೆ ಕಾರ್ಯವೂ ನಡೆದಿಲ್ಲ.  ಪುತ್ತೂರು ತಾಲೂಕಿಗೆ ಬಂದ ಹಣವನ್ನು ಪುತ್ತೂರು ಶಾಸಕರ   ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಬಳಸಿಕೊಳ್ಳಲಾಗಿದೆ. ಈ ಭಾಗಕ್ಕೆ ಯಾಕೆ ಅನುದಾನ ನೀಡಿಲ್ಲ  ಎಂದು ಸೆ„ಯದ್‌ ಮೀರಾ ಸಾಹೇಬ್‌ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಸಭೆಯ ಅಧ್ಯಕ್ಷರು, ರಾಮಕುಂಜದ ಅಮೈ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಕೆಲವು ಕೆರೆಗಳ ಅಳತೆ ನಡೆಸಿದ್ದು, ಉಳಿದ ವುಗಳನ್ನು ಅಳತೆ  ನಡೆಸಿ ಅಭಿವೃದ್ಧಿ ಮಾಡಲು ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಕಡಬ ಗ್ರಾ.ಪಂ.ನ ಕೌಶಲ ಅಭಿವೃದ್ಧಿ  ತರಬೇತಿ ಕಟ್ಟಡದಲ್ಲಿ ಹಲವು ವರ್ಷಗಳಿಂದ ಕಂದಾಯ ಇಲಾಖೆಯ  ಅಭಿಲೇಖಾಲಯ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ತರಬೇತಿಗಳಿಗೆ ಕಟ್ಟಡವನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆ ಅಭಿ ಲೇಖಾಲಯವನ್ನು ಬೇರಡೆ ಸ್ಥಳಾಂತ ರಿಸಬೇಕು ಅಥವಾ ಕಟ್ಟಡಕ್ಕೆ ಬಾಡಿಗೆ ನೀಡಬೇಕು ಎಂದು ಗ್ರಾ.ಪಂ. ಸದಸ್ಯ ನಾರಾಯಣ ಪೂಜಾರಿ ಆಗ್ರಹಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಆಗಲಿ ಎಂದು ವಿಕ್ಟರ್‌ ಮಾರ್ಟಿಸ್‌ ಆಗ್ರಹಿ ಸಿದರು. ಜನಸಂಪರ್ಕ ಸಭೆಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ಕುಟ್ರಾಪ್ಪಾಡಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟಿ.ಎಂ.ಮ್ಯಾಥ್ಯೂ ಆಗ್ರಹಿಸಿದರು. 

Advertisement

ತಾ.ಪಂ.ಸದಸ್ಯೆ ಪಿ.ವೈ ಕುಸುಮಾ ಅವರು, ಪಿಡಿಒ ಗಳು ಕಡ್ಡಾಯವಾಗಿ ಜನ ಸಂಪರ್ಕ ಸಭೆಗೆ ಬರುವಂತೆ ನಿರ್ಣಯ ಮಾಡಬೇಕು. ಕುಟ್ರಾಪ್ಪಾಡಿ ಹಾಗೂ ಐತ್ತೂರಿಗೆ ಒಬ್ಬರೇ ಪಿಡಿಒ ಇರುವುದರಿಂದ ಸಮಸ್ಯೆಯಾಗುತ್ತಿದೆ.  ಐತ್ತೂರಿಗೆ  ಪೂರ್ಣಪ್ರಮಾಣದ ಪಿಡಿಒ ನೇಮಕ ಆಗಬೇಕು ಎಂದು ಒತ್ತಾಯಿಸಿದರು.

ಬಿಳಿನೆಲೆ ಗ್ರಾಮದ 175 ಸ.ನಂ ಮತ್ತು 188 ಸ.ನಂ. ಅರಣ್ಯ ಪರಂಬೋಕು ಎಂದು ದಾಖಲಾಗಿದೆ. ಅದಕ್ಕೆ ಅಕ್ರಮ ಸಕ್ರಮ ಮಂಜೂರು ಮಾಡಲು ಅರಣ್ಯ ಇಲಾಖೆಯ ಎನ್‌.ಒ.ಸಿ. ಪಡೆದು ಎ.ಸಿ.ಗೆ ಪ್ರಸ್ತಾವನೆ ಸಲ್ಲಿಸಿ ಕಳುಹಿಸಲಾಗುತ್ತದೆ. ಇಂಥ ನೂರಾರು ಕಡತಗಳು ಬಿಳಿನೆಲೆ ವ್ಯಾಪ್ತಿಯಲ್ಲಿ  ಮಂಜೂರಾತಿಗೆ ಬಾಕಿ ಇದೆ. ಆದರೆ ಪ್ರಭಾವಿಗಳಿಗೆ ಮಾತ್ರ  ಸರಕಾರಿ ಭೂಮಿ ಮಂಜೂರಾಗುತ್ತಿದೆ ಎಂದು ಬಿಳಿನೆಲೆಯ  ರಮೇಶ್‌ ವಾಲ್ತಾಜೆ ದೂರಿದರು. 
ಆ ರೀತಿಯ  ಕಡತಗಳನ್ನು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದಲ್ಲಿ ಕಡತವನ್ನು ಅರಣ್ಯ ಇಲಾಖಾ ಅನುಮತಿಯೊಂದಿಗೆ ಎ.ಸಿ.ಯವರಿಂದ  ಅನು ಮೋದನೆ ಪಡೆದು ಮಂಜೂರಾತಿಗೆ ಅವಕಾಶ ಇದೆ ಎಂದು ತಹಶೀಲ್ದಾರರು ತಿಳಿಸಿದರು.

ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ  ಶಾರದಾ ದಿನೇಶ್‌ ಅವರು, ಸ್ಮಶಾನದ ಕುರಿತು ಕಳೆದ ಸಭೆಯಲ್ಲಿ ಕ್ರಮ ಕೈಗೊಳ್ಳುವಂತೆ ಹೇಳಲಾಗಿತ್ತು.  ಆದರೆ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದರು.  ಎಲ್ಸಿ ತೋಮಸ್‌ ಕುಟ್ರಾಪ್ಪಾಡಿಯಲ್ಲಿ ಸ್ಮಶಾನಕ್ಕೆ ಜಾಗ ಅಳತೆ  ನಡೆದಿಲ್ಲ  ಎಂದರು.  ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ  ಉತ್ತರಿಸಿ ಬಿಳಿನೆಲೆ ಸ್ಮಶಾನಕ್ಕೆ ಈಗಾಗಲೇ ಜಾಗ ಗುರುತು ಮಾಡಲಾಗಿದೆ ಎಂದರು. ಗುರುತಿಸಲಾಗಿರುವ ಜಾಗಕ್ಕೆ ಆಕ್ಷೇ ಪಣೆ ಇದೆ ಎಂದು   ರಮೇಶ್‌ ವಾಲ್ತಾಜೆ ಹೇಳಿದರು. ಪಿ.ಪಿ ವಗೀಸ್‌ ಮಾತನಾಡಿ ಆಕ್ಷೇಪ ಇರುವುದಾದರೆ ಬದಲಿ ಜಾಗ ಗಡಿ ಗುರುತು ಮಾಡಿ. ಕುಟ್ರಾಪ್ಪಾಡಿ, ಬಿಳಿನೆಲೆ ಅಲ್ಲದೆ ಎಲ್ಲಾ ಗ್ರಾಮದಲ್ಲೂ  ಸ್ಮಶಾನಕ್ಕೆ ಸರ್ವೇ ಮಾಡ ಬೇಕೆಂದು ಸೂಚಿಸಿದರು.

ಕೊ„ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಾಸ್ತವ್ಯ ದೃಢಪತ್ರ ನೀಡದೆ ಸತಾಯಿ ಸುತ್ತಿದ್ದಾರೆ ಎಂದು ಅಬ್ದುಲ್‌ ಸಮದ್‌ ದೂರಿದರು. ಇದಕ್ಕೆ ಪಿಡಿಒ ನಮಿತಾ ಅವರು, ಸೂಕ್ತ ದಾಖಲೆಯನ್ನು ಒದಗಿಸಿದಲ್ಲಿ ದೃಢೀ ಕರಣ ಪತ್ರ  ನೀಡಲಾಗುವುದು ಎಂದರು.

ಫಲಾನುಭಾವಿಗಳಿಗೆ 94ಸಿ ಹಕ್ಕುಪತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ತಾ.ಪಂ.ಸದಸ್ಯರಾದ ಫಝಲ್‌ ಕೋಡಿಂ ಬಾಳ, ಗಣೇಶ್‌ ಕೈಕುರೆ, ಪಿ.ವೈ.ಕುಸುಮ, ಕೆ.ಟಿ.ವಲ್ಸಮ,  ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ,  ಕುಟ್ರಾಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಜಾನಕಿ, ಪೆರಾಬೆ ಗ್ರಾ.ಪಂ. ಅಧ್ಯಕ್ಷೆ  ಬೇಬಿ, ಭೂಮಾಪನಾ ಪರ್ಯಾವೇಕ್ಷಕ ಪ್ರಕಾಶ್‌, ಪಂ.ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್‌ ನೂಜಿಬಾಳ್ತಿಲ, ಚೆನ್ನಪ್ಪ ಗೌಡ ಕಜೆಮೂಲೆ, ಭುವನೇಂದ್ರ ಮರ್ದಾಳ, ಜಗನ್ನಾಥ ಶೆಟ್ಟಿ ಆಲಂಕಾರು, ತೋಟಗಾರಿಕೆ ಸಹಾಯಕ ಅಧಿಕಾರಿ ಶ್ರೀಧರ್‌, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್‌ ನಾಗ ರಾಜ್‌, ಜಿ.ಪಂ. ಸಹಾಯಕ ಇಂಜಿನಿಯರ್‌ ಪ್ರಭಾಶ್ಚಂದ್ರ ಜೈನ್‌, ಸುಂಕದಕಟ್ಟೆ ಅರಣ್ಯ ಉಪವಲಯಾಧಿಕಾರಿ ಶಿವಶಂಕರ, ಅರಣ್ಯ ರಕ್ಷಕ ಸುಬ್ರಹಣ್ಯ, ಕಡಬ ಸಿ.ಆರ್‌.ಪಿ.ಕುಮಾರ್‌   ಉಪಸ್ಥಿತರಿದ್ದರು.  ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸ್ವಾಗತಿಸಿದರು. ಸಿಬಂದಿ ಉದಯಕುಮಾರ್‌ ಪಿ.ಆರ್‌. ಅವರು ವಂದಿಸಿದರು.

ಕಡಬ ತಾಲೂಕು ಅನುಷ್ಠಾನ ಜಯಗೊಳಿಸಲು ಆಗ್ರಹ:
ಕಡಬ ತಾಲೂಕು ಘೋಷಣೆಯಾದರೂ ಗೆಜೆಟ್‌ ನೋಟಿಫಿಕೇಶನ್‌ ಆಗಿಲ್ಲ. ಅದೇ ರೀತಿ ರಾಜ್ಯಪಾಲರ ಸಹಿ ಕೂಡ ಆಗಿಲ್ಲ.  ಇದು 2 ನೇ ಬಾರಿ ಘೋಷಣೆಯಾಗಿದ್ದು,   ಕೂಡಲೇ ಕಡಬ ತಾಲೂಕು ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಗೊಳಿಸಲು ಜನಪ್ರತಿನಿಧಿಗಳು ಒತ್ತಡ ಹೇರಬೇಕು ಎಂದು ಜೆಡಿಎಸ್‌ ಮುಖಂಡ ಸೆ„ಯದ್‌ ಮೀರಾ ಸಾಹೇಬ್‌ ಹಾಗೂ  ವಿಕ್ಟರ್‌ ಮಾರ್ಟಿಸ್‌   ಅವರು ಸಭೆಯಲ್ಲಿ  ಒತ್ತಾಯಿಸಿದರು. ತಾಲೂಕು ಅನುಷ್ಠಾನದ ನಿಟ್ಟಿನಲ್ಲಿ ಪೂರಕ ಪ್ರಕ್ರಿಯೆ ನಡೆಯುತ್ತಿದೆ ಎಂದು ವರ್ಗಿಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next