Advertisement
ಇಲ್ಲಿನ ಸರಕಾರಿ ಶೈಕ್ಷಣಿಕ ವ್ಯವಸ್ಥೆ ಪ.ಪೂ.ಕಾಲೇಜು ಮಟ್ಟದಿಂದ ಮೇಲೇರಿಲ್ಲ. ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಹಾಗೂ ವೃತ್ತಿಪರ ತರಬೇತಿ ಕೋರ್ಸ್‌ಗಳ ಕಾಲೇಜು ಆರಂಭವಾಗಬೇಕು ಎನ್ನುವ ಜನರ ಹಲವು ವರ್ಷಗಳ ಬೇಡಿಕೆ ಇನ್ನೂ ಕೈಗೂಡಿಲ್ಲ.
Related Articles
Advertisement
ಕಡಬ ಸರಕಾರಿ ಪದವಿ ಕಾಲೇಜು ಹೋರಾಟ ಸಮಿತಿ ಎನ್ನುವ ಸಂಘಟನೆಯ ಮೂಲಕ ವಿಜಯಕುಮಾರ್ ರೈ ಕರ್ಮಾಯಿ ಮುಂದಾಳುತ್ವದಲ್ಲಿ ಊರ ಪ್ರಮುಖರು ಕಾಲೇಜು ಮಂಜೂ ರಾತಿಗಾಗಿ ಸರಕಾರದ ಮಟ್ಟದಲ್ಲಿ ನಡೆಸು ತ್ತಿರುವ ಹೋರಾಟಕ್ಕೆ ಫಲ ದೊರೆತಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿ ಕಡಬದಲ್ಲಿ ಸರಕಾರಿ ಪದವಿ ಕಾಲೇಜಿನ ಅಗತ್ಯದ ಕುರಿತು ಸರಕಾರಕ್ಕೆ ವರದಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸುಳ್ಯ ಶಾಸಕ ಎಸ್. ಅಂಗಾರ ನೇತೃತ್ವದಲ್ಲಿ ಕಡಬಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರು ಗೊಳಿಸುವ ನಿಟ್ಟಿನಲ್ಲಿ ಕಡಬ ದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಅಧಿ ಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆ ಯಲ್ಲಿ ಅವರು ಕಡಬಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರುಗೊಳಿಸಲು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು. ಇದೀಗ ಶಾಸಕರು ಸಚಿವರಾಗಿರುವುದು ಸ್ಥಳೀಯರಲ್ಲಿ ಭರವಸೆ ಮೂಡಿದೆ.
ಜಮೀನು ಕಾದಿರಿಸಲಾಗಿದೆ :
ಕಡಬ ಸರಕಾರಿ ಪ್ರೌಢಶಾಲೆಯ 14.5 ಎಕ್ರೆ ಜಾಗದಲ್ಲಿ 5 ಎಕ್ರೆ ಜಾಗವನ್ನು ಕಡಬ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಜಿಲ್ಲಾಧಿಕಾರಿಯವರು ಕಾದಿರಿಸಿ, ಈ ಬಗ್ಗೆ ಸಹಾಯಕ ಕಮೀಷನರ್‌ಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ 5 ಎಕರೆ ಜಮೀನನ್ನು ಗಡಿ ಗುರುತು ಮಾಡಲಾಗಿದೆ. ಪದವಿ ಕಾಲೇಜಿನೊಂದಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಕೂಡ ಆರಂಭಿಸಿದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದಕ್ಕಾಗಿ ವೃತ್ತಿಪರ ಶಿಕ್ಷಣ ಕೋರ್ಸುಗಳನ್ನು ಆರಂಭಿಸುವ ನಿಟ್ಟಿನಲ್ಲಿಯೂ ಜನಪ್ರತಿನಿಧಿಗಳು ಪ್ರಯತ್ನಿಸುವ ಅಗತ್ಯವಿದೆ.
ಕಡಬದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಗತ್ಯವಿದೆ ಎನ್ನುವ ನಿಟ್ಟಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಪೂರಕ ವರದಿ ಸಲ್ಲಿಸಲಾಗಿದೆ. ಪರಿಸರದ ವಿವಿಧ ಪ.ಪೂ.ಕಾಲೇಜು ಗಳಿಂದ ಪ್ರತಿ ವರ್ಷ ವ್ಯಾಸಂಗ ಮುಗಿಸಿ ಹೊರಬರುವ ವಿದ್ಯಾರ್ಥಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ಉಲ್ಲೇಖೀ ಸಲಾಗಿದೆ. ಕ್ಷೇತ್ರದ ಶಾಸಕರು ಸಚಿವರಾಗಿರುವುದರಿಂದ ಕಡಬಕ್ಕೆ ಸ. ಪದವಿ ಕಾಲೇಜು ಮಂಜೂರು ಗೊಳಿಸಲಿದ್ದಾರೆ ಎನ್ನುವ ಭರವಸೆ ಇದೆ. –ಪ್ರೊ| ಜಯಕರ ಭಂಡಾರಿ, ಕಾ.ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ.