Advertisement
ರೋಷನ್ ಆ್ಯಂಡ್ರೂಸ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿ ವೆಚ್ಚದ ಮಲಯಾಳಂ ಚಿತ್ರ ‘ಕಾಯಂಕುಳಂ ಕೊಚ್ಚುಣ್ಣಿ’ಯಲ್ಲಿ ನಾಯಕನಾಗಿ ಯುವ ನಟ ನಿವಿನ್ ಪೋಲಿ, ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಎರಡು ತಿಂಗಳಿನಿಂದ ಬಲ್ಯ ಹಾಗೂ ಕುಂತೂರು ಪದವಿನ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಅದೇ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮಲಯಾಳಂನ ಸೂಪರ್ಸ್ಟಾರ್ ಮೋಹನ್ಲಾಲ್ ಅವರು ಎರಡು ದಿನಗಳ ಹಿಂದೆ ಸೆಟ್ಗೆ ಆಗಮಿಸಿರುವುದು ಅವರ ಅಭಿಮಾನಿಗಳಿಗೆ ಪುಳಕ ತಂದಿದೆ. ಖ್ಯಾತ ಕ್ಯಾಮರಾಮನ್ ವಿನೋದ್ಪ್ರಧಾನ್ ಚಿತ್ರದ ಛಾಯಾಗ್ರಹಣ ನಡೆಸುತ್ತಿದ್ದಾರೆ.
‘ಮಾಮಾಂಗಂ’ನ ಚಿತ್ರೀಕರಣ ಕೆಲವು ದಿನಗಳಿಂದ ನಡೆಯುತ್ತಿದೆ. ಕಡಬ, ನೆಲ್ಯಾಡಿ ಭಾಗದಲ್ಲಿ ಹೆಚ್ಚಾಗಿ ನೆಲೆಸಿರುವ ಮಲಯಾಳಂ ಭಾಷಿಗರು ಮಾತ್ರವಲ್ಲದೆ ಇತರ ಚಲನಚಿತ್ರಾಸಕ್ತರು ಪ್ರಸಿದ್ಧ ನಟರನ್ನು ಕಾಣುವುದಕ್ಕಾಗಿ ಚಿತ್ರೀಕರಣದ ಸ್ಥಳಗಳಿಗೆ ಆಗಮಿಸುತ್ತಿದ್ದಾರೆ. ಸೆಟ್ ನಿಂದ ನಟರು ಹೊರಬರುವುದನ್ನೇ ಕಾಯುತ್ತಿರುವ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ನಟ ನಟಿಯರು ಹಾಗೂ ಚಿತ್ರತಂಡದ ವಾಸ್ತವ್ಯಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.