Advertisement
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಡಬ ಜಿ.ಪಂ. ಕ್ಷೇತ್ರದ ಸದಸ್ಯ ಪಿ.ಪಿ. ವರ್ಗೀಸ್ ಅವರು, ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವುದು ಮತ್ತು ಬಳಸಿದ ಪ್ಲಾಸ್ಟಿಕ್‌ಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಮರ್ಪಕವಾಗಿ ವಿಲೇವಾರಿ ಮಾಡುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಸರಕಾರದ ಮೂಲಕ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯತ್‌ನ ನೆರವಿನೊಂದಿಗೆ ಕಡಬ ಗ್ರಾ.ಪಂ. ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಪೇಟೆಯ ವರ್ತಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಅಭಿಯಾನದಲ್ಲಿ ಸ್ಥಳೀಯ ಜೇಸಿ ಸದಸ್ಯರು ಕೂಡ ಕೈಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ, ಈಗಾಗಲೇ ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಕಡಬ ಗ್ರಾ.ಪಂ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಂಚಾಯತ್‌ನ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ನೀಲಾವತಿ ಶಿವರಾಮ್ ಅವರ ನೇತೃತ್ವದಲ್ಲಿ ಕೊರುಂದೂರು ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿ ಮಹಿಳೆಯರು ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕ್ರಮವು ಜಿಲ್ಲಾ ಪಂಚಾಯತ್ ವತಿಯಿಂದ ಸಾಕ್ಷ್ಯಚಿತ್ರವಾಗಿ ಚಿತ್ರೀಕರಣಗೊಂಡು ಎಲ್ಲೆಡೆ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಉಪಾಧ್ಯಕ್ಷೆ ಜ್ಯೋತಿ ಡಿ. ಕೋಲ್ಪೆ, ಸದಸ್ಯರಾದ ಸೈಮನ್ ಸಿ.ಜೆ., ಕೆ.ಎಂ. ಹನೀಫ್, ನೀಲಾವತಿ ಶಿವರಾಮ್, ಸರೋಜಿನಿ ಆಚಾರ್ಯ, ಶಾಲಿನಿ ಸತೀಶ್ ನಾೖಕ್, ಶರೀಫ್ ಎ.ಎಸ್., ಯಶೋದಾ, ಹರ್ಷ ಕೋಡಿ, ಜೇಸಿ ವಲಯಾಧಿಕಾರಿ ಶಿವಪ್ರಸಾದ್ ರೈ ಮೈಲೇರಿ, ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ನ ಕಾರ್ಯದರ್ಶಿ ಅಶೋಕ್ ಕುಮಾರ್ ಪಿ., ನಿರ್ದೇಶಕರಾದ ಮಂಜುನಾಥ ಮರ್ದಾಳ, ದಿನೇಶ್ ಆಚಾರ್ಯ, ಫಯಾಝ್ ಕೆನರಾ, ಜೇಸಿ ನಿಕಟ ಪೂರ್ವಾಧ್ಯಕ್ಷ ತಸ್ಲೀಮ್ ಮರ್ದಾಳ, ಕಾರ್ಯದರ್ಶಿ ಮೋಹನ ಕೋಡಿಂಬಾಳ, ಪೂರ್ವಾಧ್ಯಕ್ಷರಾದ ಜಯರಾಮ ಗೌಡ ಆರ್ತಿಲ, ಹರೀಶ್ ಬೆದ್ರಾಜೆ, ಪದಾಧಿಕಾರಿ ಜಯರಾಮ
ಮೂರಾಜೆ ಉಪಸ್ಥಿತರಿದ್ದರು.
Related Articles
Advertisement