Advertisement

Kadaba ಜಾನುವಾರು ಅಕ್ರಮ ಸಾಗಾಟ; ವಾಹನ ವಶ

11:06 PM Jul 24, 2024 | Team Udayavani |

ಕಡಬ: ಕಡಬ ಠಾಣೆ ವ್ಯಾಪ್ತಿಯ ಕೊಯಿಲದಲ್ಲಿ ಅಕ್ರಮ ಗೋ ಸಾಗಾಟವನ್ನು ಪತ್ತೆಹಚ್ಚಿರುವ ಪೊಲೀಸರು, ಪಿಕ್‌ಅಪ್‌ ವಾಹನ ಹಾಗೂ ಅದರಲ್ಲಿದ್ದ ಎರಡು ಹೋರಿಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ.

Advertisement

ಕೊçಲ ಶಾಖೆಪುರದ ಕಡೆಯಿಂದ ಪಿಕ್‌ಅಪ್‌ ವಾಹನದಲ್ಲಿ ಎರಡು ಹೋರಿಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಹನವನ್ನು ಕೊಯಿಲ ದಲ್ಲಿ ಅಡ್ಡಗಟ್ಟಿದ್ದಾರೆ. ಈ ಸಂದರ್ಭ ವಾಹನದಲ್ಲಿದ್ದ ರಾಮಕುಂಜ ಗ್ರಾಮದ ನೀರಾಜೆ ನಿವಾಸಿಗಳಾದ ಸಿರಾಜ್‌ ಹಾಗೂ ಆತನ ಸಹೋದರ ಜಾಬಿರ್‌ ಪರಾರಿಯಾಗಿದ್ದಾರೆ. ಹೋರಿಗಳನ್ನು ಸಿರಾಜ್‌ ಮನೆಯಲ್ಲಿರುವ ಅಕ್ರಮ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಕಡಬ ಎಸ್‌ಐ ಅಭಿನಂದನ್‌ ಅವರ ಮಾರ್ಗದರ್ಶನದಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಹರೀಶ್‌ ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಪಿಕ್‌ಅಪ್‌ ವಾಹನ ಹಾಗೂ ಹೋರಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next