Advertisement

Kadaba: ಅಕ್ರಮ ಕಸಾಯಿಖಾನೆಗೆ ದಾಳಿ; ಮೂವರ ಸೆರೆ

01:13 AM Jan 25, 2024 | Team Udayavani |

ಕಡಬ: ಕಲಾಯಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ, ದನದ ಮಾಂಸ, ಕೃತ್ಯಕ್ಕೆ ವಾಹನ ಹಾಗೂ ಇತರ ಸಲಕರಣೆಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

Advertisement

ಸ್ಥಳೀಯರಾದ ಯಹ್ಯಾ ಯಾನೆ ಝಕಾರಿಯ (40), ಶಿಯಾಬ್‌ (23) ಹಾಗೂ ಮುನಾವರ್‌ ಹುಸೈನ್‌(19) ಬಂಧಿತರು.

ಇನ್ನೋರ್ವ ಆರೋಪಿ ಸುಲೈಮಾನ್‌ ಪರಾರಿಯಾಗಿದ್ದಾನೆ. 70 ಕೆ.ಜಿ. ದನದ ಮಾಂಸ, ಎಲೆಕ್ಟ್ರಿಕ್‌ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ.

ಉಪ್ಪಿನಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌, ಕಡಬ ಎಸ್‌ಐ (ತನಿಖೆ) ಅಕ್ಷಯ್‌ ಡವಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next