ಕಡಬ: ತಾಲೂಕಿನ ಹಲವು ಗ್ರಾಮೀಣ ರಸ್ತೆಗಳನ್ನು ಲೋಕೋಪ ಯೋಗಿ ಇಲಾಖೆಯ ಅನುದಾ ನದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲಾಖಾ ಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮೀಕ್ಷೆ ನಡೆಸಿದರು.
ಬಂದರು, ಮೀನುಗಾರಿಕೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ಮೇರೆಗೆ ಕಡಬ ತಾಲೂಕಿನ ಕಡಬ,ಕೊಯಿಲ, ರಾಮಕುಂಜ, ಆಲಂಕಾರು, ಪೆರಾಬೆ, ಹಳೆನೇರೆಂಕಿ, ಬಂಟ್ರ ಮರ್ಧಾಳ, ಐತ್ತೂರು, ಕೊಂಬಾರು ಸಿರಿಬಾಗಿಲು, ಗೋಳಿತೊಟ್ಟು ಮುಂತಾದ ಗ್ರಾಮಗಳಲ್ಲಿ ಸಮೀಕ್ಷೆ ನಡೆಯಿತು.
ಹಳೆನೇರೆಂಕಿ- ನೆಕ್ಕರೆ ರಸ್ತೆ (5 ಕಿ.ಮೀ.), ಗೋಳಿತ್ತಡಿ, ಕಕ್ವೆ, ಪಾಂಜೋಡಿ, ಬುಡೇರಿಯಾ, ಕೋಚಕಟ್ಟೆ, ಕುಂತೂರು, ಸುರಳಿ, ಕೆಮ್ಮಿಂಜೆ, ಶಿವಾರು, ಆಲಂತಾಯ ರಸ್ತೆ(35 ಕಿ.ಮೀ.), ಕಡಬ, ದೊಡ್ಡಕೊಪ್ಪ, ಮೂರಾಜೆ, ಅಜ್ಜಿಕಟ್ಟೆ, ವಿದ್ಯಾನಗರ, ಮಾಲೇಶ್ವರ, ಬೊಳ್ಳೂರು, ಮಿತ್ತೋಡಿ, ಬಂಟ್ರ, ಮುಂಡ್ರಾಡಿ, ಮಠಂತಾಡಿ, ಕೋಡಂದೂರು, ಅತ್ಯಡ್ಕ, ನೇಲ್ಯಡ್ಕ, ಐತ್ತೂರು ರಸ್ತೆ(32 ಕಿ.ಮೀ.), ಕೊçಲ, ಕೆ.ಸಿ. ಫಾರ್ಮ್, ವಳಕಡಮ, ನಾಯರ್‌ತೋಟ, ಹಿರೇಬಂಡಾಡಿ (12 ಕಿ.ಮೀ.), ಕೊಂಬಾರು, ಬೋಳ್ನಡ್ಕ, ಕಮರ್ಕಜೆ, ಬಾರ್ಯ, ದೇರಣೆ, ಗುಂಡ್ಯ (8 ಕಿ.ಮೀ.), ಕೈಕಂಬ, ಕೋಟೆಬಾಗಿಲು, ನಡುತ್ತೋಟು, ಕಾಳಪ್ಪಡಿ, ಕೈಕಂಬ ಜನತಾ ಕಾಲನಿ, ಕಲ್ಕಾರ, ಕುಲ್ಕುಂದ (10 ಕಿ.ಮೀ.) ಮುಂತಾದ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿ ಯಂತ ಬಿ.ರಾಜಾರಾಮ್, ಸಹಾಯಕ ಅಭಿಯಂತಪ್ರಮೋದ್ ಕುಮಾರ್ ಕೆ.ಕೆ.ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಯಿತು.
ಅಧಿಕಾರಿಗಳೊಂದಿಗೆ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ದ.ಕ. ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ, ಆಲಂಕಾರು ಸಿ.ಎ. ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಬಿಜೆಪಿ ಮುಖಂಡ ಸದಾಶಿವ ಶೆಟ್ಟಿ ಮಾರಂಗ, ಕೊಯಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡು³, ಪ್ರಮುಖರಾದ ಶೀನಪ್ಪ ಗೌಡ ವಳಕಡಮ, ಶಿವಣ್ಣ ಗೌಡ ಕಕ್ವೆ, ಸುರೇಶ್ ಕುಂಡಡ್ಕ, ಶಿವಪ್ಪ ಗೌಡ ಕೊಣಾಜೆ,ಉಮೇಶ್ ಸಾಕೋಟೆಜಾಲು ಮತ್ತಿತರರು ಉಪಸ್ಥಿತರಿದ್ದರು