ಕಾಬೂಲ್: ಕಾಬೂಲ್‌ನಲ್ಲಿ ಶಿಯಾ ಜನಾಂಗದ ಮೇಲೆ ನಡೆಸಿದ ಆತ್ಮಹತ್ಯಾ ದಾಳಿಯಿಂದಾಗಿ 40 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಉಗ್ರ ಸಂಘಟನೆ ಐಸಿಸ್ ಈ ಘಟನೆಯ ಹೊಣೆ ಹೊತ್ತಿದೆ. ಕಾಬೂಲ್‌ನ ಸಾಂಸ್ಕೃತಿಕ ಕೇಂದ್ರವಾದ ಆಫ^ನ್ ವಾಯ್ಸ ಏಜೆನ್ಸಿಯಲ್ಲಿ ಸ್ಫೋಟ ನಡೆದಿದೆ. ಅಲ್ಲಿನ ಗೃಹ ಖಾತೆ ಈ ಬಗ್ಗೆ ಮಾಹಿತಿ ನೀಡಿದ್ದು, ಶಿಯಾ ಮುಸ್ಲಿಮರ ಮಸೀದಿಯೊಂದಕ್ಕೆ ಅಕ್ಟೋಬರ್‌ನಲ್ಲಿ ಭೀಕರ ಬಾಂಬ್ ದಾಳಿ ನಡೆದಿತ್ತು. ಅದರಲ್ಲಿ ಸುಮಾರು 50 ಮಂದಿ ಬಲಿಯಾಗಿದ್ದರು. ಅದಾದ ಬಳಿಕ ಮತ್ತೂಂದು ಪ್ರಮುಖ ದುರಂತವಾಗಿದೆ.
ತಬಯಾನ್ ಸಾಂಸ್ಕೃತಿಕ ಕೇಂದ್ರಕ್ಕೆ ಆಗಮಿಸಿದ ಆತ್ಮಹತ್ಯಾ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡ. ಇದರಿಂದಾಗಿ ಭಾರಿ ಸಾವು ನೋವು ಉಂಟಾಗಿದೆ. ಪ್ರಮುಖ ಸ್ಫೋಟದ ಬಳಿಕ ಎರಡು ಸಣ್ಣ ಪ್ರಮಾಣದ ಸ್ಫೋಟಗಳು ನಡೆದಿವೆ. ಇದಾದ ಕೂಡಲೇ ಅಲ್ಲಿ ಗೊಂದಲದ ವಾತಾವರಣ ಉಂಟಾಯಿತು. ರಕ್ತದ ನಡುವೆ ಛಿದ್ರಗೊಂಡ ದೇಹಗಳು ಎಲ್ಲೆಂದರಲ್ಲಿ ಛಿದ್ರಗೊಂಡವು.