ಕಾಬೂಲ್: ಅಫ್ಘಾನಿಸ್ಥಾನ್ ದ ರಾಜಧಾನಿ ಕಾಬೂಲ್ ನ ಶಾಲೆಯೊಂದರ ಮುಂಭಾಗದಲ್ಲಿ ಶನಿವಾರ ನಡೆದ ಕಾರ್ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 55ಕ್ಕೆ ಏರಿದೆ. ಸುಮಾರು 150ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಕಾಬೂಲ್ ನ ಪಶ್ಚಿಮದಲ್ಲಿರುವ ಸಯೀದ್-ಉಲ್-ಶುಹಾದ್ ಹೈಸ್ಕೂಲ್ ಬಳಿ ಶನಿವಾರ ಮಧ್ಯಾಹ್ನ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ.
ಇದನ್ನೂಓದಿ:ಆಸ್ಪತ್ರೆ ಸೇರಲು ಪಾಸಿಟಿವ್ ವರದಿ ಬೇಕಿಲ್ಲ : ಕೇಂದ್ರ ಸರಕಾರದಿಂದ ಹೊಸ ನಿಯಮ
ಗಾಯಗೊಂಡಿರುವ ಹೆಚ್ಚಿನವರಲ್ಲಿ ಮಹಿಳಾ ವಿದ್ಯಾರ್ಥಿಗಳೇ ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಈ ಘಟನೆಗೆ ತಾಲಿಬಾನ್ ಕಾರಣ ಎಂದಿದ್ದಾರೆ.
ಕಾರು ಬಾಂಬ್ ದಾಳಿ ನಡೆಯುವ ಸಮಯದಲ್ಲಿಕೆಲವು ವಿದ್ಯಾರ್ಥಿನಿಯರು ಶಾಲೆ ಮುಗಿಸಿ ಮನೆಗೆ ಹೊರಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸಯೀದ್ ಅಲ್ ಶುಹಾದ್ ಶಾಲೆಯಲ್ಲಿ ಮೂರು ಪಾಳಿಯಲ್ಲಿ ಪಾಠಗಳು ನಡೆಯುತ್ತಿದೆ. ಎರಡನೇ ಶಿಫ್ಟ್ ನಲ್ಲಿ ಹುಡುಗಿಯರಿಗೆ ಪಾಠ ನಡೆಯುತ್ತಿತ್ತು ಎಂದು ಅಫ್ಘಾನ್ ಶಿಕ್ಷಣ ಸಚಿವೆ ಹೇಳಿದ್ದಾರೆ.
ಇದನ್ನೂಓದಿ: ಕೋವಿಡ್ ಹೊರತುಪಡಿಸಿದ ರೋಗಿಗಳು ವೆನ್ಲಾಕ್ ನಿಂದ ಶೀಘ್ರ ಸ್ಥಳಾಂತರ