Advertisement
ವಿಶ್ವದ ದೊಡ್ಡಣ್ಣ ಅಮೆರಿಕಾದ ಮೂಲ ವಾಸಿಗಳು ಕೂಡ ತಾಲಿಬಾನ್ ಉಗ್ರರ ಉಪಟಳವನ್ನು ಎದುರಿಸುತ್ತಿದ್ದು, ಹಲವಾರು ಮಂದಿ ಅಮೆರಿಕನ್ನರು ಈಗಾಗಲೇ ಅಮೆರಿಕಾ ಸರ್ಕಾರಕ್ಕೆ ರಕ್ಷಣೆ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದು, ‘ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಅಮೆರಿಕದ ಮತ್ತು ಇತರ ಸಾವಿರಾರು ಜನರನ್ನು ಸ್ಥಳಾಂತರಗೊಳಿಸುವ ಪ್ರಕ್ರಿಯೆಯು ಅತ್ಯಂತ ಕಠಿಣ ಹಾಗೂ ದುಃಖದಾಯಕವಾಗಿದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುತ್ತಿದ್ದೇವೆಂದು ಅವರು ಹೇಳಿದ್ದಾರೆ.
Related Articles
Advertisement
ಇನ್ನು, ಈ ಬಗ್ಗೆ ತಾಲಿಬಾನ್ ಸಂಘಟನೆಯೊಂದಿಗೂ ಕೂಡ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ’ಎಂದು ಅವರು ಹೇಳಿದರು.‘ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 3 ಗಂಟೆಗೆ ಕೊನೆಗೊಂಡಂತೆ 12 ಗಂಟೆಗಳ ಅವಧಿಯಲ್ಲಿ ಅಮೆರಿಕ ಸೇನೆಯ ಏಳು C-17 ಮತ್ತು ಒಂದು C-130 ವಿಮಾನಗಳ ಮೂಲಕ ಸುಮಾರು 1700 ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಮಿತ್ರಪಡೆಗಳ 39 ವಿಮಾನಗಳ ಮೂಲಕ 3,400 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಅಮೆರಿಕವು ಆಗಸ್ಟ್ 14ರಿಂದ ಈವರೆಗೆ 30,300 ಮಂದಿಯನ್ನು ಸ್ಥಳಾಂತರಿಸಿದೆ. ಭದ್ರತಾ ಮತ್ತು ರಾಜತಾಂತ್ರಿಕ ಸಮಸ್ಯೆಯಲ್ಲಿ ಉಂಟಾದ ಅಡಚಣೆಯಿಂದಾಗಿ ಸ್ಥಳಾಂತರ ಪ್ರಕ್ರಿಯೆಯು ನಿಧಾನಗೊಂಡಿತ್ತು ಎಂದು ಅವರು ಮಾಹಿತಿ ನೀಡಿದರು.
ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಅಮೆರಿಕದ ಮಹಿಳೆಯೊಬ್ಬಳು ತಾಲಿಬಾನ್ ಅಟ್ಟಹಾಸಕ್ಕೆ ಹೆದರಿ ಅಮೆರಿಕಾದ ಸರ್ಕಾರದ ಸಹಾಯವನ್ನು ಯಾಚಿಸಿದ್ದಾಳೆಂದು ಅಲ್ಲಿನ ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ವಿಮಾನ ನಿಲ್ದಾಣಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾಗ ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲುತ್ತಿರುವ ದೃಶ್ಯವನ್ನು ಕಂಡು ಬೆದರಿದ ಮಹಿಳೆ ಬೈಡನ್ ಸರ್ಕಾರದ ಸಹಾಯವನನು ಕೇಳಿದ್ದು, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಉಪಟಳವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮನ್ನು ರಕ್ಷಿಸಿ ಎಂದು ಕೇಳಿದ್ದಾಳೆ.
ಇನ್ನು, ಕಾಬೂಲ್ ವಿಮಾನ ನಿಲ್ದಾಣದ ಬಳಿ ಆಕೆಯ ಪಕ್ಕದಲ್ಲೇ ಇದ್ದ ಒಬ್ಬ ವ್ಯಕ್ತಿಯನ್ನು ತಾಲಿಬಾನ್ ಉಗ್ರರು ಹೆಡ್ ಶಾಟ್ ಮಾಡಿ ಸಾರ್ವಜನಿಕವಾಗಿ ಕೊಂದದ್ದನ್ನು ನೋಡಿ ಅಮೆರಿಕಾ ಮೂಲದ ಮಹಿಳೆ ಹೆದರಿದ್ದಾರೆ. ಅಮೆರಿಕಾ ಸರ್ಕಾರದ ರಕ್ಷಣೆಗೆ ಮೊರೆ ಹೋಗಿರುವುದು ತಾಲಿಬಾನ್ ಉಗ್ರರ ಹಿಂಸಾಚಾರ ತಾರಕಕ್ಕೇರಿದೆ ಎನ್ನುವುದಕ್ಕೆ ಇದೇ ಸಾಕ್ಷಿಎಂದು ವರದಿ ತಿಳಿಸಿತ್ತು.
ವೆಸ್ಟ್ ವರ್ಜೀನಿಯಾ ಪ್ರತಿನಿಧಿ ಕರೋಲ್ ಮಿಲ್ಲರ್ ಅವರ ಕಚೇರಿಗೆ ಕಳುಹಿಸಿದ ಆಡಿಯೋ ರೆಕಾರ್ಡಿಂಗ್ ನಲ್ಲಿ, “ನನಗೆ ನನ್ನ ಕುಟುಂಬವನ್ನು, ನನ್ನ ಮಕ್ಕಳನ್ನು ಮತ್ತೆ ಕಾಣುತ್ತೇನೆ ಎನ್ನುವ ಭರವಸೆ ಇಲ್ಲ. ಜೀವ ಭಯ ಬಿಟ್ಟು ಉಸಿರಾಡುತ್ತಿದ್ದೇನೆ. ತಾಲಿಬಾನ್ ಉಗ್ರರೇ ತುಂಬಿರುವ ವಾಹನಗಳು ರಸ್ತೆ ತುಂಬೆಲ್ಲಾ ಹಾದು ಹೋಗುತ್ತಿರುವಾಗ ಈ ಕ್ಷಣವೋ, ಮರು ಕ್ಷಣವೋ ನಮ್ಮನ್ನು ಸಾರ್ವಜನಿಕವಾಗಿ ಕೊಂದು ಹೋಗುತ್ತಾರೆ ಎಂಬ ಭಯವಾಗುತ್ತಿದೆ” ಎಂದು ಹೇಳಿರುವುದನ್ನು, ಕರೋಲ್ ಮಿಲ್ಲರ್ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ : ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಏಕೆ ಎನ್ನುವುದು ಈಗ ತಿಳಿಯುತ್ತಿದೆ: ಹರ್ದೀಪ್ ಸಿಂಗ್ ಪುರಿ