ಎಚ್.ಡಿ.ಕೋಟೆ : ಬೇಸಿಗೆಯ ಬಿಸಿಲಿನ ತಾಪಮಾನಕ್ಕೆ ತಾಲೂಕಿನ ಹೆಸರಾಂತ ಕಬಿನಿ ಜಲಾಶಯದಲ್ಲಿ ಶೇಖರಣೆಯಾಗಿದ್ದ ನೀರು ದಿನದಿಂದ ದಿನಕ್ಕೆ ಇಳಿಕೆಯಾಗ ಲಾ ರಂಭಿಸಿ ಬರಿದಾಗ ತೊಡಗಿದೆ ಜಲಾಶಯದ ನೀರಿನ ಪ್ರಮಾಣ.
ಜಲಾಶಯದ ಗರಿಷ್ಠ ನೀರಿನ ಪ್ರಮಾಣ 2284 ಅಡಿಗಳು, ಶುಕ್ರ ವಾರ ಜಲಾಶಯದಲ್ಲಿ 2259.60 ಅಡಿ ಗಳಿತ್ತು. ಕಳೆದ ಸಾಲಿನ ಇದೇ ತಿಂಗಳ ಅಂತ್ಯದಲ್ಲಿ 2268.73 ಅಡಿಗಳಿತ್ತು. ಕಳೆದ ಸಾಲಿಗೂ ಈ ಸಾಲಿಗೂ ಹೋಲಿಕೆ ಮಾಡಿದಾಗ ಬೇಸಿಗೆ ಆರಂಭ ಗೊಳ್ಳುತ್ತಿದ್ದಂ ತೆಯೇ ಜಲಾಶಯದಲ್ಲಿ ಸುಮಾರು 10 ಸಾವಿರ ಕ್ಯೂಸೆಕ್ ನೀರು ಇಳಿಕೆಯಾಗಿದೆ.
ಕಳೆದ 1 ವಾರದ ಹಿಂದಿನಿಂದ ಬೇಸಿಗೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿರುವುದೇ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆ ಯಾ ಗಲು ಪ್ರಮುಖ ಕಾರಣವಾಗಿದೆ. ಕೇರಳ ರಾಜ್ಯದ ವೈನಾಡಿನಲ್ಲಿ ಮಳೆಯಾದರೆ ಮಾತ್ರ ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಲಿದ್ದು, ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವು ಶುಕ್ರವಾರ ಕೇವಲ 62 ಕ್ಯೂಸೆಕ್ ಇತ್ತು.
ಕುಡಿಯುವ ನೀರಿನ ಸಮಸ್ಯೆ ಸರಿದೂಗಿಸಲು ಜಲಾಶಯದ 4 ಕ್ರಸ್ಟ್ ಗೇಟ್‌ಗಳನ್ನು ಬಂದ್ ಮಾಡಲಾಗಿದೆ ಯಾದರೂ ಪವರ್ ಹೌಸ್ ಮೂಲಕ 1 ಸಾವಿರ ಕ್ಯೂಸೆಕ್ ನೀರು ಪ್ರತಿದಿನ ಹೊರ ಹರಿಯಬಿಡಲಾಗುತ್ತಿದೆ. ಜಲಾಶಯದಿಂದ ಹೊರಹರಿಯುವ ನೀರು ಮೈಸೂರು, ಗುಂಡ್ಲಪೇಟೆ ಚಾಮರಾಜನಗರ ಹಾಗೂ ಬೆಂಗಳೂರು ಕಡೆಗಳಿಗೆ ಆ ಸಾಗಿ ನದಿ ಪಾತ್ರದಲ್ಲಿ ಬರುವ ಗ್ರಾಮಗಳು ತಾಲೂಕು ಹಾಗೂ ಜಿಲ್ಲೆ ಸೇರಿದಂತೆ ರಾಜ್ಯದ ಜನರ ಕುಡಿಯುವ ನೀರಿನ ಭವಣೆ ತಪ್ಪಿಸುತ್ತಿದೆ.
ಬೇಸೆಗೆ ಕೊನೆಯಾಗಲು ಇನ್ನೂ 2ತಿಂಗಳ ಬಾಕಿ ಉಳಿದಿದ್ದು, ಬೇಸಿಗೆ ತಾಪಮಾನ ಹೆಚ್ಚಾದಂತೆ ನೀರಿನ ಶೇಖರಣೆ ಕೂಡ ಇಳಿಮುಖವಾಗಲಿದೆ.
-ಎಚ್.ಬಿ.ಬಸವರಾಜು