Advertisement
ಕೇಂದ್ರ ಸರಕಾರದಿಂದ ಈ ಕಾಮಗಾರಿಗೆ 1.75 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದರ್ಶ ರೈಲ್ವೇ ನಿಲ್ದಾಣವಾಗಿ ಅಭಿವೃದ್ಧಿಗೊಂಡಿರುವ ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ 2ನೇ ಪ್ಲಾಟ್‌ಫಾರಂ ಅಭಿವೃದ್ಧಿಪಡಿಸುವಂತೆ ಪುತ್ತೂರು ರೈಲ್ವೇ ಯಾತ್ರಿಕರ ಸಂಘ, ಕುಕ್ಕೆ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ಬಳಕೆದಾರರ ಸಂಘಗಳು ಸೇರಿದಂತೆ ರೈಲ್ವೇ ಹೋರಾಟಗಾರರು ಒತ್ತಾಯ ಮಾಡುತ್ತಲೇ ಬಂದಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಕೇಂದ್ರ ರೈಲ್ವೇ ಸಚಿವರ ಮೇಲೆ ಒತ್ತಡ ತಂದು ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದನೇ ಪ್ಲಾಟ್‌ಫಾರಂಗೆ ಸಮಾನಾಂತರವಾಗಿ 700 ಮೀ. ಉದ್ದಕ್ಕೆ ಎರಡನೇ ಪ್ಲಾಟ್‌ಫಾರಂ ಅಭಿವೃದ್ಧಿಗೊಳ್ಳುತ್ತಿದೆ. ಕಾಮಗಾರಿಗೆ ಲಾರಿಗಳಲ್ಲಿ ಮಣ್ಣನ್ನು ತಂದು ಹಾಕಲಾಗುತ್ತಿದೆ. ಪ್ಲಾಟ್‌ಫಾರಂನಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ಸಹಿತ ಕಾಂಕ್ರೀಟ್ ಮತ್ತು ಇಂಟರ್‌ಲಾಕ್‌ಗಳನ್ನು ಹಾಕಿ ಅಭಿವೃದ್ಧಿ ಪಡಿಸಲಾಗುತ್ತದೆ. ಒಂದನೇ ಪ್ಲಾಟ್‌ಫಾರಂನಷ್ಟೇ ಎತ್ತರದಲ್ಲಿ ಎರಡನೇ ಪ್ಲಾಟ್‌ಫಾರಂ ಅಭಿವೃದ್ಧಿಯಾಗುತ್ತಿದೆ. ವರ್ಷಾಂತ್ಯಕ್ಕೆ ಪೂರ್ಣ
ಆದರ್ಶ ರೈಲ್ವೇ ನಿಲ್ದಾಣ ಮುಂದುವರೆದ ಭಾಗವಾಗಿ ಎರಡನೇ ಪ್ಲಾಟ್ ಫಾರಂ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಕಾಮಗಾರಿ ಮುಗಿಸಲು 6 ತಿಂಗಳ ಅವಧಿ ನಿಗದಿಪಡಿಸಲಾಗಿದೆ. ಮಳೆಗಾಲದಲ್ಲಿ ಕೆಲಸ ನಡೆಸಲು ಸಾಧ್ಯವಾಗದ್ದರಿಂದ ಮಳೆಗಾಲ ಮುಗಿದ ಬಳಿಕ ಕೆಲಸ ನಡೆಸಲಾಗುತ್ತದೆ. ಈ ವರ್ಷಾಂತ್ಯಕ್ಕೆ ಕೆಲಸ ಪೂರ್ಣವಾಗುತ್ತದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಕೇಂದ್ರ ಸರಕಾರದಿಂದ ಕಬಕ ಪುತ್ತೂರು ರೈಲ್ವೇ ನಿಲ್ದಾಣವನ್ನು ಆದರ್ಶ ರೈಲ್ವೇ ನಿಲ್ದಾಣವಾಗಿ ಪರಿಗಣಿಸಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಈಗ ಎರಡನೇ ಪ್ಲಾಟ್ ಫಾರಂ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಶೀಘ್ರ ಮುಕ್ತಾಯಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನ ಬಹಳಷ್ಟಿದೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು
Advertisement
ರಾಜೇಶ್ ಪಟ್ಟೆ