Advertisement

ಒಲಿಂಪಿಕ್ಸ್‌ಗೆ ಕಬಡ್ಡಿಸೇರ್ಪಡೆ: ರಿಜಿಜು

01:27 AM Apr 28, 2020 | Sriram |

ಹೊಸದಿಲ್ಲಿ: ಕಬಡ್ಡಿ ಆಟ ಭಾರತ ಮತ್ತು ಏಶ್ಯದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಬಹಳಷ್ಟು ಜನಪ್ರಿಯತೆ ಪಡೆಯು ತ್ತಿದೆ. ಜನಪ್ರಿಯ ಆಟವಾದ ಕಬಡ್ಡಿ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳ್ಳು ವುದು ಭಾರತದ ಕಟ್ಟಕಡೆಯ ಗುರಿ ಯಾಗಿದೆ ಎಂದು ಕೇಂದ್ರದ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

Advertisement

ಕಬಡ್ಡಿ ಸ್ಪರ್ಧೆಯನ್ನು ಈಗಾಗಲೇ ಏಶ್ಯನ್‌ ಗೇಮ್ಸ್‌ನಲ್ಲಿ ಸೇರ್ಪಡೆಗೊಳಿಸ ಲಾಗಿದೆ. ಇದೀಗ ಈ ಕ್ರೀಡೆಯನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಭಾರತ ಮಾತ್ರವಲ್ಲದೇ ಏಶ್ಯದ ಎಲ್ಲ ರಾಷ್ಟ್ರಗಳು ಜತೆಯಾಗಿ ಮುಂದೆ ಬರಬೇಕಾಗಿದೆ. ಇದುವೇ ನಮ್ಮ ಗುರಿ ಎಂದು ರಿಜಿಜು ತಿಳಿಸಿದ್ದಾರೆ.

ಈ ಗುರಿಯನ್ನು ಸಾಧಿಸಬೇಕಾದರೆ ನಾವು ಕಬಡ್ಡಿ ಆಟದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next