Advertisement

2036ರ ಒಲಿಂಪಿಕ್ಸ್‌ ಗೆ ಕಬಡ್ಡಿ , ಯೋಗ?

12:31 AM Jun 22, 2024 | Team Udayavani |

ಹೊಸದಿಲ್ಲಿ: 2036ರ ಒಲಿಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯಕ್ಕಾಗಿ ಬಿಡ್ಡಿಂಗ್‌ ನಡೆಸಲು ಭಾರತ ಸಿದ್ಧತೆ ನಡೆಸು ತ್ತಿದೆ. ಇದರ ಜತೆಗೆ ಭಾರತದ ಮಣ್ಣಿನ ಕ್ರೀಡೆಯಾದ ಕಬಡ್ಡಿ, ಖೋಖೋ, ಚೆಸ್‌, ಸ್ಕ್ವಾಶ್‌, ಟಿ20 ಕ್ರಿಕೆಟ್‌ ಜತೆಗೆ ಯೋಗವನ್ನೂ ಸೇರ್ಪಡೆಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಿಷನ್‌ ಒಲಿಂಪಿಕ್‌ ಸೆಲ್‌ (ಎಂಒಸಿ) ಈಗಾಗಲೇ ನೂತನ ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಾ ಅವರಿಗೆ ವರದಿ ಸಲ್ಲಿಸಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಒಸಿ ಅಧಿಕಾರಿಗಳು, “ನಾವು ಕ್ರೀಡಾ ಸಚಿವರನ್ನು ಭೇಟಿಯಾಗಿ ವರದಿಯನ್ನು ನೀಡಿದ್ದೇವೆ. ವರದಿ ಪರಿಶೀಲಿಸಲು ಸಚಿವರಿಗೆ ಕೆಲವು ದಿನ ಬೇಕಾಗ ಬಹುದು. 2036ರ ಒಲಿಂಪಿಕ್ಸ್‌ ಆತಿಥ್ಯದ ಬಿಡ್ಡಿಂಗ್‌ಗಾಗಿಯೂ ನಾವು ತಯಾರಿ ನಡೆಸುತ್ತಿದ್ದೇವೆ’ ಎಂದಿದ್ದಾರೆ.

2036ರ ಒಲಿಂಪಿಕ್ಸ್‌ ಆತಿಥ್ಯ ಭಾರತಕ್ಕೆ ಲಭಿಸಿದರೆ, ಹೊಸದಾಗಿ ಒಲಿಂಪಿಕ್ಸ್‌ಗೆ ಸೇರಿಸಲು ಬಯಸುವ ಸ್ಪರ್ಧೆಗಳನ್ನು ಮೊದಲು 2032ರ ಬ್ರಿಸ್ಬೇನ್‌ ಒಲಿಂಪಿಕ್ಸ್‌ ನಲ್ಲಿ ಪ್ರದರ್ಶನಾ ಸ್ಪರ್ಧೆಯಾಗಿ ಪರಿಚಯಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next