Advertisement

ಕಬಡ್ಡಿ: ಮುಂಬೈ ತಂಡಕ್ಕೆ ಶಶಾಂಕ್‌ ವಾಂಖೇಡೆ ನಾಯಕ

03:12 AM May 11, 2019 | Team Udayavani |

ಮುಂಬಯಿ: ಇಂಡೋ ಇಂಟರ್‌ನ್ಯಾಶನಲ್ ಪ್ರೀಮಿಯರ್‌ ಕಬಡ್ಡಿ ಲೀಗ್‌ (ಐಪಿಕೆಎಲ್) ಕೂಟದ ಆರಂಭಿಕ ಆವೃತ್ತಿಯಲ್ಲಿ ‘ಮುಂಬೈ ಚೆ ರಾಜೆ’ ತಂಡದ ನಾಯಕತ್ವವನ್ನು ರೈಡರ್‌ ಶಶಾಂಕ್‌ ವಾಂಖೇಡೆ ಅವರಿಗೆ ವಹಿಸಲಾಗಿದೆ. ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಪ್ರಕಟಿಸಲಾಯಿತು.

Advertisement

ಪ್ರಕಾಶ್‌ ಸಾಲುಂಖೆ ಮತ್ತು ಸ್ನೇಹಾ ಕರ್ನಾಲೆ ಅವರು ಮುಂಬೈ ತಂಡದ ಪ್ರಧಾನ ಕೋಚ್ ಆಗಿರುತ್ತಾರೆ.

ರಶೀದ್‌ ಶೇಖ್‌, ದೇವೇಂದ್ರ ಕದಂ ಮೊದಲಾದ ಸ್ಟಾರ್‌ ಆಟಗಾರರು ಮುಂಬೈ ತಂಡದಲ್ಲಿದ್ದಾರೆ. ಆದರೆ ವೀಸಾ ಸಮಸ್ಯೆಯಿಂದ ಯಾವುದೇ ಪಾಕಿಸ್ಥಾನಿ ಆಟಗಾರರು ತಮ್ಮ ತಂಡದಲ್ಲಿ ಆಡುವುದಿಲ್ಲ ಎಂದು ಮುಂಬೈ ತಂಡದ ಸಹ ಮಾಲಕ ಸಂಜಯ್‌ ಸೆಲುಕರ್‌ ಹೇಳಿದರು.

ಈ ಪಂದ್ಯಾವಳಿ ಮೇ 13ರಿಂದ ಜೂ. 4ರ ತನಕ ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next